Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ವಿಜಯನಗರ ಕಾಲದ ಮಾಸ್ತಿಕಲ್ಲು ಮತ್ತು ಮಹತ್ವದ ಶಾಸನ ಪತ್ತೆ

ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಅತ್ಯಂತ ಪುರಾತನ ಕಾಲದ ಮಾಸ್ತಿಕಲ್ಲು ಮತ್ತು ಮಹತ್ವದ ಶಾಸನ ಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮುದ್ದಾಪುರದ ಆಂಜನೇಯ ದೇಗುಲದ ಸಮೀಪದ ಮಾರ್ಗ ಮಧ್ಯೆದಲ್ಲಿ ಲಭ್ಯವಾಗಿವೆ.
ವಿಜಯ ನಗರ ಅರಸ ಆಳ್ವಿಕೆ ಕಾಲದಲ್ಲಿನ ಅಪರೂಪದ ಮಾಸ್ತಿಗಲ್ಲು ಮತ್ತು ಅಪೂರ್ಣವಾದ ಶಾಸನ ಕಲ್ಲನ್ನು ವಿಜಯನಗರ ತಿರುಗಾಟ ಸಂಶೋಧನ ತಂಡವು ಪತ್ತೆ ಮಾಡಿದೆ.


ಈ ಮಾಸ್ತಿಕಲ್ಲನ್ನು ಚಿದಾನಂದ ಅವರ ಸಹಕಾರದಿಂದ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಗೋವಿಂದ, ದೃಶ್ಯಕಲಾ ವಿಭಾಗದ ಡಾ. ಕೃಷ್ಣೆಗೌಡ, ಅಭಿವೃದ್ಧಿ ಅಧ್ಯಯನ ವಿಭಾಗದ ಡಾ. ಗೋವರ್ಧನ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ. ಎಚ್. ತಿಪ್ಪೇಸ್ವಾಮಿ, ಸಂಶೋಧಕ ಡಾ. ವೀರಾಂಜನೇಯ, ಎಚ್. ರವಿ ಅವರುಗಳ ತಂಡವು ಶೋಧಿಸಿದೆ.

ಮಹಿಳೆಯೊಬ್ಬರು ಕೈಯಲ್ಲಿ ನಿಂಬೆಹಣ್ಣು ಹಿಡಿದಿರುವಂತೆ, ಇಲ್ಲವೇ ಕೈಯನ್ನು ಮೇಲೆ ಎತ್ತಿರುವ ಚಿತ್ರಣದ ಮಾಸ್ತಿಕಲ್ಲುಗಳು ಪತ್ತೆಯಾಗಿವೆ. ಆದರೆ ಈ ಮಾಸ್ತಿಕಲ್ಲು ತುಂಬಾ ಅಪರೂಪ ಹಾಗೂ ವಿಶೇಷವಾಗಿದೆ.
ಶೈವಧರ್ಮದ ಪ್ರತೀಕವಾದ ಈ ಮಾಸ್ತಿಕಲ್ಲು ಎರಡು ಹಂತದಲ್ಲಿ ಕೆತ್ತಲಾಗಿದೆ. ರಾಜ ಪರಿವಾರ
, ರಾಜನ ಇಲ್ಲವೇ ಪಾಳೆಯಗಾರನ ಪತ್ನಿ ಅಥವಾ ಉಪ ಪತ್ನಿಯು ಸತಿ ಹೋಗಿರಬೇಕೆಂದು ತಿಳಿಬರುತ್ತದೆ.

ಏಕೆಂದರೆ ಚಿತ್ರದಲ್ಲಿ ಕೆತ್ತಿರುವ ಮಹಿಳೆಯು ನಿಂತಿರುವ ಭಂಗಿಯಲ್ಲಿರುವುದು ತುಂಬಾ ವಿಶೇಷವಾಗಿದೆ. ತಲೆಗೆ ಕಿರೀಟ ಇರಿಸಿಕೊಂಡಿದ್ದಾಳೆ. ಹಾಗೇ ನಡುವಿಗೆ ನಡುಪಟ್ಟಿ ಧರಿಸಿದ್ದಾಳೆ. ಇಳಿಬಿಟ್ಟ ಕಿವಿಯ ಓಲೆ ಕಾಣಸಿಗುತ್ತದೆ. ಹಾಗೇ ಪಟ್ಟಿಯಾಕರದ ಸೀರೆ ಧರಿಸಲಾಗಿದೆ ಮಾಸ್ತಿಕಲ್ಲನ್ನು ಯಾರೋ ನಿಧಿಕಳ್ಳರು ತುಂಡು ಮಾಡಿದ್ದಾರೆಂದು ತಂಡದ ಸದಸ್ಯ ಡಾ.ಗೋವಿಂದ ಅವರು ಮಾಹಿತಿ ನೀಡಿದ್ದಾರೆ.

 ವಿಜಯನಗರ ಸಾಮ್ರಾಜ್ಯದಲ್ಲಿ ಹೊಸಪೇಟೆಯ ಸಣ್ಣಕ್ಕಿ ವೀರಭದ್ರೇಶ್ವರ ಏರಿಯಾವನ್ನು ವರದರಾಜಮ್ಮನ ಪಟ್ಟಣ ಎಂದು ಕರೆಯುತ್ತಿದ್ದರು. ಚಿನ್ನಾoಬಿಕೆಯ ನೆನಪಿಗಾಗಿ ಇಂದಿನ ಚಿತ್ತವಾಡಿಗಿಯನ್ನು ಚಿನ್ನಾಪುರ ಎಂತಲೂ, ಕೃಷ್ಣದೇವರಾಯನ ತಾಯಿ ನಾಗಲಾದೇವಿ ನೆನಪಿಗಾಗಿ ಈಗಿನ ನಾಗೇನಹಳ್ಳಿಯನ್ನು ನಾಗಲಾಪುರ ಎಂತಲೂ ಈಗ ದೊರಕಿರುವ  ಶಾಸನಗಳಿಂದ ತಿಳಿದುಬರುತ್ತದೆ.

ಈಗ  ದೊರಕಿರುವ ಅಪ್ರಕಟಿತ ಶಾಸನವು ಸಹ ಮದ್ದಲಾಪುರ ಏರಿಯಾದಲ್ಲಿ ದೊರೆತಿರುವ ಶಾಸನವಾಗಿದೆ. ಮುದ್ದಾಲಾಪುರವು ಸಹ ಪುರಗಳ ಸಾಲಿನಲ್ಲಿ ಸೇರುತ್ತದೆ. ಇಲ್ಲಿ ದೊರಕಿರುವ ಈ ಮಾಸ್ತಿಕಲ್ಲು 5 ಅಡಿ ಎತ್ತರ, 2 ಅಡಿ ಅಗಲವಾಗಿದೆ.

ಈಗಾಗಲೇ ಅಲ್ಲಲ್ಲಿ ದೊರಕಿರುವ ಶಾಸನಗಳಿಗಿಂತ ತುಂಬಾ ವಿಶೇಷವಾಗಿದೆ. ಅಲ್ಲದೇ ಸತಿಹೋಗಿರುವ ಮಹಿಳೆಯು ಯಾರೆಂಬುದು ತಿಳಿಯುತ್ತಿಲ್ಲವಾದರೂ, ಇದು ವಿಜಯನರ ಸಾಮ್ರಾಜ್ಯದ ಶೈಲಿಯನ್ನು ಹೋಲುತ್ತದೆ. ಸತಿ ಸಹಗಮನವಾದ ಮಹಿಳೆಯು ಸಹಗಮನ ಆಗಿರುವುದನ್ನು ಸೂಚಿಸುತ್ತದೆ. ಸತಿಹೋಗಿರುವ ಮಹಿಳೆಯ ಪಕ್ಕದಲ್ಲಿ ಪದ್ಮಾಸನದ ಭಂಗಿಯಲ್ಲಿ ಕುಳಿತಿರುವ ಮಹಿಳೆಯ ಎಡ ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಂಡಿರುವಂತಿದೆ.

ಇದರಿಂದ ಈ ಮಹಿಳೆಯು ಸತಿಹೋಗಿರಬೇಕೆಂದು ತಿಳಿದುಬರುತ್ತದೆ. ಬಹುತೇಕ ಶಾಸನಗಳಲ್ಲಿ ಸತಿಹೋದ ಇಲ್ಲವೇ ವೀರಗಲ್ಲುಗಳಲ್ಲಿ ಆಯಾ ಧರ್ಮದ ಮೂರ್ತಿ ಎದುರಿಗೆ ಕೈ ಮುಗಿದು ಕುಳಿತಿರುವ ಚಿತ್ರಣ ಕಂಡುಬರುತ್ತಿತ್ತು. ಆದರೆ ಇಲ್ಲಿ ಮೇಲ್ಭಾಗದಲ್ಲಿ ಶಿವನಲಿಂಗಾಕಾರದ ಚಿತ್ರವಿದೆ. ಇದರಿಂದ ಈ ಮಾಸ್ತಿಕಲ್ಲು ಶೈವ ಧರ್ಮವನ್ನು ಪ್ರತಿನಿಧಿಸುತ್ತದೆ ಎಂದು ತಂಡದ ಮತ್ತೊರ್ವ ಸದಸ್ಯ ಪ್ರೊ. ಎಚ್. ತಿಪ್ಪೇಸ್ವಾಮಿ ಅವರ ಅಭಿಪ್ರಾಯವಾಗಿದೆ.

ಶಾಸನ ಪತ್ತೆ-
ಲಭ್ಯವಾಗಿರುವ ಮಾಸ್ತಿಕಲ್ಲಿನ ಅನತಿ ದೂರದಲ್ಲಿ ಬೃಹದಾಕಾರದ ಅಪೂರ್ಣ ಶಿವಲಿಂಗ ಚಿತ್ರವುಳ್ಳ ಶಾಸನ ಕಲ್ಲು ಪತ್ತೆಯಾಯಿತು.

6 ಅಡಿ ಎತ್ತರ ಮತ್ತು 2 ಅಡಿ ಅಗಲವುಳ್ಳ ಶಾಸನ ಕಲ್ಲಿಗೆ ಯಾವುದೇ ಕೆತ್ತನೆಯು ಕಾಣಸಿಗಲಾರದು. ಆದರೂ ಈ ಕಲ್ಲಿನ ಮೇಲ್ಭಾಗದ ಎಡಕ್ಕೆ ಸೂರ್ಯ, ಬಲಕ್ಕೆ ಚಂದ್ರ ಇರುವ ಚಿತ್ರಗಳಿವೆ. ಇದರ ಕೆಳಗೆ ಸುಂದರವಾದ ಶಿವಲಿಂಗ ಚಿತ್ರವನ್ನು ಕೆತ್ತಲಾಗಿದೆ. ಇಂತಹ ಅಪರೂಪದ ಕಲ್ಲುಗಳನ್ನು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಯು ಸಂರಕ್ಷಣೆ ಮಾಡಬೇಕಾಗಿದೆ ಎಂದು ವಿಜಯನಗರ ತಿರುಗಾಟ ಸಂಶೋಧನ ತಂಡವು ಒತ್ತಾಯಿಸಿದೆ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ