Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೇಶವ ಮತ್ತು ಮಧುಮತಿಯ ಯಶೋಗಾಥೆ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಶವ ಮತ್ತು ಮಧುಮತಿಯ ಯಶೋಗಾಥೆ
ಇದು ಒಬ್ಬ ಬಡ ರೈತನಾದ ಕೇಶವ ಮತ್ತು ಅವನ ಪತ್ನಿ ಮಧುಮತಿ ಅವರ ಕಥೆ.

ಕೇಶವನಿಗೆ ಒಂದು ಚಿಕ್ಕ ತೋಟವಿತ್ತು. ಆ ತೋಟದಲ್ಲಿ ಮಾವಿನ ಮರ, ನಿಂಬೆ ಮರ ಮತ್ತು ಹುಣಸೆ ಮರಗಳಿದ್ದವು. ಆದರೆ ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಆದ್ದರಿಂದ ಅವರು ತುಂಬಾ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು.

Advertisement

ಒಂದು ದಿನ ಸರ್ಕಾರದಿಂದ ಒಂದು ಘೋಷಣೆ ಕೇಳಿಸಿತು. ನಾಳೆಯಿಂದ ಹದಿನೈದು ದಿನಗಳ ಕಾಲ ಮಹಿಳೆಯರಿಗಾಗಿ ಉಚಿತ ತರಬೇತಿ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಉಪ್ಪಿನಕಾಯಿ, ಸಿಹಿತಿಂಡಿಗಳು ಹಾಗೂ ಮನೆಯ ಉಪಯೋಗಕ್ಕೆ ಬೇಕಾದ ವಿವಿಧ ವಸ್ತುಗಳನ್ನು ತಯಾರಿಸುವ ವಿಧಾನವನ್ನು ಕಲಿಸಲಾಗುತ್ತದೆ. ಆಸಕ್ತರು ತಮ್ಮ ಹೆಸರನ್ನು ಗ್ರಾಮ ಪಂಚಾಯಿತಿಯಲ್ಲಿ ನೋಂದಾಯಿಸಿಕೊಳ್ಳಬೇಕುಎಂದು ತಿಳಿಸಲಾಯಿತು.

ಈ ವಿಷಯವನ್ನು ಕೇಳಿದ ಮಧುಮತಿ ಕೇಶವನಿಗೆ, “ನಾನು ಈ ತರಬೇತಿಗೆ ಹೋಗಿ ಉಪ್ಪಿನಕಾಯಿ ಮತ್ತು ಸಿಹಿತಿಂಡಿ ತಯಾರಿಸುವುದನ್ನು ಕಲಿಯುತ್ತೇನೆಎಂದಳು. ಕೇಶವ ಕೂಡ ಅವಳನ್ನು ಪ್ರೋತ್ಸಾಹಿಸಿದ.

ಮಧುಮತಿ ತರಬೇತಿ ಶಿಬಿರಕ್ಕೆ ಹೋಗಿ ತನ್ನ ಗೆಳತಿಯರೊಂದಿಗೆ ಸೇರಿ ಉಪ್ಪಿನಕಾಯಿ ತಯಾರಿಸುವುದನ್ನು ಕಲಿತುಕೊಂಡಳು. ಮನೆಗೆ ಬಂದ ನಂತರ ಕೇಶವನ ತೋಟದಲ್ಲಿ ಬೆಳೆದ ಮಾವು, ನಿಂಬೆ ಮತ್ತು ಹುಣಸೆಯನ್ನು ಬಳಸಿಕೊಂಡು ಉಪ್ಪಿನಕಾಯಿ ತಯಾರಿಸಲು ಆರಂಭಿಸಿದಳು.

ಅವರ ಉಪ್ಪಿನಕಾಯಿಗೆ ಉತ್ತಮ ಬೇಡಿಕೆ ಬಂದಿತು. ದಿನದಿಂದ ದಿನಕ್ಕೆ ಅವರ ಉದ್ಯಮ ಬೆಳೆಯತೊಡಗಿತು. ನಂತರ ಅವರು ಒಂದು ದೊಡ್ಡ ಉಪ್ಪಿನಕಾಯಿ ಕಾರ್ಖಾನೆಯನ್ನು ಸ್ಥಾಪಿಸಿದರು. ಕೇಶವ ಕಾರ್ಖಾನೆಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದನು. ಇಬ್ಬರೂ ಪರಿಶ್ರಮದಿಂದ ಕೆಲಸ ಮಾಡಿ ಸಂತೋಷದಿಂದ ಜೀವನ ನಡೆಸಿದರು.
ನೀತಿ:
ಪರಿಶ್ರಮ, ಕಲಿಯುವ ಆಸಕ್ತಿ ಮತ್ತು ಆತ್ಮವಿಶ್ವಾಸ ಇದ್ದರೆ ಯಶಸ್ಸು ಖಂಡಿತ ಸಿಗುತ್ತದೆ.
ನೀತಿ ಪಾಠ: ಕವನ, 7 ನೇ ತರಗತಿ. ಅನೇಕಾಮ್ ಶಾಲೆ. ಬೆಂಗಳೂರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು