ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿಯ ಅಧ್ಯಕ್ಷರು ಹಾಗೂ ಉಪನ್ಯಾಸಕ ಯೋಗೀಶ್ ಸಹ್ಯಾದ್ರಿ ಇವರು ಚಿತ್ರದುರ್ಗ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.
ಕನಕ ಬ್ಯಾಂಕ್ ಅಧ್ಯಕ್ಷ ಲೋಕೇಶ್ ಕುಮಾರ್ ಹೆಚ್.ಎನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಯೋಗೀಶ್ ಸಹ್ಯಾದ್ರಿ ಆಯ್ಕೆ ಆಗಿದ್ದು ಇವರಿಗೆ ಕನಕ ಬ್ಯಾಂಕ್ ಸದಸ್ಯರು ಹಾಗೂ ಪದಾಧಿಕಾರಿಗಳು ಶುಭ ಕೋರಿದ್ದಾರೆ.
ಇತ್ತೀಚೆಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಯೋಗೀಶ್ ಸಹ್ಯಾದ್ರಿಯವರು, ಪ್ರಸ್ತುತ ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಹಾಗೂ ಚಿತ್ರದುರ್ಗ ತಾಲ್ಲೂಕು ಕುರುಬ ಸಂಘದ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ನಿರ್ದೇಶಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಅಧ್ಯಕ್ಷ ಹೆಚ್. ಎನ್. ಲೋಕೇಶ್ ಕುಮಾರ್, ಸಂಸ್ಥಾಪಕ ಅಧ್ಯಕ್ಷ ಕೆ.ಬಿ. ರಾಮಪ್ಪ, ಉಪಾಧ್ಯಕ್ಷ ಓಂಕಾರಪ್ಪ, ನಿರ್ದೇಶಕರುಗಳಾದ ಪುಷ್ಪರಾಜ್, ದೊಡ್ಡಲಿಂಗಪ್ಪ, ಕೃಷ್ಣಪ್ಪ, ಸೋಮಶೇಖರ್, ನೀಲಗಿರಿಯಪ್ಪ, ನರಸಿಂಹ ಮೂರ್ತಿ, ಎಂ.ಎಸ್. ಬಸವರಾಜ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.