LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪೇಯಿಂಗ್‌ಗೆಸ್ಟ್ ಬಳಿ ಹೂತು ಹಾಕಲಾಗಿದ್ದ ಶಿಶುವಿನ ಮೃತ ದೇಹ ಪತ್ತೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ: 
ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಮುಂಬದಿಯಲ್ಲಿ ಪಕ್ಕದಲ್ಲಿ  ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹೆಗ್ಗಣ ಇಲಿಗಳು ತೋಡಿದ ಬಿಲದಲ್ಲಿ  ನವಜಾತ  ಶಿಶುವಿನ  ಮೃತದೇಹ ಹೂತು ಹಾಕಲಾಗಿದ್ದು ಹೆಗ್ಗಣ ಮಣ್ಣು ತೋಡಿ ಪರಿಣಾಮ ಶಿಶುವಿನ ಮೃತ ಅಸ್ಥಿ ಮೇಲಕ್ಕೆ ಬಂದಿದ್ದು, ವಿಷಯ ತಿಳಿಯುತ್ತಿದ್ದಂತೆ ನಗರ ಪೊಲೀಸ್‌ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮುತ್ತುರಾಜ್ ಎಚ್ ಹಾಗೂ ಡಿವೈಎಸ್ಪಿ ಪಾಂಡುರಂಗ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಘಟನಾ ಸ್ಥಳದಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಲಾಗಿದೆ. ಯಾರೋ ಅಪರಿಚಿತರು ನವಜಾತ ಶಿಶುವಿನ ಮೃತದೇಹವನ್ನು ತಂದು ಅಲ್ಲೇ ಹೂತುಹಾಕಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸದ್ಯಶಿಶುವಿನ ತಾಯಿ ಯಾರು, ಯಾವ ಸಂದರ್ಭದಲ್ಲಿದು ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.

ಘಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ಸಹಾಯವಾಣಿ ಅಧಿಕಾರಿಗಳೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನಾ ಸ್ಥಳದ ಸಮೀಪವೇ ಪಿಜಿ (ಪೇಯಿಂಗ್‌ಗೆಸ್ಟ್) ವಸತಿ ಗೃಹಗಳಿರುವ ಹಿನ್ನೆಲೆಯಲ್ಲಿ ಆರೋಪಿಗಳ ಸುಳಿವು ಪತ್ತೆ ಹಚ್ಚುವ ಉದ್ದೇಶದಿಂದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಘಟನೆಯ ಕುರಿತು ಸಮಗ್ರ ತನಿಖೆ ಮುಂದುವರಿದಿದ್ದು, ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಕರಣ ದಾಖಲು ಮಾಡಿ ತನಿಖೆ ಪ್ರಾರಂಭಿಸಿಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನದಲ್ಲಿ ಜಾತಿ ಉಳಿದಿರುವವರೆಗೂ, ಜಾತ್ಯತೀತತೆ ಕೇವಲ ಮುಖವಾಡ ​ ಅಂತರಂಗದ ಬೇಸಾಯವೇ ಬದುಕಿನ ಸಾರ್ಥಕ ಬೆಳೆ*ಶಿಕ್ಷಕ-ರಕ್ಷಕ*ಆತ್ಮಹತ್ಯೆಗೆ ಶರಣಾದ ರೈತ ದಂಪತಿ ಮನೆಗೆ ಕುಮಾರಸ್ವಾಮಿ ಭೇಟಿ- ಸಾಂತ್ವನ, ಧೈರ್ಯ ತುಂಬಿದ ನಾಯಕಗೋಪೂಜೆ ಮತ್ತು ರಾಗಿಹುಲ್ಲು ವಿತರಣೆಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ದಿಗ್ವಿಜಯ್ ಸಿಂಗ್ ಭೇಟಿ:ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ ಅಧಿಕೃತವಾಗಿ ಉದ್ಘಾಟನೆ: ಎಂ.ಬಿ. ಪಾಟೀಲ್ ಹರ್ಷ​‘ಕಾಂಗ್ರೆಸ್‌ನ 6ನೇ ಗ್ಯಾರೆಂಟಿ ಅಂದರೆ ಕೃಷಿ ಕಾರ್ಮಿಕರಿಗೆ ಗುಳೆ ಗ್ಯಾರೆಂಟಿ’: ಆರ್‌. ಅಶೋಕ್ ತೀವ್ರ ವಾಗ್ದಾಳಿ!ಕಾಂಗ್ರೆಸ್ ಸರ್ಕಾರ ‘ಮನೆಗೆ ಮಾರಿ, ಪರರಿಗೆ ಉಪಕಾರಿ’: ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆತಮಿಳುನಾಡಿಗೆ ಕಾವೇರಿ ನೀರು ಹರಿಸಲು ಪ್ರಾಧಿಕಾರದ ಆದೇಶ: ರಾಜ್ಯದ ಹಿತ ಕಾಯುವಲ್ಲಿ ಕಾಂಗ್ರೆಸ್‌ಸರ್ಕಾರ ವಿಫಲ - ಸಿ.ಟಿ. ರವಿ ಆಕ್ರೋಶ