ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ರಾಜ್ಯ ಸಾರಿಗೆ ಸಂಸ್ಥೆ ಸೇರಿದ ಸರ್ಕಾರಿ ಬಸ್ಸುಗಳು ರಸ್ತೆ ಮಧ್ಯ ಕೆಟ್ಟು ನಿಲ್ಲುವ ದೃಶ್ಯಗಳು ಕಾಣ ಸಿಗುತ್ತಿದೆ.
ಆ ಸಾಲಿಗೆ ಈಗ ಚಿಕ್ಕಮಗಳೂರು ತಾಲೂಕಿನಕೈಮರ ಸಮೀಪದಲ್ಲಿ ಇಂತಹದೇ ಘಟನೆಯೊಂದು ನಡೆದಿದೆ.
ಕೆಎಸ್ಆರ್ಟಿಸಿ ಬಸ್ಸೊಂದು ದಾರಿ ಮಧ್ಯೆದಲ್ಲಿ ನಿಂತಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಬಸ್ನ್ನು ಸ್ಟಾರ್ಟ್ ಮಾಡಲು ಚಾಲಕ, ನಿರ್ವಾಹಕ ತುಂಬಾ ಕಷ್ಟಪಟ್ಟರು ಸಾಧ್ಯವಾಗಿಲ್ಲ. ಕೊನೆಗೆ ಪ್ರಯಾಣಿಕರೇ ಇಳಿದು ತಳ್ಳಿದ್ದಾರೆ.
ಚಿಕ್ಕಮಗಳೂರು ನಗರದಿಂದ ದೇವೀರಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದ ಈ ಬಸ್ ಏಕಾಏಕಿ ದಾರಿ ಮಧ್ಯ ನಿಂತಿದೆ. ಎಷ್ಟೇ ಪ್ರಯತ್ನಿಸಿದರೂ ಸ್ಟಾರ್ಟ್ ಆಗಿಲ್ಲ. ಕೊನೆಗೆ ಎಲ್ಲರನ್ನು ಬಸ್ಸಿನಿಂದ ಕೇಳಗೆ ಇಳಿಸಿ, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಹಿಂದಕ್ಕೆ ತಳ್ಳಿದ್ದಾರೆ. ಈ ಬಗ್ಗೆ ಪ್ರಯಾಣಿಕರು ಸಾರಿಗೆ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

