ಕಣಿವೆಮಾರಮ್ಮನ ಜಾತ್ರೆ ಅಲಂಕೃತ ಸಾರೋಟಿನಲ್ಲಿ ಮೆರವಣಿಗೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನ ಜಾತ್ರೆ ಆರಂಭಗೊಂಡಿದ್ದು
, ಗುರುವಾರ ಬೆಳಿಗ್ಗೆ ಅಲಂಕೃತ ಸಾರೋಟಿನಲ್ಲಿ ಕಣಿವೆಮಾರಮ್ಮನ ಮೆರವಣಿಗೆ ರಾಜಬೀದಿಗಳಲ್ಲಿ ಸಾಗಿತು. ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಉಮೇಶ್‌ಬಾಬುರವರು ಮೆರವಣಿಗೆಗೆ ಚಾಲನೆ ನೀಡಿದರು.

- Advertisement - 

ವಿವಿಧ ಬಗೆಯ ಹೂವು ಹಾಗೂ ಹಾರಗಳಿಂದ ಸಿಂಗರಿಸಿದ್ದ ಕಣಿವೆಮಾರಮ್ಮನ ಮೆರವಣಿಗೆ ಮದಕರಿವೃತ್ತದ ಮೂಲಕ ಕರುವಿನಕಟ್ಟೆ ಸರ್ಕಲ್, ಏಕನಾಥೇಶ್ವರಿ ಪಾದಗುಡಿ, ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗ, ಆನೆಬಾಗಿಲಿನಿಂದ ದೇವಸ್ಥಾನ ತಲುಪಿತು.

- Advertisement - 

ಡೊಳ್ಳು ಕುಣಿತ, ತಮಟೆ, ಸೋಮನಕುಣಿತ, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿದ್ದರು. ಸೈಬರ್ ಕ್ರೈಂ ಡಿ.ವೈ.ಎಸ್ಪಿ. ಉಮೇಶ್ ಈಶ್ವರ್‌ನಾಯ್ಕ, ಸಶಸ್ತ್ರ ಮೀಸಲು ಪಡೆಯ ಡಿ.ವೈ.ಎಸ್ಪಿ. ಗಣೇಶ್ ಸೇರಿದಂತೆ ನಿವೃತ್ತ ಪೊಲೀಸ್ ಅಧಿಕಾರಿಗಳು ಮೆರವಣಿಗೆ ಸಂದರ್ಭದಲ್ಲಿದ್ದರು.

 

- Advertisement - 

 

Share This Article
error: Content is protected !!
";