Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಪಾರ ಜ್ಞಾನಿಗಳಾದ ದೇವೇಗೌಡರ ಜೊತೆ ಮಾತನಾಡಿದರೆ ಗ್ರಂಥಾಲಯವನ್ನೇ ಜೀರ್ಣಿಸಿಕೊಂಡತೆ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮುಂಜಾನೆ ನವದೆಹಲಿಗೆ ಪ್ರಯಾಣ ಮಾಡುತ್ತಿದ್ದ ವೇಳೆಯಲ್ಲಿ ವಿಮಾನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜೊತೆ ಕೆಲ ಸಮಯ ಕಳೆಯುವ ಅವಕಾಶ ದೊರೆಯಿತು ಎಂದು ಸಂಸದ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

ಉತ್ತಮ ಜ್ಞಾನಿಗಳ ಜೊತೆ ಮಾತನಾಡಿದರೆ ಒಂದು ಪುಸ್ತಕ ಓದಿದಂತೆ ಎಂಬ ಮಾತಿದೆ. ಆದರೆ ಸನ್ಮಾನ್ಯ ದೇವೇಗೌಡರಂತಹ ಸುದೀರ್ಘ ಅನುಭವ, ಅಪಾರ ಜ್ಞಾನವಿರುವ ವ್ಯಕ್ತಿಯ ಜೊತೆ ಮಾತನಾಡಿದರೆ ಒಂದು ಗ್ರಂಥಾಲಯವನ್ನೇ ಜೀರ್ಣಿಸಿಕೊಂಡತೆ ಎಂದರೆ ಅದು ಅತಿಶಯೋಕ್ತಿ ಆಗಲಾರದು ಎಂದು ಅವರು ತಿಳಿಸಿದ್ದಾರೆ.

ಆಧ್ಯಾತ್ಮಿಕ ಪುಸ್ತಕವೊಂದನ್ನು ಓದುತ್ತಿದ್ದ ಅವರನ್ನ ನಿಧಾನವಾಗಿ ಮಾತಿಗೆ ಎಳೆದಾಗ ಅವರ ಸ್ಮೃತಿ ಪಟಲದಿಂದ ಜ್ಞಾನಗಂಗೆಯೇ ಹರಿಯಿತು. 1962ರಿಂದ ಇಂದಿನವರೆಗೂ ಸುಮಾರು 6 ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಬದುಕಿನಲ್ಲಿ ಅವರು ನಡೆದು ಬಂದ ದಾರಿ, ಕಂಡ ಏಳು-ಬೀಳುಗಳು, ಅವರ ಅನುಭವಕ್ಕೆ ಬಂದ ವ್ಯಕ್ತಿತ್ವಗಳು, ಮರೆಯಲಾಗದ ಘಟನೆಗಳು ಇವೆಲ್ಲವನ್ನೂ ಕೇಳುತ್ತಾ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ. ದೇವರಾಜು ಅರಸು ಅವರು ಕರ್ನಾಟಕ ಕಂಡಂತಹ ಅತ್ಯಂತ ಶ್ರೇಷ್ಠ ಮುಖ್ಯಮಂತ್ರಿ ಎಂದು ಅವರು ಬಣ್ಣಿಸಿದ್ದು ಅರಸು ಅವರ ಬಗ್ಗೆ ಇನ್ನಷ್ಟು ಓದಿ, ಕೇಳಿ ತಿಳಿಯುವ ಕುತೂಹಲ ಮೂಡಿಸಿತು ಎಂದು ಸುಧಾಕರ್ ತಿಳಿಸಿದ್ದಾರೆ.

ನೀರಾವರಿ ಬಗ್ಗೆ ನನ್ನ ಪ್ರಶ್ನೆಗಳಿಗೆ ಅವರು ಉತ್ತರಿಸಿದ ರೀತಿಯಂತೂ ನನ್ನನ್ನ ಮಂತ್ರ ಮುಗ್ಧಗೊಳಿಸಿತು. 1969ರ ಬಚಾವತ್ ಆಯೋಗದ ವರದಿಯಿಂದ ಹಿಡಿದು ಅನೇಕ ವಿಚಾರಗಳನ್ನು ಹಲವು ಆಯಾಮಗಳಿಂದ ಎಳೆಎಳೆಯಾಗಿ ಬಿಡಿಸಿ ವಿವರಿಸಿದ ಅವರ ಜ್ಞಾಪಕ ಶಕ್ತಿ, ವಿಷಯಾಸಕ್ತಿ, ಈ ಇಳಿ ವಯಸ್ಸಿನಲ್ಲೂ ನಾಡಿನ ರೈತರು, ಜನಸಾಮಾನ್ಯರ ಬಗ್ಗೆ ಅವರಿಗಿರುವ ಕಾಳಜಿ, ಬದ್ಧತೆ ನಿಜಕ್ಕೂ ಅನುಕರಣೀಯ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಹಾಗೂ ನೀರಾವರಿ ಯೋಜನೆ ತರುವ ನನ್ನ ಹೆಬ್ಬಯಕೆಯನ್ನು ಹಂಚಿಕೊಂಡಾಗ ಸನ್ಮಾನ್ಯ ದೇವೇಗೌಡರು ಅನೇಕ ಸಲಹೆಗಳನ್ನು ನೀಡಿದರು. ಬಯಲುಸೀಮೆ ಭಾಗದ ರೈತಾಪಿ ವರ್ಗ ಹಾಗೂ ಜನಸಾಮಾನ್ಯರ ಈ ಬಹುಕಾಲದ ಬೇಡಿಕೆಯನ್ನು ಸಾಕಾರಗೊಳಿಸಲು ಅವರ ಬೆಂಬಲ, ಮಾರ್ಗದರ್ಶನ ಕೋರಿ ಆಶೀರ್ವಾದ ಪಡೆದೆ.

ವಿಮಾನ ಪ್ರಯಾಣದ ವೇಳೆ ನನ್ನ ಪ್ರಶ್ನೆಗಳಿಗೆ, ಕುತೂಹಲಗಳಿಗೆ ಕೊಂಚವೂ ಬೇಸರ ಮಾಡಿಕೊಳ್ಳದೆ ಅತ್ಯಂತ ಪ್ರೀತಿ, ವಿಶ್ವಾಸದಿಂದ ಉತ್ತರಿಸಿ ತಮ್ಮ ಅನುಭವ, ಜ್ಞಾನವನ್ನ ಹಂಚಿಕೊಂಡ ಹಿರಿಯರಾದ ದೇವೇಗೌಡರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ತಮ್ಮಂತಹ ಮುತ್ಸದ್ಧಿಯನ್ನ ಪಡೆದ ನಮ್ಮ ಕನ್ನಡ ನಾಡು ನಿಜಕ್ಕೂ ಧನ್ಯ ಎಂದು ಡಾ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ