Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪೌರಾಣಿಕ ನಾಟಕಗಳು ಕನ್ನಡ ಭಾಷೆಯ ಸೊಗಡನ್ನು ಬೆಳೆಸಲು ಸಹಕಾರಿ- ಗೋವಿಂದರಾಜ್

Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ನಾಟಕಗಳು, ವೃತ್ತಿ ರಂಗಭೂಮಿ ಮತ್ತು  ಗ್ರಾಮೀಣ ಪ್ರದೇಶದ ಪೌರಾಣಿಕ  ನಾಟಕಗಳು ಕನ್ನಡ ಭಾಷೆಯ ಸೊಗಡನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು‌ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ತಿಳಿಸಿದರು.

     ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನಡೆದ  ಸಾಂಸ್ಕೃತಿಕ ಕಲಾ ಜ್ಯೋತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯಕ್ಷಗಾನ, ದೊಡ್ಡಾಟ, ಬಯಲಾಟ ಮುಂತಾದ ಜನಪದ ಪ್ರಕಾರಗಳು ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ ಎಂದರು.

 ಆಧುನಿಕ ಕನ್ನಡ ರಂಗಭೂಮಿಯು ಸಾಮಾಜಿಕ ಸಮಸ್ಯೆಗಳನ್ನು, ಮೌಲ್ಯಗಳನ್ನು ಮತ್ತು ಸಾಂಸ್ಕೃತಿಕ ತಲ್ಲಣಗಳನ್ನು ಪ್ರದರ್ಶಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತದೆ.  ಕನ್ನಡ ರಂಗಭೂಮಿಯಲ್ಲಿ ನಿರಂತರ ಪ್ರಯೋಗಗಳು ನಡೆಯುತ್ತಲೇ ಇವೆ ಎಂದರು.

ಹಿರಿಯ ರಂಗಭೂಮಿ ಕಲಾವಿದ ಸುರಧೇನುಪುರ ಶಿವರಾಜು ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ  ವೈವಿಧ್ಯಮಯ ಉಪಭಾಷೆಗಳಾಗಿ  ಪ್ರಯೋಗಗೊಳ್ಳುತ್ತಿದೆ. ರಂಗಭೂಮಿ ಕಲಾವಿದರ  ಕನ್ನಡ ಭಾಷೆಯ ಬಳಕೆ ಮತ್ತು ಸ್ಪಷ್ಟ ಉಚ್ಚಾರಣೆ ಅನನ್ಯವಾಗಿದೆ.  ಆಧುನಿಕ ಮನರಂಜನಾ ಮಾಧ್ಯಮಗಳ ಮಧ್ಯೆ ರಂಗಭೂಮಿ ಕಲೆ ತನ್ನದೇ ಆದ ಅಸ್ತಿತ್ವವನ್ನು ಪಡೆದುಕೊಂಡಿರುವುದು ಸಂತೋಷಕರ ವಿಚಾರವಾಗಿದೆ ಎಂದರು.

 ಇದೆ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ‌ನಗರದ ಜಾನಪದ ಕಲಾವಿದೆ ರತ್ನಮ್ಮ ಮತ್ತು  ಜಂಗಮಕೋಟೆ ರಂಗಭೂಮಿ ಕಲಾವಿದೆ ಕದಿರಮ್ಮ. ಅವರನ್ನು  ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘದಿಂದ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ  ಹಿರಿಯ ರಂಗಭೂಮಿ  ಕಲಾವಿದೆ ಜಯಮ್ಮ,  ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘದ ಗೌರವ ಅಧ್ಯಕ್ಷ ಎನ್.ರಾಮಮೂರ್ತಿ,  ಕಾರ್ಯದರ್ಶಿ ಚಂದ್ರಶೇಖರ್,  ಉಪಾಧ್ಯಕ್ಷ ಕೆ.ನರಸಿಂಹಯ್ಯ, ಖಜಾಂಚಿ  ಮುನಿಪಾಪಯ್ಯ ನಿರ್ದೇಶಕ ಜಿ.ರಾಮು, ವೆಂಕಟರಾಜು  ಮುಂತಾದವರು ಭಾಗವಹಿಸಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೌರಾಣಿಕ ನಾಟಕಗಳು ಕನ್ನಡ ಭಾಷೆಯ ಸೊಗಡನ್ನು ಬೆಳೆಸಲು ಸಹಕಾರಿ- ಗೋವಿಂದರಾಜ್ಪತ್ರಿಕೆ ಓದುವುದರ ಮೂಲಕ ಮಕ್ಕಳು ಓದುವ ಹವ್ಯಾಸ ರೂಢಿಸಿ: ಎಸ್.ಎಮ್ ಲಿಖಿತ್ಸಿಎಂ ಬದಲಾವಣೆ ಚರ್ಚೆಗೆ 'ಫುಲ್ ಸ್ಟಾಪ್': ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದ ಪರಮೇಶ್ವರ್ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತ: ತನಿಖೆಗೆ ಡಿಸಿ ನೇತೃತ್ವದ ವಿಶೇಷ ತಂಡ ರಚನೆ!ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯಕ್ಕೆ ಬ್ರೇಕ್ ಹಾಕಿದ ಹೈಕೋರ್ಟ್ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆ: ಇಂದಿನಿಂದ ಹೊಸ ದರ ಜಾರಿ!ವಿವಿಧ ಜಿಲ್ಲೆಗಳ 23 ಸರ್ಕಾರಿ ಪ್ರೌಢಶಾಲೆಗಳು ಪಿಯು ಕಾಲೇಜ್ ಗಳಾಗಿ ಮೇಲ್ದರ್ಜೆಗೆರಾಜ್ಯಕ್ಕೆ ಮತ್ತೊಂದು ಏರ್‌ಪೋರ್ಟ್: ಜಾಗ ಫಿಕ್ಸ್, ಕನಸು ನನಸು!ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ನಿರ್ವಹಣೆಯಲ್ಲಿ ಕೇಂದ್ರ ವೈಫಲ್ಯ-ಡಿಸಿಎಂಗುಪ್ತಚರ ಇಲಾಖೆಗೆ ಹೊಸ ಸಾರಥಿ: ಸಿದ್ದರಾಮಯ್ಯ ನೀಡಿದ ಸಂದೇಶವೇನು?