Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೂತನ ಆದಾಯ ತೆರಿಗೆ ಕಾಯ್ದೆ ಏಪ್ರಿಲ್ 1ರಿಂದ ಜಾರಿ

Advertisement
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ನೂತನ ಆದಾಯ ತೆರಿಗೆ ಕಾಯ್ದೆ-2025 ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇದರ ನಿಯಮಗಳು ಮತ್ತು ತೆರಿಗೆ ಮರುಪಾವತಿ ಕುರಿತಾದ ಫಾರ್ಮ್‌ಗಳ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್​ ಭಾಷಣದಲ್ಲಿ ಘೋಷಿಸಿದರು.

 ಆರು ದಶಕಗಳಷ್ಟು ಹಳೆಯದಾದ ತೆರಿಗೆ ಕಾನೂನಿಗೆ ಬದಲಾವಣೆ ತರಲಾಗಿದೆ. 2026-27ರ ಬಜೆಟ್‌ನಲ್ಲಿ ತೆರಿಗೆ ನಿಯಮಗಳಿಗೆ ತಂದಿರುವ ಬದಲಾವಣೆಗಳನ್ನು ಈ ಹೊಸ ಕಾಯ್ದೆಯಲ್ಲಿ ಸೇರ್ಪಡೆಗೊಳಿಲಾಗುವುದು ಎಂದು ವಿತ್ತ ಸಚಿವರು ತಿಳಿಸಿದರು.

ನೇರ ತೆರಿಗೆ ಸಂಹಿತೆಯು ದಾಖಲೆಯ ಸಮಯದಲ್ಲಿ ಪೂರ್ಣಗೊಂಡಿದೆ. ಆದಾಯ ತೆರಿಗೆ ಕಾಯ್ದೆ-2025 ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. ಸರಳೀಕೃತ ಆದಾಯ ತೆರಿಗೆ ನಿಯಮಗಳು ಮತ್ತು ಫಾರ್ಮ್‌ಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು, ತೆರಿಗೆದಾರರು ಅದರ ಅವಶ್ಯಕತೆಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಕಷ್ಟು ಸಮಯ ಇರಲಿದೆ" ಎಂದು ಇದೇ ವೇಳೆ ಸಚಿವರು ತಿಳಿಸಿದರು. ಫಾರ್ಮ್‌ಗಳನ್ನು ಮರು ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ಸಾಮಾನ್ಯ ನಾಗರಿಕರು ಯಾವುದೇ ತೊಂದರೆಯಿಲ್ಲದೆ ಕಾಯ್ದೆಯನ್ನು ಅನುಸರಿಸಬಹುದು ಎಂದು ವಿವರಿಸಿದರು.


ತೆರಿಗೆಯಲ್ಲಿ ಬದಲಾವಣೆಯಿಲ್ಲ:
2025ರ ಐ-ಟಿ ಕಾನೂನು ಪ್ರಕಾರ, ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಅಲ್ಲದೆ, ಇದು ನೇರ ತೆರಿಗೆ ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಸರಳವಾಗಿದೆ. ಅಸ್ಪಷ್ಟತೆಗಳನ್ನು ತೆಗೆದುಹಾಕಲಾಗಿದ್ದು, ಇದರಿಂದಾಗಿ ಮೊಕದ್ದಮೆಗಳ ವ್ಯಾಪ್ತಿಯು ಕಡಿಮೆಯಾಗಲಿದೆ. ಅಲ್ಲದೆ, 1961ರ ಆದಾಯ ತೆರಿಗೆ ಕಾಯ್ದೆಗೆ ಹೋಲಿಸಿದರೆ, ಈಗ ತೆರಿಗೆ ಸೆಕ್ಷನ್​​ಗಳು ಸುಮಾರು ಶೇಕಡಾ 50ರಷ್ಟು ಕಡಿಮೆಯಾಗಿವೆ ಎಂದರು.


ಹೊಸ ಕಾನೂನು ಮೌಲ್ಯಮಾಪನ ವರ್ಷ ಮತ್ತು ಹಿಂದಿನ ವರ್ಷದ ನಡುವಿನ ವ್ಯತ್ಯಾಸವನ್ನು ತೆಗೆದುಹಾಕುವ ಮೂಲಕ ತೆರಿಗೆ ಸಮಯ ಸರಳಗೊಳಿಸಲಿದೆ. ಅದನ್ನು ಒಂದೇ ತೆರಿಗೆ ವರ್ಷ ಎಂಬ ಚೌಕಟ್ಟಿನೊಂದಿಗೆ ಬದಲಾಯಿಸಲಿದೆ. ಯಾವುದೇ ದಂಡ ಶುಲ್ಕಗಳಿಲ್ಲದೆ, ಗಡುವಿನ ನಂತರ ಐಟಿಆರ್‌ಸಲ್ಲಿಸಿದರೂ ಸಹ ತೆರಿಗೆದಾರರು ಟಿಡಿಎಸ್ ಮರುಪಾವತಿ ಪಡೆಯಲು ಅವಕಾಶವಿರಲಿದೆ.


ಇಂದಿನ ಬಜೆಟ್​ ಭಾಷಣದ ವೇಳೆ ಇದನ್ನು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ಸ್​ ಸಲ್ಲಿಸಲು ಡಿಸೆಂಬರ್​ 31 ರಿಂದ ಮಾರ್ಚ್​ 31ರವರೆಗೆ ಅವಕಾಶವಿರಲಿದೆ. ಉದಾರೀಕೃತ ರವಾನೆ ಯೋಜನೆಯಡಿ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಮುಂದುವರಿಸಲು ಟಿಸಿಎಸ್ ದರವನ್ನು ಶೇಕಡಾ 5 ರಿಂದ ಶೇಕಡಾ 2ಕ್ಕೆ ಇಳಿಸಲು ಸರ್ಕಾರ ಪ್ರಸ್ತಾಪಿಸಿದೆ ಎಂದು ಸಚಿವರು ತಿಳಿಸಿದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ