Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಈ ನೆಲ ಸಮಾನತೆಯ ನಾಡಾಗಬೇಕು- ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ

Advertisement
ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಕನ್ನಡ ಸಾಹಿತ್ಯದಲ್ಲಿ ಹಲವು ಜನ ಪ್ರಸಿದ್ಧರ ಆತ್ಮಕತೆಗಳು ಬಂದಿವೆ ಸಾಹಿತಿಗಳು ರಾಜಕಾರಣಿಗಳು ಸಮಾಜ ಸೇವಕರು ಹೀಗೆ ಹಲವು ಕ್ಷೇತ್ರಗಳ ಅನುಭವ ಜ್ಞಾನಿಗಳು ಆತ್ಮಕಥೆಗಳನ್ನು ಬರೆದುಕೊಂಡಿದ್ದಾರೆ. ಯಾವುದೇ ಆತ್ಮಕಥೆ ಕೇವಲ ತನ್ನ ವ್ಯಕ್ತಿಯ ಜೀವನ ಚರಿತ್ರೆಯಾಗಿರದೆ ಅದು ಅವರ ಪ್ರತಿನಿಧಿಸುವ ಸಮಾಜದ ಜೀವನ ಕಥನವೂ ಆಗಿರುತ್ತದೆ ಎಂದು ನಾಡಿನ ಸಂಸ್ಕೃತಿ ಚಿಂತಕರಾದ ಡಾ.ವಡ್ಡಗೆರೆ ನಾಗರಾಜಯ್ಯ ಅಭಿಪ್ರಾಯಪಟ್ಟರು.


ನಗರದ  ಹುಳಿಯಾರು ರಸ್ತೆಯ ಶ್ರೀ ಸಾಯಿ ಅನ್ನಪೂರ್ಣೇಶ್ವರಿ ಹೋಟೆಲ್ ಆವರಣದಲ್ಲಿ ಬಹುಜನ ಪರಿವರ್ತನಾ ವೇದಿಕೆ ತಾಲ್ಲೂಕು ಘಟಕ ಹಿರಿಯೂರು ವತಿಯಿಂದ  ಆಯೋಜಿಸಿದ್ದ ಲೇಖಕ ಬಿ. ಸಿದ್ದಪ್ಪ ಹಿರಿಯೂರು ಇವರ ಅನುಭವ ಕಥನ 'ಮೇಟಿ ಕೂರಿಗೆ' ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿನ ಶೋಷಣೆ ಹಿಂಸೆ ಅಸ್ಪೃಶ್ಯತೆಯ ತಾಪ ಜಾತಿ ಮೂಢನಂಬಿಕೆ ಕಂದಾಚಾರಗಳನ್ನು ಬಿ. ಸಿದ್ದಪ್ಪನವರು ತಮ್ಮ ಕೃತಿಯಲ್ಲಿ ಪರಿಚಯಿಸಿದ್ದಾರೆ. ಮೇಟಿ-ಕೂರಿಗೆ ಕೃಷಿ ಪರಿಕರಗಳ ಹೆಸರಾದರೂ ಇದು ಸ್ಥಳ ಪುರಾಣದ ಜೊತೆಗೆ ಗ್ರಾಮದ ಹೆಸರಿನ ಹಿನ್ನೆಲೆಯನ್ನು ಈ ಕಾಲದ ವಿದ್ಯಮಾನಗಳ ಜೊತೆಗೆ ವಿಚಾರ ವಿಶ್ಲೇಷಣೆಗೆ ಒಳಪಡಿಸಿದೆ.

ದಲಿತ ಮತ್ತು ಬಂಡಾಯ ಸಾಹಿತ್ಯಗಳ ಪ್ರವೇಶದ ನಂತರ ತಳ ಸಮುದಾಯದವರಿಗೆ ಮುಖ್ಯವಾಹಿನಿಯ ಆದ್ಯತೆ ಸಿಕ್ಕಿದೆ. ಇದು ಕೇವಲ ಹೊಲೆ ಮಾದಿಗರಿಗೆ ಮಾತ್ರ ಸೀಮಿತವಾಗಿರದೆ ಅವಕಾಶವಂಚಿತರಿಗೂ ದಕ್ಕಿದೆ. ದಲಿತತ್ವವು ವಿಶಾಲ ಚಿಂತನೆಯಾಗಿದ್ದು ಇದು ಸಹೋದರತೆಯ ಜೊತೆಗೆ ಸಾಮಾಜಿಕ ನ್ಯಾಯದ ಸಂಕೇತವಾಗಿದೆ. ತಳಸಮುದಾಯಗಳು ತಮ್ಮ ಹಕ್ಕಿನ ಮತಾಧಿಕಾರವನ್ನು ಆಸೆ ಹಣಕ್ಕೆ ಮಾರಿಕೊಳ್ಳದೆ ಜನತಂತ್ರವನ್ನು ಉಳಿಸುವ ಕಡೆಗೆ ಗಮನಹರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರೊ.ಜಿ ಶರಣಪ್ಪ ಮಾತನಾಡಿ ಬುದ್ಧ ಬಸವ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಕುವೆಂಪು ಅವರ ಆಶಯಗಳನ್ನು ಅಧ್ಯಯನ ಮಾಡಿದ ಹಾಗೂ ಅನುಷ್ಠಾನ ಮಾಡುವವರಲ್ಲಿ ಅಸಮಾನತೆಯ ಸೋಂಕು ಕಂಡು ಬರುವುದಿಲ್ಲ ಸಮಾಜಮುಖಿ ಚಿಂತನೆ ಇರುವವರಲ್ಲಿ  ಪರಿವರ್ತನೆಯ ಈ ಕ್ರಾಂತಿಕಾರಕ ಮನಸ್ಸುಗಳನ್ನು ಕಾಣಲು ಸಾಧ್ಯ ಈ ನೆಲೆಯಲ್ಲಿ ಪೆರಿಯಾರ್ ರಾಮಸ್ವಾಮಿ, ನಾರಾಯಣ ಗುರು  ಸಂತಕಬೀರ್, ರವಿದಾಸ್ ಅವರ ಚಿಂತನೆಗಳು ಸಮಾಜಕ್ಕೆ ಪ್ರೇರಣೆಯಾಗಿದ್ದು ಈ ನೆಲೆಯಲ್ಲಿ ಬಿ ಸಿದ್ದಪ್ಪ ಅವರ ಚಿಂತನೆಗಳನ್ನು ಓದಿಕೊಂಡು ತನಗೆ ಬೇಕಾದ ರೀತಿಯಲ್ಲಿ ತಮ್ಮ ಬಾಲ್ಯದ ಕ್ರಾಂತಿಕಾರಕ ಮನಸ್ಸು ಅನುಭವಿಸಿದ ಅಸಮಾನತೆಯ ನೋವು ಕಷ್ಟ ಬಡತನ  ಎಲ್ಲವನ್ನು ತಮ್ಮ ಕೃತಿಯಲ್ಲಿ ಬರೆದಿದ್ದಾರೆ ಎಂದು ಹೇಳಿದರು.

'ಮೇಟಿ ಕೂರಿಗೆ' ಕೃತಿ ಕುರಿತು ಮಾತನಾಡಿದ ಶ್ರೀ ಕೃಷ್ಣದೇವರಾಯ ವಿ.ವಿ. ಸಿಂಡಿಕೇಟ್ ಸದಸ್ಯರಾದ  ಕೆ. ಜೆ.  ಜಯಲಕ್ಷ್ಮಿ ನಾಯಕ ಮಾತನಾಡಿತವರು ಭೂಮಿ ಸಂಬಂಧವನ್ನು ಬೆಸೆದುಕೊಂಡು  ಕೃತಿಗೆ ಮೇಟಿ ಕೂರಿಗೆ ಎಂಬ ಹೆಸರಿಟ್ಟಿದ್ದರೂ ಅದರಾಚೆ ಮಾನವ ಸಂಬಂಧಗಳಿಗೂ ಕೃತಿ ಬೆಸುಗೆಯಾಗಿದೆ. ಬಾಲ್ಯದ ಯಾತನೆಯ ಬಡತನ  ಶೈಕ್ಷಣಿಕ ಪರಿಸರದಲ್ಲಿ ಅನುಭವಿಸಿದ ತಾರತಮ್ಯ ಎದುರಿಸಿದ  ಸವಾಲು ಗಳನ್ನು  ಮೆಟ್ಟಿ ನಿಂತು ಬದುಕನ್ನು ರೂಪಿಸಿಕೊಂಡದ್ದು ಪದವಿ ಅಂಕಪಟ್ಟಿಗಾಗಿ ಹಿರಿಯೂರಿನಿಂದ ಮೈಸೂರಿಗೆ ಕಾಲ್ನಡಿಗೆಯಲ್ಲಿ ಹೋಗಿ ಅಂಕಪಟ್ಟಿ ತಂದ ಪ್ರಸಂಗ ಬಡತನದಲ್ಲಿ ಅನುಭವಿಸಿದ ನೋವುಈ ಕೃತಿಯಲ್ಲಿ  ಅಡಕವಾಗಿವೆ ಶೋಷಿತ ಸಮುದಾಯಕ್ಕೆ ನಂಬಿಕೆ ಮತ್ತು ಸಿದ್ದಾಂತಕ್ಕೆ ಬದ್ದರಾದ ಸಾಮಾನ್ಯ ಜನರ ಕಷ್ಟ ಸುಖಗಳನ್ನ ಹಂಚಿಕೊಳ್ಳುವ ಜನನಾಯಕರು ಬೇಕು ಬರೀ ಪೋಸ್ ಕೊಡುವ ರಾಜಕಾರಣಿಗಳಲ್ಲ ಆದಕಾರಣ ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ ಬದ್ಧತೆ ಸಿದ್ದಾಂತಗಳನ್ನು ರೂಢಿಸಿಕೊಂಡ ಜನನಾಯಕರನ್ನು ಆಯ್ಕೆ ಮಾಡಿಕೊಂಡಾಗ  ಶೋಷಿತರ ಬದುಕು ಹಸನ್ಗೊಳ್ಳುತ್ತದೆ ಎಂದು ಹೇಳಿದರು.

ರಾಜ್ಯ ಯುವ ಪ್ರಶಸ್ತಿ  ಪುರಸ್ಕೃತ ಚಮನ್ ಷರೀಫ್ ಮಾತನಾಡಿ ಪುಸ್ತಕಗಳು ಸಮಾಜದ ವಾಸ್ತವಿಕ ವಿದ್ಯಮಾನ, ಸಂಕಷ್ಟತಪ್ಪುಗಳನ್ನು ಎತ್ತಿ ತೋರಿಸುವ ಸಮಾಜ ತಿದ್ದುವ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ.

ಸಾಮಾಜಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ಪ್ರಮುಖ ಮಾಧ್ಯಮವಾಗಿದೆ. ಪುಸ್ತಕ ಓದುವುದರಿಂದ ವ್ಯಕ್ತಿತ್ವ ವಿಕಸನ  ಆತ್ಮವಿಶ್ವಾಸ, ಸಂವಹನ ಕೌಶಲ್ಯ ಮತ್ತು ಸೃಜನಶೀಲತೆ ಹೆಚ್ಚಾಗುತ್ತದೆ.

ಸಾಮಾಜಿಕ, ವೈಜ್ಞಾನಿಕ ವಿಷಯಗಳ ಮೂಲಕ ಜನರ ಜ್ಞಾನವನ್ನು ವಿಸ್ತರಿಸುತ್ತವೆ  ಹಾಗೂ ಜಾಗೃತಿ ಮೂಡಿಸುತ್ತವೆ. ಇಂದು ಸಮಾಜಕ್ಕೆ ಹೊಸ ಸಂದೇಶ ಮಾರ್ಗದರ್ಶನ ನೀಡಲು ಪುಸ್ತಕಗಳು ಪ್ರಭಾವಬೀರುತ್ತಿವೆ ಎಂದು ಹೇಳಿದರು .

ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಎಚ್. ಟಿ. ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಎಂ ಮಲ್ಲಣ್ಣ, ಹಿರಿಯ ಪತ್ರಕರ್ತ ಟಿ.ಎನ್. ಷಣ್ಮುಖ, ಲೇಖಕ ಬಿ. ಸಿದ್ದಪ್ಪ , ಸಾಹಿತಿ ಪ್ರೊ ಎಂ.ಜಿ. ರಂಗಸ್ವಾಮಿ, ರೈತ ಸಂಘದ ವಿಭಾಗಿಯ ಉಪಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್. ಜಿ. ರಂಗಸ್ವಾಮಿ ಸಕ್ಕರ, ಕವಿ ಶಿವ ಶಂಕರ್ ಸೀಗೆಹಟ್ಟಿ, ನಗರಸಭಾ ಸದಸ್ಯರಾದ ಎಂ.ಡಿ. ಸಣ್ಣಪ್ಪ, ದಲಿತ ಪರ ಸಂಘಟನೆಯ ಕೆ. ಪಿ. ಶ್ರೀನಿವಾಸ್, ಕೆ ರಾಮಚಂದ್ರಪ್ಪ, ವಕೀಲ ಟಿ ದ್ರುವ ಕುಮಾರ್, ಕೆ. ಆರ್. ರಘುನಾಥ್, ಜೆ.ಟಿ. ಪುಟ್ಟಮ್ಮ, ಡಿ ಎಚ್. ಹಾಲಪ್ಪ, ಡಿ .ಎಚ್. ಅಶ್ವಿನಿ, ಎಸ್. ಲಿಂಗರಾಜು, ಮಂಗಳಮ್ಮ, ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ