Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟಿ. ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಲು ವಾಲ್ಮೀಕಿ ಸಮುದಾಯದಿಂದ ಒತ್ತಾಯ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ಹಿರಿಯೂರು ತಾಲ್ಲೂಕು ವಾಲ್ಮೀಕಿ ಸಮುದಾಯ ಹಾಗೂ ವಿವಿಧ ಪ್ರಮುಖರು ಜಂಟಿಯಾಗಿ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ದೇಶನದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಗಳಾಗಲಿದ್ದಾರೆ. ಈ ನೂತನ ಸಚಿವ ಸಂಪುಟದಲ್ಲಿ ಶಾಸಕ ಟಿ. ರಘುಮೂರ್ತಿ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.

ಮೂರು ಬಾರಿ ಶಾಸಕರಾದ ಅರ್ಹತೆ:
ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 2.50 ಲಕ್ಷ ವಾಲ್ಮೀಕಿ ಸಮುದಾಯದ ಜನಸಂಖ್ಯೆಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಸಮುದಾಯವು ಅಪಾರ ಸಹಕಾರ ನೀಡಿದೆ. ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಟಿ. ರಘುಮೂರ್ತಿ ಅವರು ಬಡವರ ಬಂಧುವಾಗಿದ್ದು
, ಯಾವುದೇ ಜಾತಿ, ಮತ ಭೇದವಿಲ್ಲದೆ ಎಲ್ಲರಿಗೂ ನಿರಂತರ ಸಹಾಯ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗಲೇಬೇಕು ಎಂದು ನಾಯಕರು ಪ್ರತಿಪಾದಿಸಿದ್ದಾರೆ.

ಒತ್ತಾಯಿಸಿದ ಪ್ರಮುಖರು:
ಚಿತ್ರದುರ್ಗ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರು ಹಾಗೂ ಕಾಂಗ್ರೆಸ್ ಮುಖಂಡರಾದ ಮಂಜುನಾಥ ನಂಜಯ್ಯನಕೊಟ್ಟಿಗೆ
, ಮುಖಂಡರಾದ ಮಂಜುನಾಥ ಮಾಳಿಗೆ, ಶ್ರೀನಿವಾಸ ಮಸ್ಕಲ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಂಜಿನಪ್ಪ, ಯಲ್ಲದಕರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕಣುಮಪ್ಪ, ಎಸ್.ಟಿ. ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಸೊಂಡೇಕೆರೆ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಚಿದಾನಂದಸ್ವಾಮಿ, ನಿವೃತ್ತ ಎಲ್.ಡಿ.ಓ. ಮಲ್ಲನಾಯಕ,

ಮುಖಂಡರಾದ ರಮೇಶ್ ನಾಗೇನಹಳ್ಳಿ, ತಿಪ್ಪೇರುದ್ರಣ್ಣ, ಈಶ್ವರಪ್ಪ ಖಂಡೇನಹಳ್ಳಿ, ಹಿರಿಯೂರಿನ ನಿವೃತ್ತ ಬಿ.ಇ.ಓ. ಜೋಗಪ್ಪ, ಹಿರಿಯೂರು ವಾಣಿ ಕಾಲೇಜು ಸದಸ್ಯ ಎಸ್. ಲೋಕೇಶ್, ವಕೀಲರಾದ ಲೋಕೇಶ್, ಮಿಲ್ಕ್ ತಿಪ್ಪೇಸ್ವಾಮಿ, ಶ್ರೀಧರ್, ಶರತ್, ಭಾನುಪ್ರಕಾಶ್ ಹಾಗೂ ಯುವ ಕಾಂಗ್ರೆಸ್‌ನ ಮಂಜುನಾಥ್ ಸೇರಿದಂತೆ ವಾಲ್ಮೀಕಿ ಸಮುದಾಯದ ಹಲವು ಮುಖಂಡರು ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಪ್ರಬಲವಾಗಿ ಒತ್ತಾಯಿಸಿದ್ದಾರೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಮಾಜಸೇವಕ ಕೆ.ಆರ್. ಶಿವಪ್ರಕಾಶ್ ಸ್ಮರಣೋತ್ಸವ: ಅಧಿಕಾರ ವ್ಯಾಮೋಹವಿಲ್ಲದ ಸರಳ ಸಜ್ಜನಿಕೆಯ ಧೀಮಂತ ವ್ಯಕ್ತಿತ್ವಪತ್ರಕರ್ತರಿಗೂ ಸಾಮಾಜಿಕ ಜವಾಬ್ದಾರಿ ಇದೆ: ಬೊಮ್ಮಾಯಿಜಾಗತಿಕ ತಾಪಮಾನಕ್ಕೆ ಬ್ರೇಕ್ ಹಾಕಲು ಮಕ್ಕಳಿಂದ ಶ್ಲಾಘನೀಯ ಕಾರ್ಯ: 1000 ಬೀಜದ ಉಂಡೆಗಳ ವಿತರಣೆ!ಉಪ್ಪಾರ ಸಮಾಜದ ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ನೀಡಿಹಿರಿಯೂರು ಉಪ ಚುನಾವಣೆಗೆ ಜೆಡಿಯು ನಿಂದ ಅಭ್ಯರ್ಥಿ ಕಣಕ್ಕೆಕುರುಬ ಸಮಾಜಕ್ಕೆ ಕನಿಷ್ಠ 5 ಮಂದಿಗೆ ಸಚಿವ ನೀಡಿಭೀಕರ ಸರಣಿ ಅಪಘಾತ: ಆಟೋಗೆ ಗುದ್ದಿದ ಥಾರ್‌ಕಾರ್‌; ಐವರ ದಾರುಣ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯಸಂಪುಟ ರಚನೆ: ಹೈಕಮಾಂಡ್‌ಗೆ ತಲುಪದ ಸಿಎಂ ಪ್ರಸ್ತಾವನೆ; ಜೂನ್ 3ರ ನಂತರ ನಿರ್ಧಾರ ಎಂದ ಖರ್ಗೆಕೈ ಸಂಪುಟ ಸರ್ಕಸ್: '11:11:11' ಸೂತ್ರದೊಂದಿಗೆ ಡಿಕೆಶಿ ಕ್ಯಾಬಿನೆಟ್ ರಚನೆಗೆ ಹೈಕಮಾಂಡ್ ಮುಂದು; ಡಿಸಿಎಂ ಹುದ್ದೆ ಇಲ್ಲ!"ಜನರ ಸೇವೆಗೆ ನಾವು ಬದ್ಧ" - ಡಿಕೆಶಿ ವಿನಮ್ರ ಪೋಸ್ಟ್