Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಪಂಥಗಳಾಚೆಯ ನೋಟ ಎಲ್ಲೋ ಎಡವುತ್ತಿದ್ದೇವೆಯೆ ನಾವು?

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಂಥಗಳಾಚೆಯ ನೋಟ.......ಎಲ್ಲೋ ಎಡವುತ್ತಿದ್ದೇವೆಯೆ ನಾವು
? ಬಹುಶಃ, ಯಾವುದೋ ಸಿದ್ಧಾಂತಗಳಿಗೆ ದಾಸರಾಗುತ್ತಿದ್ದೇವೆಯೇ ? ಅಥವಾ, ಬದಲಾವಣೆಗಳನ್ನು ತಪ್ಪಾಗಿ ಗ್ರಹಿಸುತ್ತಿದ್ದೇವೆಯೇ ? ಅಥವಾ, ತಾಂತ್ರಿಕ ಪ್ರಗತಿಯಿಂದ ಗೊಂದಲಕ್ಕೊಳಗಾಗುತ್ತಿದ್ದೇವೆಯೇ  ? ಅಥವಾ,

ಬದುಕಿನ ಅರ್ಥವೇ ಬದಲಾಗುತ್ತಿದೆಯೇ ? ಅಥವಾ, ನಾವೇ ಭ್ರಮೆಗೊಳಗಾಗುತ್ತಿದ್ದೇವೆಯೇ  ? ಅಥವಾ, ಅಭಿವೃದ್ಧಿ ಎಂದರೆ ಏನೆಂದೇ ತಿಳಿಯುತ್ತಿಲ್ಲವೇ  ? ಅಥವಾ, ಎಲ್ಲೋ ಕಳೆದುಹೋದ ಅನುಭವವಾಗುತ್ತಿದೆಯೇ? ಅಥವಾ, ನಿಜಕ್ಕೂ ಒಳ್ಳೆಯ ಮಾರ್ಗದಲ್ಲಿ ಸಾಗುತ್ತಿದ್ದೇವೆಯೇ  ? ಅಥವಾ, ಇದೇ ಬದುಕಿನ ಸಹಜ ಕ್ರಮವೇ  ? ಅಥವಾ, ಎಲ್ಲಾ ಕಾಲಘಟ್ಟಗಳಲ್ಲೂ ಈ ತಳಮಳ ಇದ್ದದ್ದೆಯೇ  ? ಅಥವಾ, ಸತ್ಯದ ಹುಡುಕಾಟವೇ ಅಂತಿಮ ಧ್ಯೆಯವೇ  ? ಅಥವಾ, ಇದೆಲ್ಲವನ್ನು ಮೀರಿದ ಇನ್ನೇನಾದರೂ ಇದೆಯೇ  ?

ಕಾಡುತ್ತಲೇ ಇರುವ ಗೊಂದಲದ ಕಾಡಿನಲಿ, ಅಲೆಯುತ್ತಲೇ ಇರುವ ಮನದ ಸಾಗರದಲಿ, ಉತ್ತರ ಹುಡುಕಿಕೊಳ್ಳಲು ಪ್ರಯತ್ನಿಸಿದರೆ, ಬದುಕು ಒಂದಷ್ಟು ಸಹನೀಯವಾಗಬಹುದು, ಜೀವನಮಟ್ಟ ಸುಧಾರಿಸಬಹುದು, ಕ್ರಿಯಾತ್ಮಕ ಸಾಧನೆಗಳು ಸಾಧ್ಯವಾಗಬಹುದು.....

ಹೌದು, ನಾನು ಬಲಪಂಥೀಯ, ಈ ದೇಶದ ಸಂಸ್ಕೃತಿ - ಮೌಲ್ಯಗಳನ್ನು, ಇಲ್ಲಿನ ಜನರ ಮುಗ್ಧತೆ - ಮಾನವೀಯ ಗುಣಗಳನ್ನು ಬಹುವಾಗಿ ಇಷ್ಟಪಡುತ್ತೇನೆ. ಈ ನೆಲದ ಮಣ್ಣಿನ ಶ್ರೇಷ್ಠತೆಯನ್ನು, ಪಾರಂಪರಿಕ ಕೌಟುಂಬಿಕ ಜೀವನ ಶೈಲಿಯನ್ನು ಮೆಚ್ಚುತ್ತೇನೆ. ಅದಕ್ಕಾಗಿ ಹೆಮ್ಮೆ ಇದೆ.....

ಹೌದು, ನಾನು ಎಡಪಂಥೀಯ, ಇಲ್ಲಿನ ಅಮಾನವೀಯ ರಾಕ್ಷಸ ಸ್ವರೂಪದ ಶೋಷಣೆಯ ಮೂಲವಾದ ಸಾಮಾಜಿಕ ಅಸಮಾನತೆಯನ್ನು ದ್ವೇಷಿಸುತ್ತೇನೆ. ಕಪಟ ಆಧ್ಯಾತ್ಮ, ಕಠೋರ, ಕರ್ಮಠ ಸಂಪ್ರದಾಯಗಳು, ವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿಯಂತ್ರಣವನ್ನು ಖಂಡಿಸುತ್ತೇನೆ. ಅದಕ್ಕೆ ನನಗೆ ಇಲ್ಲಿನ ವ್ಯವಸ್ಥೆಯ ಬಗೆಗೆ ಕೋಪವಿದೆ.

ಹೌದು, ನಾನು ಮಧ್ಯ ( ನಡು ) ಪಂಥೀಯ, ಬಲ ಮತ್ತು ಎಡಗಳ ದಾಸನಾಗದೆ ತಮ್ಮದೇ ಶ್ರೇಷ್ಠ ಎಂದು ಮೂಡನಾಗದೆ ಎರಡೂ ಪಂಥಗಳ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ಅನುಭವ ಮತ್ತು ಆಧುನಿಕತೆಯ ನೆರಳಲ್ಲಿ ಹೊಸದೊಂದು ಜೀವನ ಶೈಲಿ ರೂಪಿಸಿಕೊಳ್ಳುವ ಪ್ರಯತ್ನದಲ್ಲಿರುವವನು......

ಹೌದು, ನಾನು ದ್ವಂಧ್ವಗಳ ರಾಜ, ಎಡಬಿಡಂಗಿ, ಅಲ್ಲೂ ಸಲ್ಲದ ಇಲ್ಲೂ ಸಲ್ಲದ  ನೆಮ್ಮದಿಯ ಬದುಕಿಗಾಗಿ ಈ ಪಂಥಗಳ ಆಚೆ ಸತ್ಯ ಮತ್ತು ವಾಸ್ತವದ ಹುಡುಕಾಟದಲ್ಲಿರುವ ಅರೆ ಹುಚ್ಚ.

ಇಲ್ಲ, ನಾನು ಇದಾವುದೂ ಅಲ್ಲ, ಸೃಷ್ಟಿಯ ಒಂದು ಸಹಜ ಸ್ವಾಭಾವಿಕ ಸರಳ ಜೀವಿ. ನನ್ನ ಮೆದುಳಿನ ಗ್ರಹಿಕೆಯಿಂದ ಉಂಟಾದ ತರಂಗಗಳು ಮನಸ್ಸಿಗೆ ರವಾನಿಸುವ ಸಂದೇಶಗಳಿಗೆ ಅನುಗುಣವಾಗಿ, ದೇಹದ ಅಂಗಾಗಗಳ ಮುಖಾಂತರ ಕಾರ್ಯ ನಿರ್ವಹಿಸುತ್ತಿರುವ ಜೀವಕೋಶಗಳ ರಾಶಿ ನಾನು. ಅದಷ್ಟೇ ಸತ್ಯ. ಉಳಿದದ್ದು ಎಂದಿನಂತೆ ನಿಮ್ಮ ಮೆದುಳು ಗ್ರಹಿಸಿ ಮನಸ್ಸಿಗೆ ಕಳಿಸುವ ತರಂಗಗಳ ಆಧಾರದಲ್ಲಿ ನಿಮ್ಮ ಪ್ರತಿಕ್ರಿಯೆ.....

ಇದುವೇ ಜೀವಿ - ಜೀವನ - ಸಮಾಜ. ಈ ದೇಶ - ಭಾಷೆ - ಧರ್ಮ - ಜಾತಿ - ಪಂಥ ಎಲ್ಲವೂ ಕೇವಲ ಪರಿಕಲ್ಪನೆ. ಸಹಜವಾಗಿ ಬದುಕಲು ಪಂಥಗಳ ಅವಶ್ಯಕತೆ ಇದೆಯೇ, ಇದ್ದರು ಎಲ್ಲಾ ಜೀವರಾಶಿಗಳ ಹಿತ ಬಯಸುವ ಮಾನವೀಯ ಪಂಥ ಸಾಕಲ್ಲವೇ, ನಾಗರೀಕ ಸಮಾಜ, ನೆಮ್ಮದಿಯ ಸಮಾಜಕ್ಕೆ ಇಷ್ಟು ಸಾಕಲ್ಲವೇ, ಯೋಚಿಸಿ ನೋಡಿ......
ಲೇಖನ-ವಿವೇಕಾನಂದ. ಎಚ್. ಕೆ., 9844013068........

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು