Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಸಾಗುವಳಿ ಚೀಟಿಗೆ ಒತ್ತಾಯಿಸಿ ಹೋರಾಟಕ್ಕೆ ಮುಂದಾದ ಭೂ ಹಕ್ಕುದಾರರ ವೇದಿಕೆ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಗ‌ರ್ ಹುಕ್ಕುಂ ಸಾಗುವಳಿ ಸಮಿತಿ ರಚನೆಯಾಗಿದ್ದು
, ಕಂದಾಯ ಸಚಿವರು, ನಮ್ಮ ಪರವಾಗಿ ಇದ್ದರು, ಸಾಗುವಳಿ ಸಮಿತಿಯು ನಿಗದಿತ ಸಮಯಕ್ಕೆ ಸಭೆಯನ್ನು ನಡೆಸದೆ ಮಾನ್ಯ ಶಾಸಕರು ಮತ್ತು ಅಧಿಕಾರಿಗಳು ಸಮಯವನ್ನು ಕಾಲಹರಣ ಮಾಡುತ್ತಿದ್ದಾರೆ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಜಿಲ್ಲಾ ಸಂಚಾಲಕರಾದ ನಾಗರತ್ನ ಆರೋಪಿಸಿದರು.

ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ನೆಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು ನಾವುಗಳು ನಮ್ಮ ಪೂರ್ವಿಕರ ಕಾಲದಿಂದಲೂ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದು, ಅಕ್ರಮ- ಸಕ್ರಮಕ್ಕಾಗಿ ಸರ್ಕಾರದ ಆದೇಶದಂತೆ ನಮೂನೆ 53 ಮತ್ತು 57 ರಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದೇವೆ.

ಆದರೆ ಸಾಗುವಳಿ ಚೀಟಿ ವಿತರಣೆಗೆ ಸಂಬಂಧಪಟ್ಟಂತೆ ಮಾನ್ಯ ಶಾಸಕರಿಗೂ ಅಧಿಕಾರಿಗಳಿಗೂ, ಎಷ್ಟೇ ಮನವಿ ಪತ್ರ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ, ನಮ್ಮ ಅರ್ಜಿಯ ಸ್ಥಿತಿ ಗತಿಯ ವಿವರಗಳು ನಮಗೆ ಯಾವುದೇ ಮಾಹಿತಿಯೂ ಸಿಗುತ್ತಿಲ್ಲ ಎಂದರು.

ಸಾಗುವಳಿ ಸಮಿತಿ ಸಭೆಯಲ್ಲಿ ಮಂಜೂರಾಗಿರುವ ರೈತರಿಗೆ ಸಾಗುವಳಿ ಚೀಟಿ ಮತ್ತು ಟಿ.ಟಿ ಕಟ್ಟುವವರಿಗೆ ನೋಟೀಸು ನೀಡಿಲ್ಲ. ಆದ ಕಾರಣನಮ್ಮ ಭೂಮಿ ನಮ್ಮ ಹಕ್ಕುಎಂಬ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.

ಹೋರಾಟದ ಬೇಡಿಕೆಗಳೇನು?

* ಬಗ‌ರ್ ಹುಕ್ಕುಂ ಸಮಿತಿಯ ಸಭೆಯನ್ನು ಮಾಡಿ ಬಾಕಿ ಇರುವ ಸಾಗುವಳಿ ಚೀಟಿಯನ್ನು ವಿತರಣೆ ಮಾಡುವುದು.

* ಕಂದಾಯ ಮತ್ತು ಅರಣ್ಯ ಇಲಾಖೆಯನ್ನು ಭೂಮಿಯನ್ನು ಜಂಟಿ ಸರ್ವೆ ಮಾಡುವುದು,* ಪಹಣಿಯಲ್ಲಿ ಪಿ. ಮತ್ತು ಸರ್ಕಾರಿ ಗೋಮಾಳ ಎಂಬ ಹೆಸರನ್ನು ತೆಗೆಯುವುದು.

* ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವನನ್ನು ಓಕ್ಕಲೆಬ್ಬಿಸದೇ ಸಾಗುವಳಿ ಚೀಟಿ ನೀಡತಕ್ಕದ್ದು.

* ಸಾಗುವಳಿ ಸಭೆಯಲ್ಲಿ ನಡೆದ ಮಾಹಿತಿಯನ್ನು ನೋಟೀಸ್ ಬೋರ್ಡಿಗೆ ಹಾಕುವುದು, ಮತ್ತು ಸಾಗುವಳಿ ಸಮಿತಿ ದಿನಾಂಕವನ್ನು ನೋಟೀಸ್ ಬೋರ್ಡಿಗೆ ಹಾಕುವುದು.

ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಭೂ ಹಕ್ಕುದಾರಿಕೆಯ ವೇದಿಕೆಯ ರಾಜ್ಯಾಧ್ಯಕ್ಷ ಎಸ್.ವಿ ನರಸಪ್ಪ, ಜಿಲ್ಲಾ ಸಂಚಾಲಕರಾದ ವಿ.ನಾಗರತ್ನ ಮತ್ತು ಬಗರ್ ಹುಕ್ಕುಂ ಸಾಗುವಳಿಯ ತಾಲ್ಲೂಕು ಸಂಚಾಲಕ ನಾರಾಯಣಸ್ವಾಮಿ ಹಾಗೂ ನಾಗಾನಾಯಕ್, ಪಿಳ್ಳಪ್ಪ ನರಸಿಂಹಯ್ಯ, ಹುಚ್ಚಹನುಮಯ್ಯ, ಹನುಮಂತರಾಯಪ್ಪ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು