Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Feature Article

ಎಐ ತಂತ್ರಜ್ಞಾನದಿಂದ ರೈತರ ಭವಿಷ್ಯ ಉಜ್ವಲ: ಬಸವರಾಜ ಎಸ್.ಹೊರಟ್ಟಿ

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಬೆನ್ನೆಲುಬಾದ ನಮ್ಮ ರೈತರು ಹಿಂದಿಗಿಂತ ಈಗ ಸುಧಾರಣೆಯಾಗಿದ್ದಾರೆ.  ಹೊಸ ಎಐ ತಂತ್ರಜ್ಞಾನ ರೈತರಿಗೆ ವರದಾನವಾಗಲಿ
, ಎಐ ರೈತರ ಭವಿಷ್ಯ ಉಜ್ವಲವಾಗಲು ಸಹಕಾರಿಯಾಗಬೇಕು.  ರೈತರ ಕುರಿತು ರಾಜ್ಯದ ಜನತೆಗೆ  ಮಾಹಿತಿಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಫಾರ್ಮಾಸಿ ಕ್ಷೇತ್ರದ ಕಾರ್ಯನಿರ್ವಹಣಾ ವ್ಯವಸ್ಥೆ ಹಾಗೂ ಎಐ ಮತ್ತು ಕ್ವಾಂಟಮ್ ಸಂಯೋಜನೆ ಮತ್ತು ಅದರ ಸ್ಪರ್ಧಾತ್ಮಕ ಲಾಭಗಳ ಕುರಿತ ಪುಸ್ತಕಗಳಬಿಡುಗಡೆ ಮಾಡಲಾಗಿದೆ ಎಂದು ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಎಸ್.ಹೊರಟ್ಟಿ ಅವರು ತಿಳಿಸಿದರು.

ವಿಧಾನೌಧದಲ್ಲಿ ಹಮ್ಮಿಕೊಂಡಿದ್ದ ರವಿಶಂಕರ್ ಅವರು ಬರೆದಿರುವ ಫಾರ್ಮಾಸಿ ಕ್ಷೇತ್ರದ ಕಾರ್ಯನಿರ್ವಹಣಾ ವ್ಯವಸ್ಥೆ ಹಾಗೂ ಎಐ ಮತ್ತು ಕ್ವಾಂಟಮ್ ಸಂಯೋಜನೆ ಮತ್ತು ಅದರ ಸ್ಪರ್ಧಾತ್ಮಕ ಲಾಭಗಳ ಕುರಿತ ಪುಸ್ತಕಗಳನ್ನು ಬಿಡುಗಡೆ ಮಾತನಾಡಿದ ಸಭಾಪತಿಗಳು, ನಮ್ಮಲ್ಲಿ ಕೂಲಿ ಕಾರ್ಮಿಕರು ಲಭ್ಯವಿಲ್ಲದ ಈ ಕಾಲದಲ್ಲಿ ರೈತರಿಗೆ ಈ ಹೊಸ ತಂತ್ರಜ್ಞಾನದಿಂದ ಅನುಕೂಲವಾಗಲಿದೆ ಎಂದರು.

ಲೇಖಕರಾದ ಡಾ. ರವಿಶಂಕರ್ ಅವರು ಮಾತನಾಡಿ ಎಐ -ಚಾಲಿತ ಫಾರ್ಮಾ ಅನುವಂಶದಿಂದ ಮಾರುಕಟ್ಟೆಗೆ" ಎಂಬ ಪುಸ್ತಕವು ಕೃತಕ ಬುದ್ಧಿಮತ್ತೆ ಔಷಧಶಾಸ್ತ್ರ, ಮೌಲ್ಯ ಸರಪಳಿಯನ್ನು ಹೇಗೆ ಪುನರ್‍ಗಟ್ಟುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ ಎಂದರು.

ಲಕ್ಷ್ಯ ಗುರುತಿಸುವಿಕೆ ಮತ್ತು ಸೃಜನಾತ್ಮಕ ರಸಾಯನಶಾಸ್ತ್ರದಿಂದ ಪ್ರಿಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಭಿವೃದ್ಧಿ, ಉತ್ಪಾದನೆ, ಸರಬರಾಜು ಸರಪಳಿ ಮತ್ತು ವಾಣಿಜ್ಯ ಕಾರ್ಯಗತಗೊಳಿಸುವಿಕೆ ಕುರಿತು ಏಳು ಭಾಗಗಳು ಮತ್ತು 24 ಅಧ್ಯಾಯಗಳಲ್ಲಿ ರಚಿಸಲಾಗಿದೆ.

ಡೇಟಾ ಮೂಲಾಧಾರಗಳು, ಫೌಂಡೇಷನ್ ಮಾದರಿಗಳು, ಮಲ್ಟಿಮೋಡಲ್ ಮತ್ತು ಏಜೆಂಟಿಕ್ ಎಐ, ನಿಯಂತ್ರಣಶಾಸ್ತ್ರ, ನೈತಿಕತೆ ಮತ್ತು ಹೊಸ ಕಾರ್ಯನಿರ್ವಹಣಾ ಮಾದರಿಗಳನ್ನು ಒಟ್ಟಾರೆಯಾಗಿ ಫಾರ್ಮಾಸಿ ಕ್ಷೇತ್ರದ "ಎಐ ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿ ವಿವರಿಸಲಾಗಿದೆ ಎಂದು ಹೇಳಿದರು.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು