ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಂಡವಾಳದಾರರಿಗೆ ನೂತನ ರೀತಿಯ ಹಿಂಬು ನೀಡಿದೆ. ಸಾರ್ವಜನಿಕ ಆರೋಗ್ಯದ ಬಗ್ಗೆ ಗಮನವನ್ನು ನೀಡುತ್ತಾ ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್ ರೋಗಿಗಳ ಚಿಕಿತ್ಸೆ ಕಡೆಗೆ ಗಮನಹರಿಸಿರುವುದು ಸ್ವಾಗತ ಅರ್ಹ.
ಕೆಳ ಮಧ್ಯಮ ವೇತನದಾರರಿಗೆ ಆದಾಯ ವಿನಾಯಿತಿಯಲ್ಲಿ ಬಹುದೊಡ್ಡ ಕೊಡಿಗೆ ನೀಡಲಾಗಿದ್ದರು 12 ಲಕ್ಷ 75 ಸಾವಿರದ ನಂತರ ಮತ್ತೆ ತೆರಿಗೆ ಶ್ರೇಣಿ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ.
ಶ್ರೀಮಂತಿಕೆಯನ್ನ ಕಾಣಬಯಸುವ ಮಾಧ್ಯಮ ವರ್ಗದವರಿಗೆ ನಿರಾಸದಾಯಕವಾಗಿರುತ್ತದೆ. ಒಟ್ಟಾರೆಯಾಗಿ ಬಡವರು, ರೈತರು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೊಸ ಚಿಂತನೆಯನ್ನು ಒಡಮೂಡಿಸಿದೆ.
ಎಲ್ಲಾ ವರ್ಗದ ಜನರ ಮನ ಸಂತೋಷ ಪಡಿಸಲು ಹೊಸ ಹೆಜ್ಜೆಯನ್ನು ಇಡಲಾಗಿದೆ ಎಂಬುದೇ ಈ ಮಂಗಡಪತ್ರದ ವಿಶೇಷ. ಆದರೂ ಮಾನವ ಹಕ್ಕುಗಳು ,ಮಾನವ ಸ್ವತಂತ್ರ ,ಮಾನವ ಅಭಿವೃದ್ಧಿ ಸೂಚಿಗಳು, ಮಾನವನ ಅತ್ಯಂತ ಸಂತೋಷದಾಯಕ ಸೂಚಿಗಳ ಬಗ್ಗೆ ಹೆಚ್ಚು ಹೊತ್ತು ನೀಡಿದಾಗ ನಿಜವಾದ ಮಾನವ ಅಭಿವೃದ್ಧಿ ಸಂಭವಿಸಬಹುದು ಇದರ ಬಗ್ಗೆ ಗಮನ ಹರಿಸುವುದು ಉತ್ತಮ.
ಡಾ.ಪ್ರವೀಣ್ ಕುಮಾರ್ ಎಚ್ ಎಲ್, ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕರು ಹಾಗೂ ಆರ್ಥಿಕ ತಜ್ಞರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹೊಳಲ್ಕೆರೆ.