Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹುಲಿಕುಂಟೆ ಗ್ರಾಮದಲ್ಲಿ ವೀರಗಲ್ಲು ಪತ್ತೆ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರ ತಾಲ್ಲೂಕು ದೊಡ್ಡಬೆಳವಂಗಲ ಹೋಬಳಿ ಹುಲಿಕುಂಟೆ ಗ್ರಾಮದಲ್ಲಿ
  ಸಂಶೋದನೆಯಲ್ಲಿ ತೊಡಗಿದ್ದಾಗ ವೀರಗಲ್ಲು ಕಂಡುಬಂದಿದೆ.

ತಾಲೂಕಿನ ಇತಿಹಾಸ ತಜ್ಞ ಡಾ.ಎಸ್ ವೆಂಕಟೇಶ್ ಅವರು ಹೇಳುವಂತೆ ಹುಲಿ ಬೇಟೆಯ ವೀರಗಲ್ಲುಗಳು ದೊರೆತಿರುವುದು ತೀರಾ ವಿರಳ. ತೂಬಗೆರೆ ಹೋಬಳಿಯ ತಿಮ್ಮಾಜನಹಳ್ಳಿಯಲ್ಲಿ ಎರಡು ಮತ್ತು ಎಸ್ ಎಸ್ ಘಾಟಿಗೆ ಸಂಪರ್ಕಿಸುವ ದಾರಿಯಲ್ಲಿ  ನೆಲ್ಲುಗುದಿಗೆ ಗ್ರಾಮದಲ್ಲಿ ಒಂದು ಹುಲಿ ಬೇಟೆ ಮಹಿಳಾ ವೀರಗಲ್ಲುಗಳು ಲಭ್ಯವಾಗಿವೆ. 

ಇವುಗಳ ಜೊತೆಗೆ ಈಗ ಹೊಸದಾಗಿ ಸೇರ್ಪಡೆಯಾಗಿ ಡಾ. ವೆಂಕಟೇಶ್ ಅವರ ಕ್ಷೇತ್ರ ಕಾರ್ಯದಲ್ಲಿ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲಿಕುಂಟೆ ಗ್ರಾಮದಲ್ಲಿ ಹುಲಿ ಬೇಟೆಯ ವೀರಗಲ್ಲೊಂದು ಲಭ್ಯವಾಗಿದೆ. ಶಿಲ್ಪ ಲಕ್ಷಣದ ಆಧಾರದ ಮೇಲೆ ಇದನ್ನು 10ನೇ ಶತಮಾನಕ್ಕೆ ಸೇರಿಸಬಹುದು ಎನ್ನುತ್ತಾರೆ ಇತಿಹಾಸ ಸಂಶೋಧಕ ಡಾ. ವೆಂಕಟೇಶ್ ತಿಳಿಸಿದ್ದಾರೆ.

  ವೀರನು ಆಲೀಢಭಂಗಿಯಲ್ಲಿ ನಿಂತಿದ್ದು, ತನ್ನ ಬಲಗೈಯಲ್ಲಿ ಖಡ್ಗ ಹಿಡಿದು ಮೇಲೆತ್ತಿರುವನು. ಎದುರುಗಡೆ ವೀರನತ್ತ ಮುನ್ನುಗ್ಗುತ್ತಿರುವ ಹುಲಿಯ ಚಿತ್ರಣವಿದೆ. ಈ ವೀರಗಲ್ಲಿನ ಮೇಲೆ ಯಾವುದೇ ರೀತಿಯ ಬರವಣಿಗೆ ಇಲ್ಲ. ಒಟ್ಟಾರೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈವರೆಗೆ ನಾಲ್ಕು ಹುಲಿ ಬೇಟೆ ವೀರಗಲ್ಲುಗಳು ಲಭ್ಯವಾಗಿವೆ.

 ಮಾನವ ಮತ್ತು ಹುಲಿಗಳ ಸಂಘರ್ಷ ಇಂದು ನಿನ್ನೆಯಿಂದಲ್ಲ ಇತಿಹಾಸ ಪೂರ್ವ ಕಾಲದಿಂದಲೂ ಮಾನವ ನಿರಂತರವಾಗಿ ಹುಲಿಗಳ ಜೊತೆಗೆ ಸಂಘರ್ಷ ಮಾಡಿಕೊಂಡು ಬಂದಿದ್ದಾನೆ. ಹೀಗೆ ಹುಲಿ ಜೊತೆಗೆ ಕಾದಾಡುವಾಗ ಮೃತಪಟ್ಟ ವೀರನ ಸ್ಮರಣಾರ್ಥ ನೆಟ್ಟ ಕಲ್ಲುಗಳಿಗೆ ಹುಲಿ ಬೇಟೆ ವೀರಗಲ್ಲುಗಳು. ಇಂತಹ ಸ್ಮಾರಕ ಶಿಲ್ಪಗಳಿಂದ ಹುಲಿಗಳ ವಾಸ ಸ್ಥಾನದ ಕುರಿತಂತೆ ಅಧ್ಯಯನ ಮಾಡುವುದಕ್ಕೆ ಸಾದ್ಯವಿದೆ. ಬ್ರಿಟಿಷ್ ಆಡಳಿತದ ಅವಧಿಯವರೆಗೆ ಈ ಭಾಗದಲ್ಲಿ ಹುಲಿಗಳಿದ್ದ ಮಾಹಿತಿಯಿದೆ. ಆದರೆ ರಾಜ್ಯದ ಅರಣ್ಯ ಇಲಾಖೆಗಳ ದಾಖಲೆಗಳ ಪ್ರಕಾರ  1950 ರ ನಂತರ ಇಲ್ಲಿ ಹುಲಿಗಳಿದ್ದ ಯಾವುದೇ ಮಾಹಿತಿಯಿಲ್ಲ. 

  ಕ್ಷೇತ್ರ ಕಾರ್ಯದಲ್ಲಿ ಡಾ.ವೆಂಕಟೇಶ್ ರವರಿಗೆ ಜೊತೆಯಾದವರು ಯುವ ಸಂಚಲನದ ಚಿದಾನಂದ್ ಮತ್ತು ಹುಲಿಕುಂಟೆ ಗ್ರಾಮದ ದೇವರಾಜ್ ರವರು. 

ಇದೇ ಡಿಸೆಂಬರ್ 26 ರಂದು ರಾಜ್ಯದಲ್ಲೇ ಬೇಟೆಗೆ  ಹೆಸರು  ವಾಪಸಂದ್ರ ಬೇಟೆ ಹಾಗು ಹುಲಿಕುಂಟೆ ಬೇಟೆ ರಂಗನಾಥಸ್ವಾಮಿಯ ಜಾತ್ರೆಯಿದೆ. ಕಾಕತಾಳೀಯವೆಂಬಂತೆ ಈಗಲೇ ಹುಲಿ ಬೇಟೆ ವೀರಗಲ್ಲು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ಕೆಲವರು ಈ ಹುಲಿ ಬೇಟೆಯ ವೀರ ಗಲ್ಲನ್ನು ಗ್ರಾಮ ನಾಮ ದೊಂದಿಗೆ ತಳುಕು ಹಾಕುತ್ತಿರುವುದು  ಬೇಟೆಗಾರನ ವೀರತ್ವವನ್ನು ಕೆತ್ತನೆ ಮಾಡಲ್ಪಟ್ಟಿದೆ   ಅದಕ್ಕಾಗಿಯೇ  ಅ ಊರಿಗೆ ಹುಲಿಕುಂಟೆ ಗ್ರಾಮ ವೆಂದು ನಾಮಕರಣ ವಾಗಿರಬಹುದು ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ