ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಿಸರ್ಗದ ನಾದ
ಹಸಿರು ಮರಗಳು ನಲಿಯುತ್ತಿವೆ,
ಬಣ್ಣಬಣ್ಣದ ಹೂಗಳು ಅರಳುತ್ತಿವೆ,
ಚಿಲಿಪಿಲಿ ಹಕ್ಕಿಗಳು ಹಾಡುತ್ತಿವೆ,
ಪ್ರಕೃತಿ ನಮ್ಮನ್ನು ಕರೆಯುತ್ತಿದೆ.
ತಂಪಾದ ಗಾಳಿ ಬೀಸುತ್ತಿದೆ,
ಸ್ವಚ್ಛ ನದಿಗಳು ಹರಿಯುತ್ತಿವೆ,
ಬೆಟ್ಟ-ಗುಡ್ಡಗಳು ತಲೆ ಎತ್ತಿ ನಿಂತಿವೆ,
ಭೂಮಿಯ ಸೌಂದರ್ಯವನ್ನು ಹೆಚ್ಚಿಸುತ್ತಿವೆ.
ಸೂರ್ಯನು ಹೊಂಬೆಳಕು ಚೆಲ್ಲುತ್ತಾನೆ,
ಮೋಡಗಳು ಜೀವಜಲ ಸುರಿಸುತ್ತವೆ,
ಪ್ರಕೃತಿ ನಮಗೆ ಜೀವಾಧಾರವಾಗಿದ್ದು,
ಎಲ್ಲರ ಬದುಕನ್ನು ಹಸನಾಗಿಸುತ್ತದೆ.
ಮರಗಳನ್ನು ನಾವೆಲ್ಲ ನೆಡೋಣ,
ನೀರನ್ನು ವ್ಯರ್ಥ ಮಾಡದಿರೋಣ,
ಪ್ರಕೃತಿಯನ್ನು ಪ್ರೀತಿಸಿ ಕಾಪಾಡೋಣ,
ಸುಂದರ ಭೂಮಿಯನ್ನು ಉಳಿಸೋಣ.
ನೀತಿ ಪಾಠದ ಕವಿತೆ: ಜೀವಿತ, 8ನೇ ತರಗತಿ, ಅನೇಕಮ್ ಶಾಲೆ, ಬೆಂಗಳೂರು.



