Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಂತಿಮ ದರ್ಶನ ಪಡೆದ ಗಣ್ಯರು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅವರ ಸ್ವಗೃಹದಲ್ಲಿ ಹಿರಿಯ ನಟಿ ಬಿ.ಸರೋಜಾ ದೇವಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಎಲ್ಲ ಭಾಷೆಯ ಸಿನಿಮಾಗಳಲ್ಲಿ ಸರೋಜಾದೇವಿ ಅವರು ನಟಿಸಿದ್ದಾರೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದರು.



160ಕ್ಕೂ ಹೆಚ್ಚಿನ ಸಿನಿಮಾದಲ್ಲಿ ಹಿರೋಯಿನ್ ಆಗಿ ನಟಿಸೋದು ಸಾಮಾನ್ಯ ಮಾತಲ್ಲ. ಅವರ ಜೊತೆ ನಾನು ನಟಿಸದೇ ಹೋದ್ರೂ ಸಾಕಷ್ಟು ಬಾರಿ ಮಾತನಾಡಿದ್ದೆ. ಯಾವಾಗ ಸಿಕ್ರೂ ಆತ್ಮೀಯವಾಗಿ ಮಾತನಾಡುತ್ತಿದ್ದರು. ನನಗೆ ಅವಾರ್ಡ್ ಸಿಕ್ಕಾಗ ಕರೆ ಮಾಡಿ ಮಾತನಾಡಿದ್ರು. ಗಂಭೀರವಾಗಿ ತುಂಬು ಜೀವನ ನಡೆಸಿದ್ದಾರೆ. ಅದ್ಬುತ ನಟಿ ಅವರು. ಅವರ ಅಗಲಿಕೆ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಟ ಪ್ರಕಾಶ್ ರಾಜ್ ಹೇಳಿದರು.


ಕೋವಿಡ್ ವೇಳೆ ಧನಸಹಾಯ ನೀಡಿದ್ದ ಸರೋಜಾದೇವಿ:
ನಟಿ ಸರೋಜಾದೇವಿ ಅವರು ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿ ನಟರಿಗೆ ಸಾಕಷ್ಟು ಕೆಲಸ ಮಾಡಿದ್ರು. ಕೋವಿಡ್ ಸಮಯದಲ್ಲಿ ಅವರೇ ಕರೆ ಮಾಡಿ ಸಂಗೀತಕಾರರಿಗೆ ಏನಾದ್ರೂ ಸಹಾಯ ಬೇಕಾ ಅಂತಾ ಕೇಳಿದ್ರು.
2 ಲಕ್ಷ ರೂ. ಹಣ ಕೊಟ್ಟಿದ್ರು. ಆದ್ರೆ ಯಾರಿಗೂ ಹೇಳಿರಲಿಲ್ಲ ಎಂದು ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಹೇಳಿದರು.


ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು‌ ಮಾಡಿದ್ದ ಅವರು ಯಾರಿಗೂ ಏನೂ ತೊಂದರೆ ಕೊಡದೇ ದೇವರ ಪಾದ ಸೇರಿದ್ದಾರೆ. ಹೀರೋಗಳು ಇವರೇ ಹಿರೋಯಿನ್​ ಬೇಕು ಅಂತಾ ಕಾಯುತ್ತಿದ್ದರು. ಮನೆಗೆ ಹಣ ಕಳಿಸಿ ಸಹಾಯ ಮಾಡಿದ್ರು. ಮೃದು ಹೃದಯದವರು. ಸಾಕಷ್ಟು ಜನರಿಗೆ ಸಹಾಯ ಮಾಡಿದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾಧು ಕೋಕಿಲ  ತಿಳಿಸಿದರು.

ಕಿತ್ತೂರು ರಾಣಿ ಚೆನ್ನಮ್ಮ:
ಸರೋಜಾದೇವಿ ಅವರು ಮನಸ್ಸಿಗೆ ಹಿಡಿಸುವಂತೆ ಅಭಿನಯಿಸುತ್ತಿದ್ದರು. ಹಲವಾರು ಭಾಷೆಯಲ್ಲಿ ಆತ್ಯಂತ ಯಶಸ್ವಿ ಕಂಡಿರುವ ಸೂಪರ್ ಸ್ಟಾರ್ ನಟಿ. ಅವರ ಬಹುತೇಕ ಸಿನಿಮಾಗಳು ಹಿಟ್ ಆಗಿದ್ದವು ಎಂದು ಮಾಜಿ ಸಿಎಂ
, ಸಂಸದ ಬಸವರಾಜು ಬೊಮ್ಮಾಯಿ ಹೇಳಿದರು.


ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದಲ್ಲಿ ನಿಜವಾದ ಚೆನ್ನಮ್ಮ ಹೀಗೆ ಇದ್ದರು ಅನ್ನೋ ಹಾಗೆ ನಟಿಸಿದ್ದರು. ಕಿತ್ತೂರು ಕಾರ್ಯಕ್ರಮಕ್ಕೆ ಬಂದಾಗ ಜನರೂ ಕೂಡಾ ಹಾಗೇ ಸ್ವಾಗತ ಮಾಡಿದ್ದರು. ಜಯಲಲಿತಾರ ಅತ್ಯಂತ ಆತ್ಮೀಯ ಸ್ನೇಹಿತರು. ಜಯಲಲಿತಾ ಕನ್ನಡ ಮಾತನಾಡಬೇಕು ಅಂದುಕೊಂಡಾಗ ಸರೋಜಾ ದೇವಿ ಕರೆಸಿಕೊಂಡು ಕನ್ನಡ ಮಾತನಾಡುತ್ತಿದ್ದೆ ಎಂದು ಹೇಳಿದ್ದರು. ಅವರ ಬದುಕಿನ ಜೀವಂತಿಕೆ ಕೊನೆಯುಸಿರುವವರೆಗೂ ಇರಲಿದೆ‌. ನಿಧನದಿಂದ ಎಲ್ಲರಿಗೂ ನೋವಾಗಿದೆ ಎಂದು ಬೊಮ್ಮಾಯಿ ಅವರು ಸಂತಾಪ ವ್ಯಕ್ತಪಡಿಸಿದರು.


ಅವರನ್ನು ನೋಡಿ‌ ಶಿಸ್ತು, ಮಾರ್ಯಾದೆ ಏನು ಅನ್ನೋದನ್ನು ಕಲಿಯಬೇಕು:
ಸರೋಜಾದೇವಿ ಅವರು ತುಂಬಾನೇ ಆತ್ಮೀಯರಾಗಿದ್ರು. ನೀನು ಗೌಡರನ್ನು ಮದುವೆಯಾಗಿ ಗೌಡ್ತಿ ಆಗಿದ್ದೀಯಾ ಅಂದಿದ್ರು. ಶಿಸ್ತು
, ಮಾರ್ಯಾದೆ ಏನೂ ಅನ್ನೋದನ್ನು ಅವರನ್ನು ನೋಡಿ‌ ಕಲಿಯಬೇಕು ಎಂದು ನಟಿ ಮಾಲಾಶ್ರೀ ಕಂಬನಿ ಮಿಡಿದರು.


ಸರೋಜಾದೇವಿ ಅವರು ನಮಗೆಲ್ಲ ಹೇಗಿರಬೇಕು ಎಂದು ಹೇಳಿಕೊಡುತ್ತಿದ್ದರು. ರಿಯಲ್ ಸೂಪರ್ ಸ್ಟಾರ್ ಅವರು. ಈ ವಯಸ್ಸಲ್ಲೂ ಅವರು ತುಂಬಾನೇ ಸುಂದರವಾಗಿ ಕಾಣುತ್ತಿದ್ದರು. ಪುಟ್ಮಲ್ಲಿ ಸಿನಿಮಾದಲ್ಲಿ ಅವರ ಜೊತೆ ನಟಿಸಿದ್ದೆ. ಅವರ ಸಿನಿಮಾಗಳೆಲ್ಲವೂ ನನಗಿಷ್ಟ. ಸ್ಟೈಲ್, ಯೂನಿಕ್ ಆ್ಯಕ್ಟಿಂಗ್​​ನಿಂದ ಅವರು ಫೇಮಸ್ ಎಂದು ನಟಿ ಮಾಲಾಶ್ರೀ ಸ್ಮರಿಸಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ