Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೂನ್ 21ರಂದು ವಿಶ್ವ ಯೋಗ ದಿನಾಚರಣೆ-ದಿವ್ಯ ಜ್ಞಾನಾನಂದ ಶ್ರೀ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕಳೆದ ಹತ್ತು ವರ್ಷಗಳಿಂದ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ದೊಡ್ಡಬಳ್ಳಾಪುರ ವಿಶ್ವ ಯೋಗ ದಿನಾಚರಣಾ ಟ್ರಸ್ಟ್
  ವತಿಯಿಂದ ನೆಡೆಸಿಕೊಂಡು ಬರುತ್ತಿದ್ದೇವೆ ಅಂತೆಯೇ ಈ ವರ್ಷವೂ ಕೂಡ  ಜೂನ್ 21ರ ಶನಿವಾರ ಬೆಳಿಗ್ಗೆ ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಯೋಗಾಭ್ಯಾಸ ಆಯೋಜನೆ ಮಾಡಲಾಗಿದೆ ಎಂದು ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ ತಿಳಿಸಿದರು.

ನಗರದ ಕೆ ಎಂ ಎಚ್ ಕಲ್ಯಾಣ ಮಂಟಪದಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮಲ್ಲಿ ಕಡಿಮೆ ಸಂಪನ್ಮೂಲವಿದ್ದರೂ ಜಿಲ್ಲಾ ಮಟ್ಟದ ಕಾರ್ಯಕ್ರಮದಂತೆ ಪ್ರತಿ ವರ್ಷವೂ ಆಚರಿಸಲಾಗುತ್ತದೆ. ತಾಲ್ಲೂಕಿನ ಎಲ್ಲಾ ಯೋಗಪಟುಗಳು, ಯೋಗದ ಬಗ್ಗೆ ಅಭಿರುಚಿ ಹೊಂದಿರುವ  ಆತ್ಮೀಯರು ಒಳಗೊಂಡು ಈ ಕಾರ್ಯಕ್ರಮ ರೂಪಿಸಲಾಗಿದೆ  ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆಗೆ ಯೋಗಾಸನ, ಪ್ರಾಣಾಯಾಮ ನೀಡುವ ಮೂಲಕ ಅವರಿಗೆ ಉತ್ತಮ ಆರೋಗ್ಯ, ನೆಮ್ಮದಿ ಜೊತೆಗೆ ಉತ್ತಮ ಜೀವನಶೈಲಿ ಕಲ್ಪಿಸುವುದೇ ನಮ್ಮೆಲ್ಲರ ಮುಖ್ಯ ಉದ್ದೇಶವಾಗಿದೆ ಎಂದರು.

 ಕಾರ್ಯಕ್ರಮವು ಶನಿವಾರ ಬೆಳಗ್ಗೆ 6:30 ಕ್ಕೆ ಪ್ರಾರಂಭವಾಗಲಿದ್ದು  ಕಾರ್ಯಕ್ರಮದ ಮೊದಲು ಸ್ಥಳೀಯ ಯೋಗಪಟುಗಳು,ಯೋಗ ವಿದ್ಯಾರ್ಥಿಗಳು  ಹಾಗೂ ಯೋಗ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಇರುತ್ತದೆ . ಕಾರ್ಯಕ್ರಮವನ್ನು ವಿಳಂಬ ಮಾಡದೆ  ಸಮಯಕ್ಕೆ ಸರಿಯಾಗಿ ಪ್ರಾರಂಭಿಸಲಾಗುವುದು . ಭಾರತ ಸರ್ಕಾರ ಆಯುಷ್ ಇಲಾಖೆ  ಈಗಾಗಲೇ ಸೂಚಿಸಿರುವ ಯೋಗಾಸನಗಳನ್ನು  ತಾಲೂಕಿನ ಹಿರಿಯರಿಗೆ ನಮ್ಮ ಟ್ರಸ್ಟ್ ನ ಸಹಯೋಗ ಹಾಗೂ ತಾಲ್ಲೂಕಿನ ದಾನಿಗಳ ನೆರವಿನಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕಳೆದ ಏಳು ದಿನಗಳಿಂದ   ನಿರಂತರವಾಗಿ ಕುಳಿತು ಮಾಡುವ ಯೋಗಾಸನ, ಪ್ರಾಣಾಯಾಮ, ವ್ಯಾಯಾಮ  ಅಭ್ಯಾಸ ಮಾಡಿಸುತ್ತಿದ್ದು, ಹೊಸದಾಗಿ ಬರುವ ಸಾರ್ವಜನಿಕರಿಗೆ  ಈಗಾಗಲೇ ಅಭ್ಯಾಸ ಮಾಡಿರುವ  ನಮ್ಮ ಶಿಬಿರಾರ್ಥಿಗಳು ಸಹಾಯ ಮಾಡಲಿದ್ದಾರೆ ಎಂದರು.

ದೊಡ್ಡಬಳ್ಳಾಪುರ ವಿಶ್ವ ಯೋಗ ದಿನಾಚರಣಾ ಟ್ರಸ್ಟ್  ಅಧ್ಯಕ್ಷ ಕೆ ಎಂ ಹನುಮಂತರಾಯಪ್ಪ ಮಾತನಾಡಿ  ದೇಶದ ಪ್ರಧಾನ ಮಂತ್ರಿಗಳು  ಯೋಗ ದಿನದ ಆಚರಣೆ ಮಾಡುವಂತೆ ಕರೆ ಕೊಟ್ಟಾಗ  ಮುಸ್ಲಿಂ ರಾಷ್ಟ್ರಗಳನ್ನು ಒಳಗೊಂಡಂತೆ ಹತ್ತಾರು  ರಾಷ್ಟ್ರಗಳು  ವಿಶ್ವ ಯೋಗ ದಿನಾಚರಣೆಯನ್ನು  ಆಚರಿಸಿದ್ದನ್ನು ನಾವೆಲ್ಲರೂ ನೋಡಿದ್ದೇವೆ . ಕಳೆದ ಹತ್ತು ವರ್ಷಗಳಿಂದ ತಾಲೂಕಿನಲ್ಲಿ  ವಿಶ್ವ ಯೋಗ ದಿನಾಚರಣೆಯನ್ನು  ಶಿಸ್ತಿನೊಂದಿಗೆ  ಆಚರಿಸಿಕೊಂಡು ಬರುತ್ತಿದ್ದು  ಅಂತೆಯೇ ಈ ಬಾರಿಯೂ ಕೂಡ ತಾಲೂಕಿನ ಎಲ್ಲಾ ಯೋಗ ಕೇಂದ್ರಗಳಿಗೆ , ಯೋಗ ಪಟುಗಳಿಗೆ, ಯೋಗಾಸನ ಮಾಡಲು ಬಯಸುವ ಎಲ್ಲ ಮನಸ್ಸುಗಳಿಗೆ  ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದೇವೆ . ಯೋಗಾಸನ ಮಾಡುವುದು ತೋರ್ಪಡಿಕೆಗಲ್ಲ  ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಎಂಬುದು  ಸಾರ್ವಜನಿಕರಿಗೆ ಅರಿವಾಗಬೇಕಿದೆ ಎಂದರು.

 ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆಯುವ ವಿಶ್ವ ಯೋಗ ದಿನದ ಆಚರಣೆಯಲ್ಲಿ ಯಾವುದೇ ಸರ್ಕಾರಿ ಹಣವನ್ನು ಬಳಸದೆ ದಾನಿಗಳಿಂದ ನೆರವಿನಿಂದ ಟ್ರಸ್ಟ್ ಸದಸ್ಯರ ನೆರವಿನಿಂದ  ತಾಲೂಕು ಮಟ್ಟದ ಕಾರ್ಯಕ್ರಮವನ್ನು ಆಯೋಜನೆ ಮಾಡುವುದು ವಿಶೇಷವಾಗಿದೆ, ಜಿಲ್ಲಾ ಕೇಂದ್ರವಲ್ಲದಿದ್ದರೂ  ದೇವನಹಳ್ಳಿಯ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ  ವಿಶ್ವ ಯೋಗ ದಿನದ ಆಚರಣೆ ಮಾಡುವುದು ಸರಿಯಲ್ಲ, ನಮ್ಮ ದೊಡ್ಡಬಳ್ಳಾಪುರ ತಾಲೂಕು  ಕಂದಾಯದಲ್ಲಾಗಲಿ, ವಿಸ್ತೀರ್ಣದಲ್ಲಾಗಲಿ, ಜನಸಂಖ್ಯೆಯಾಗಲಿ, ದೇವನಹಳ್ಳಿಗಿಂತಲೂ ಹೆಚ್ಚಿದೆ  ಕೇವಲ ಕೆಲ ರಾಜಕೀಯ ಕಾರಣಗಳಿಂದಾಗಿ  ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು  ದೇವನಹಳ್ಳಿಯಲ್ಲಿ ಮಾಡುವುದು ಸರಿಯಲ್ಲ  ಮುಂದೆಯಾದರೂ  ನಮ್ಮ ತಾಲೂಕಿನಲ್ಲಿ  ಜಿಲ್ಲಾ ಮಟ್ಟದ ಕಾರ್ಯಕ್ರಮಗಳು ನಡೆಯಲಿ ಎಂದರು.

 ತಾಲೂಕಿನಾದ್ಯಂತ ಯೋಗ ಉಪಶಿಬಿರಗಳ ಆಯೋಜನೆ-  ಯೋಗಾಸನ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಈ ನಿಟ್ಟಿನಲ್ಲಿ ತಾಲೂಕಿನ  ಯಾವುದೇ ವಾರ್ಡ್, ಗ್ರಾಮಗಳಲ್ಲಿ ಸುಮಾರು 25 ರಿಂದ 50 ಜನ ಸೇರುವ  ಯಾವುದೇ ಸಭಾಂಗಣ ಹೊರ ಮೈದಾನಗಳಲ್ಲಿ  ದೊಡ್ಡಬಳ್ಳಾಪುರ ವಿಶ್ವ ಯೋಗ ದಿನಾಚರಣಾ ಟ್ರಸ್ಟ್  ವತಿಯಿಂದ ವಿಶೇಷ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಯೋಗಾಸನ ಪ್ರಾಣಯಾಮ ಆರೋಗ್ಯ ಮಾಹಿತಿ  ತಿಳಿಸಲು ಯೋಜನೆ ರೂಪಿಸಲಾಗಿದೆ . ಈ ಯೋಜನೆಯ ಪ್ರಯೋಜನವನ್ನು  ತಾಲೂಕಿನ ಜನತೆ ಪಡೆದುಕೊಳ್ಳಬೇಕೆಂದು  ಪುಷ್ಪಾಂಡಜಮುನಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ  ಮನವಿ ಮಾಡಿದರು.

ದೊಡ್ಡಬಳ್ಳಾಪುರ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ಉಪಾಧ್ಯಕ್ಷ ತ.ನಾ.ಪ್ರಭುದೇವ್ ಮಾತನಾಡಿ ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಯೋಗಾಸನ ಕೇಂದ್ರಗಳ ಮುಖಂಡರು, ನಿರಂತರ ಯೋಗಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು  ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ತಾಲೂಕಿನ ಎಲ್ಲ ಜನತೆ  ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿ ಎಂಬುದೇ  ನಮ್ಮೆಲ್ಲರ ಉದ್ದೇಶ ಉತ್ತಮ ಆರೋಗ್ಯಕ್ಕಾಗಿ  ಯೋಗಾಸನ ಅತ್ಯವಶ್ಯಕ ನಿರಂತರ ಸರಳ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ನಮ್ಮ ಆರೋಗ್ಯದಲ್ಲಿ  ಬಹಳಷ್ಟು ಬದಲಾವಣೆ ಕಾಣಬಹುದಾಗಿದೆ  ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಸಭೆಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ಉಪಾಧ್ಯಕ್ಷ ತ..ಪ್ರಭುದೇವ್, ಡಾ.ವಿಜಯ ಕುಮಾರ್, ಕಾರ್ಯದರ್ಶಿ ಬಿ.ಜಿ. ಅಮರನಾಥ್, ಸಹಕಾರ್ಯದರ್ಶಿ ಎಂ.ಕೆ. ವತ್ಸಲ, ಖಜಾಂಚಿ ಪಿ ಕೆ ಶ್ರೀನಿವಾಸ್, ಪ್ರಮುಖರಾದ ಬಿ ಎಲ್ ಸೀತಾರಾಮ್ , ಡಿ ವಿ ಗಿರೀಶ್, ಡಿ ಪಿ ಗೋಪಾಲ್ ಸೇರಿದಂತೆ ಹಲವರು ಹಾಜರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ