ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕುಟುಂಬದ ಮುಖ್ಯಸ್ಥರು ಅಥವಾ ಆಧಾರಸ್ತಂಭವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ 51 ಕುಟುಂಬಗಳಿಗೆ ರಾಜ್ಯ ಸರ್ಕಾರ ಬೆನ್ನೆಲುಬಾಗಿ ನಿಂತಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ಉಸ್ತುವಾರಿಯಲ್ಲಿ, ಸಂಕಷ್ಟದಲ್ಲಿರುವ 51 ಅರ್ಹ ಅಭ್ಯರ್ಥಿಗಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗಾವಕಾಶ ಒದಗಿಸಲಾಗಿದೆ.
ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ನೋವಿಗೆ ಸ್ಪಂದಿಸಿ, ಅವರ ಗೌರವಯುತ ಜೀವನಕ್ಕೆ ದಾರಿ ಮಾಡಿಕೊಡುವುದೇ ಜನಪರ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಈ ಅನುಕಂಪದ ನೇಮಕಾತಿ ಆದೇಶದ ಮೂಲಕ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಭದ್ರತೆ, ಆಸರೆ ಹಾಗೂ ನವ ಭರವಸೆಯನ್ನು ಕಲ್ಪಿಸಲಾಗಿದೆ.
ಏರೋಸ್ಪೇಸ್ – ರಕ್ಷಣಾ ವಲಯ ವಿಸ್ತರಣೆ: 'ಓಬರ್ಟ್ & ಡ್ಯುವಾಲ್' ಜೊತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಹತ್ವದ ಚರ್ಚೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉತ್ತರ ಕರ್ನಾಟಕ ಭಾಗವನ್ನು ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಫ್ರಾನ್ಸ್‌ನ ಜಾಗತಿಕ ಸಂಸ್ಥೆ 'ಓಬರ್ಟ್ & ಡ್ಯುವಾಲ್' ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಫ್ರೆಂಚ್ ಮೂಲದ ಪ್ರಮುಖ ಲೋಹವಸ್ತುಗಳ ತಯಾರಿಕಾ ಕಂಪನಿಯ ಸಿಎಫ್‌ಒ (CFO) ಪ್ಯಾಟ್ರಿಕ್ ರೆಮಿಲ್ ಅವರೊಂದಿಗೆ ಸಚಿವರು ಫಲಪ್ರದ ಮಾತುಕತೆ ನಡೆಸಿದರು. ಬೆಳಗಾವಿಯ 'ಏಕ್ವಸ್ ಏರೋಸ್ಪೇಸ್ ಎಸ್‌ಇಝಡ್' (Aequs Aerospace SEZ) ನಲ್ಲಿರುವ 'ಸ್ಕ್ವಾಡ್ ಫೋರ್ಜಿಂಗ್ ಇಂಡಿಯಾ' (SQuAD Forging India) ಮೂಲಕ ಸಂಸ್ಥೆಯು ಈಗಾಗಲೇ ಹೊಂದಿರುವ ಸಹಭಾಗಿತ್ವವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಚರ್ಚಿಸಲಾಯಿತು.
ಬೆಳಗಾವಿ ಹಬ್: ಬೆಳಗಾವಿಯಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ, ಉತ್ತರ ಕರ್ನಾಟಕವನ್ನು ದೇಶದ ಪ್ರಮುಖ ಏರೋಸ್ಪೇಸ್ ಕೇಂದ್ರವನ್ನಾಗಿ ರೂಪಿಸುವುದು.
ಉದ್ಯೋಗ ಸೃಷ್ಟಿ: ಉನ್ನತ ಮೌಲ್ಯವರ್ಧಿತ ಕೈಗಾರಿಕೆಗಳನ್ನು ತರುವ ಮೂಲಕ ಸ್ಥಳೀಯ ಯುವಕರಿಗೆ ಉತ್ತಮ ಗುಣಮಟ್ಟದ ಉದ್ಯೋಗಾವಕಾಶ ಕಲ್ಪಿಸುವುದು.
ರಕ್ಷಣಾ ರಂಗಕ್ಕೆ ಬಲ: ಭಾರತೀಯ ಏರೋಸ್ಪೇಸ್ ಮತ್ತು ರಕ್ಷಣಾ ಪೂರೈಕೆ ಸರಪಳಿಯಲ್ಲಿ ಕರ್ನಾಟಕದ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸುವುದು.




