Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: ತನಿಖೆಗೆ ಡಿಸಿ ನೇತೃತ್ವದ ವಿಶೇಷ ತಂಡ ರಚನೆ!

Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಬೌರಿಂಗ್ ಆಸ್ಪತ್ರೆಯ ಆವರಣ ಗೋಡೆ ಕುಸಿದು ಏಳು ಮಂದಿ ಬಲಿಯಾದ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ದಾರುಣ ಘಟನೆಯ ನೈಜ ಕಾರಣಗಳನ್ನು ಪತ್ತೆಹಚ್ಚಲು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ತನಿಖೆ ಮಾಡಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಹಾಗೂ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಒಂದು ಬಾಲಕಿ ಸೇರಿದಂತೆ ಏಳು ಜೀವಗಳನ್ನು ಬಲಿಪಡೆದ ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತುರ್ತು ವರದಿ ನೀಡುವಂತೆ ಸೂಚಿಸಿದ್ದಾರೆ.

ಎರಡು ಹಂತದ ತನಿಖೆ:
ದುರಂತದ ಸತ್ಯಾಸತ್ಯತೆ ತಿಳಿಯಲು ಸರ್ಕಾರ ಎರಡು ಪ್ರತ್ಯೇಕ ತಂಡಗಳನ್ನು ನೇಮಿಸಿದೆ.
ಜಿಲ್ಲಾಧಿಕಾರಿಗಳ ತಂಡ: ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಯಲಹಂಕ ತಹಶೀಲ್ದಾರ್ ನೇತೃತ್ವದ ತಂಡವು ಸ್ಥಳೀಯ ವಿಚಾರಣೆ ನಡೆಸಿ
7 ದಿನಗಳೊಳಗೆ ವರದಿ ನೀಡಲಿದೆ.

ತಾಂತ್ರಿಕ ಸಮಿತಿ: ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಮೋಹನ್ ಕೆ. ಅವರ ನೇತೃತ್ವದಲ್ಲಿ ನಾಲ್ವರು ಪರಿಣಿತ ಅಧಿಕಾರಿಗಳ ತಂಡವು ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಿದೆ.

ತನಿಖಾ ತಂಡದ ಮುಂದಿರುವ ಪ್ರಮುಖ ಪ್ರಶ್ನೆಗಳು: ತನಿಖಾ ತಂಡವು ಈ ಕೆಳಗಿನ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲುವಂತೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಗುಣಮಟ್ಟದ ತಪಾಸಣೆ: ಗೋಡೆಯ ವಿನ್ಯಾಸ ಹೇಗಿತ್ತು? ನಿರ್ಮಾಣಕ್ಕೆ ಬಳಸಿರುವ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿದ್ದವೇ?.

ನಿರ್ವಹಣಾ ಲೋಪ: ಕಟ್ಟಡ ಅಥವಾ ಗೋಡೆಯನ್ನು ನಿಯಮಿತವಾಗಿ ನಿರ್ವಹಣೆ ಮಾಡಲಾಗುತ್ತಿತ್ತೇ? ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿ ಏನು?.

ಜೀವಿತಾವಧಿ: ಆವರಣ ಗೋಡೆಯ ಕಾಲಾವಧಿ ಮುಗಿದಿತ್ತೇ? ಮುಗಿದಿದ್ದರೂ ಅದನ್ನು ಪುನರ್ ನಿರ್ಮಿಸದೆ ಇರಲು ಕಾರಣವೇನು?.
ಹೊಸ ಕಾಮಗಾರಿಗಳ ಪರಿಣಾಮ: ಇತ್ತೀಚೆಗೆ ಆಸ್ಪತ್ರೆ ಆವರಣದಲ್ಲಿ ನಡೆದ ಇತರೆ ಕಟ್ಟಡ ಕಾಮಗಾರಿಗಳು ಈ ಗೋಡೆಯನ್ನು ದುರ್ಬಲಗೊಳಿಸಿವೆಯೇ
?. ಅಂದಾಜು ಪಟ್ಟಿ: ಹೊಸ ಗೋಡೆ ನಿರ್ಮಾಣಕ್ಕೆ ಅನುದಾನ ಕಾಯ್ದಿರಿಸಲಾಗಿದ್ದರೂ ಕೆಲಸ ನಡೆಯದಿದ್ದರೆ ಅದಕ್ಕೆ ಹೊಣೆಗಾರರು ಯಾರು?.

ಸರ್ಕಾರದ ಎಚ್ಚರಿಕೆ: "ಆಸ್ಪತ್ರೆಯ ತಡೆಗೋಡೆಯನ್ನು ಸಕಾಲದಲ್ಲಿ ದುರಸ್ತಿ ಮಾಡದ ಕಾರಣದಿಂದಲೇ ಈ ದುರಂತ ಸಂಭವಿಸಿದೆ ಎಂಬ ಪ್ರಾಥಮಿಕ ಮಾಹಿತಿ ಇದೆ. ತನಿಖಾ ವರದಿ ಬಂದ ತಕ್ಷಣ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು," ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಈ ತನಿಖೆಯು ನಗರದ ಇತರೆ ಹಳೆಯ ಸರ್ಕಾರಿ ಕಟ್ಟಡಗಳ ಸುರಕ್ಷತೆಯ ಬಗ್ಗೆಯೂ ಜಾಗೃತಿ ಮೂಡಿಸುವ ನಿರೀಕ್ಷೆಯಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೌರಾಣಿಕ ನಾಟಕಗಳು ಕನ್ನಡ ಭಾಷೆಯ ಸೊಗಡನ್ನು ಬೆಳೆಸಲು ಸಹಕಾರಿ- ಗೋವಿಂದರಾಜ್ಪತ್ರಿಕೆ ಓದುವುದರ ಮೂಲಕ ಮಕ್ಕಳು ಓದುವ ಹವ್ಯಾಸ ರೂಢಿಸಿ: ಎಸ್.ಎಮ್ ಲಿಖಿತ್ಸಿಎಂ ಬದಲಾವಣೆ ಚರ್ಚೆಗೆ 'ಫುಲ್ ಸ್ಟಾಪ್': ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದ ಪರಮೇಶ್ವರ್ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: ತನಿಖೆಗೆ ಡಿಸಿ ನೇತೃತ್ವದ ವಿಶೇಷ ತಂಡ ರಚನೆ!ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯಕ್ಕೆ ಬ್ರೇಕ್ ಹಾಕಿದ ಹೈಕೋರ್ಟ್ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ: ಇಂದಿನಿಂದ ಹೊಸ ದರ ಜಾರಿ!ವಿವಿಧ ಜಿಲ್ಲೆಗಳ 23 ಸರ್ಕಾರಿ ಪ್ರೌಢಶಾಲೆಗಳು ಪಿಯು ಕಾಲೇಜ್ ಗಳಾಗಿ ಮೇಲ್ದರ್ಜೆಗೆರಾಜ್ಯಕ್ಕೆ ಮತ್ತೊಂದು ಏರ್‌ಪೋರ್ಟ್: ಜಾಗ ಫಿಕ್ಸ್, ಕನಸು ನನಸು!ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ನಿರ್ವಹಣೆಯಲ್ಲಿ ಕೇಂದ್ರ ವೈಫಲ್ಯ-ಡಿಸಿಎಂಗುಪ್ತಚರ ಇಲಾಖೆಗೆ ಹೊಸ ಸಾರಥಿ: ಸಿದ್ದರಾಮಯ್ಯ ನೀಡಿದ ಸಂದೇಶವೇನು?