LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಂಬದರಾಯ ಸ್ವಾಮಿ ದೇವಾಲಯದಲ್ಲಿ ಕಳ್ಳತನ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜಘಟ್ಟ ಗ್ರಾಮದ ಹೊರ ವಲಯದ ಕಂಬದರಾಯ ಸ್ವಾಮಿ ಬಾಗಿಲು ಹೊಡೆದು ಒಳ ನುಗ್ಗಿರುವ ಕಳ್ಳರು ದೇವರ ಬೆಳ್ಳಿ ಕಿರೀಟ ಮತ್ತು ಬೆಳ್ಳಿ ವಿಗ್ರಹ ಕದ್ದೊಯ್ದಿರುವ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಕಂಬದರಾಯಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ದೇವಸ್ಥಾನದ ಆರ್ಚಕ ಶ್ರೀನಿವಾಸ್ ದೇವಸ್ಥಾನಕ್ಕೆ ಬಂದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಸ್ಥಳೀಯ ಯುವ ಮುಖಂಡ ರಾಜಘಟ್ಟ ಗಣೇಶ್ ಮಾತನಾಡಿ  ದೇವಸ್ಥಾನ ಗ್ರಾಮದಿಂದ ಹೊರವಲಯದಲ್ಲಿದ್ದು ದೇವಾಲಯದ ಸುತ್ತಮುತ್ತ ಯಾವುದೇ ಮನೆಗಳಿಲ್ಲ. ರಾತ್ರಿಯಾಗುತ್ತಿದ್ದಂತೆ ಯಾರು ಇಲ್ಲಿಗೆ ಬರುವುದಿಲ್ಲ. ಇಂತಹ ಸಮಯದಲ್ಲಿ ದೇವಸ್ಥಾನ ಗಾಂಜಾ ವ್ಯಾಸನಿಗಳ ತಾಣವಾಗಿದೆ. ಹೆಂಗಸರು ಮಕ್ಕಳು ದೇವಸ್ಥಾನದ ಬಳಿ ಬರುವುದಕ್ಕೂ ಜನ ಹೆದರುವಂಥ ಪರಿಸ್ಥಿತಿ ಇದೆ.

ಈ ಅವಕಾಶ ಬಳಸಿಕೊಂಡ ಕಳ್ಳರು ದೇವಸ್ಥಾನದ ಮುಖ್ಯದ್ವಾರ ಮತ್ತು ಗರ್ಭ ಗುಡಿಯ ಬಾಗಿಲ ಬೀಗ ಹೊಡೆದು ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ ಬೆಳ್ಳಿ ಕೀರಿಟ ಮತ್ತು ಬೆಳ್ಳಿಯ ವಿಗ್ರಹ ಕದ್ದೊಯ್ದಿದ್ದಾರೆ. ಆರ್ಚಕರಾದ ಶ್ರೀನಿವಾಸ್ ರವರಿಗೆ ಕಿವಿ ಕೇಳಿಸುವುದಿಲ್ಲ ಮತ್ತು ಮಾತು ಸಹ ಬರುವುದಿಲ್ಲ.ದೇವರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಪೊಲೀಸರು ಕಳ್ಳರನ್ನ ಬಂಧಿಸುವ ಮೂಲಕ ಕಳ್ಳರಿಗೆ ತಕ್ಕ ಶಿಕ್ಷೆ ನೀಡ ಬೇಕೆಂದು ಆಗ್ರಹಿಸಿದರು.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೋಲೀಸರು ಸ್ಥಳಕ್ಕೆ ದಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST