ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಾವೋಸ್‌ವಿಶ್ವ ಆರ್ಥಿಕ ವೇದಿಕೆಯಲ್ಲಿ ಕರ್ನಾಟಕದ ಶಕ್ತಿ ಪ್ರದರ್ಶನ ಸ್ವಿಟ್ಜರ್ ಲೆಂಡ್ ನ ದಾವೋಸ್ ನಲ್ಲಿ ಜರುಗಿದ ವಿಶ್ವ ಆರ್ಥಿಕ ವೇದಿಕೆಯಲ್ಲಿ ನಮ್ಮ ರಾಜ್ಯಕ್ಕೆ ದೊರೆತ ಯಶಸ್ಸು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಕಳೆದ ವರ್ಷ ಫೆಬ್ರವರಿಯಲ್ಲಿ ಜರುಗಿದ #GIM2025 ರ ನಂತರ ಆಗಿರುವ ಬೆಳವಣಿಗೆಗಳು-ಹೂಡಿಕೆ ಅನುಷ್ಠಾಗಳು, GIM ಹೊರತಾಗಿ ಕಳೆದ 1 ವರ್ಷದ ಸಾಧನೆಗಳ ಕುರಿತು ಮಾಧ್ಯಮಗೋಷ್ಠಿ ನಡೆಸಿ ಅವರು ಮಾಹಿತಿ ಹಂಚಿಕೊಂಡರು.
ದಾವೋಸ್ ನಲ್ಲಿ 45+ ಫಲಪ್ರದ ಸಮಾಲೋಚನೆಗಳು:
ಏರೋಸ್ಪೇಸ್, ಡಿಫೆನ್ಸ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಆಹಾರ ಸಂಸ್ಕರಣೆ, ಬಾಹ್ಯಾಕಾಶ ತಂತ್ರಜ್ಞಾನ, ಜೀವವಿಜ್ಞಾನ, ಡೇಟಾ ಸೆಂಟರ್ ಗಳು, ಶುದ್ಧ ಇಂಧನ ಸೇರಿದಂತೆ ಆದ್ಯತಾ ವಲಯಗಳಲ್ಲಿ 25+ ಅಂತಾರಾಷ್ಟ್ರೀಯ ಮತ್ತು 15+ ಭಾರತೀಯ ಕಂಪನಿಗಳೊಂದಿಗೆ ಫಲಪ್ರದ ಸಂವಾದ ನಡೆಸಿದೆ ಎಂದು ಸಚಿವರು ಹೇಳಿದರು.
ಹೊಸ ಹೂಡಿಕೆಗಳ ಅವಕಾಶ:
ವಾಯುಯಾನ ಸಾಗಣೆ, ಆಹಾರ ಸಂಸ್ಕರಣೆ, ಶುದ್ಧ ಇಂಧನ, ಇಂಡಸ್ಟ್ರಿ 4.0, ಸ್ಪೇಸ್ ಟೆಕ್, ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC), R&D – ಈ ಕ್ಷೇತ್ರಗಳಲ್ಲಿ ಗಮನಾರ್ಹ ಬಂಡವಾಳ ಹೂಡಿಕೆ, ವಿಸ್ತರಣೆ ಮತ್ತು ಪಾಲುದಾರಿತ್ವದ ಸಾಧ್ಯತೆಗಳು ರಚನೆಯಾಗಿವೆ.
ಸರ್ಕಾರ-ಸರ್ಕಾರ (G2G) ಪಾಲುದಾರಿತ್ವ: ಲಿಚೆನ್ಸ್ಟೈನ್ ಮತ್ತು ಸಿಂಗಪುರ್ ಸರ್ಕಾರಗಳೊಂದಿಗೆ ಸಹಕಾರ ಬಲಪಡಿಸುವ ಕುರಿತು ಚರ್ಚೆ, ಜಂಟಿ ಹೂಡಿಕೆ ಆಕರ್ಷಿಸಲು ಪ್ರಯತ್ನ.
ಜಾಗತಿಕ ಚಿಂತಕರೊಂದಿಗೆ ಸಂವಾದ: IMF ಡೆಪ್ಯುಟಿ MD ಶ್ರೀಮತಿ ಗೀತಾ ಗೋಪಿನಾಥ್, ಝಿರೋಧಾ ಸಂಸ್ಥಾಪಕ ನಿಖಿಲ್ ಕಾಮತ್, Uplink ಮುಖ್ಯಸ್ಥ ಜಾನ್ ಡಟನ್, WEF ನ ಸೀನ್ ಡೋಹರ್ಟಿ ಅವರೊಂದಿಗೆ ಚರ್ಚೆ. ಜಾಗತಿಕ ಆರ್ಥಿಕ ಪರಿಸರ, ಉದ್ಯಮಶೀಲತೆ ಮತ್ತು ಭಾರತದ ಪಾತ್ರ ಕುರಿತು ವಿನಿಮಯ ನಡೆಸಲಾಯಿತು ಎಂದು ಸಚಿವ ಪಾಟೀಲ್ ತಿಳಿಸಿದರು.
ಮೂಲಸೌಕರ್ಯ ಮತ್ತು ನೀತಿ ಭರವಸೆಗಳು: Tier-2 & 3 ನಗರಗಳಲ್ಲಿ GCC ವಿಸ್ತರಣೆ, ಡೇಟಾ ಸೆಂಟರ್ ಗಳಿಗೆ ವಿಶ್ವಾಸಾರ್ಹ ವಿದ್ಯುತ್ ಮತ್ತು ನೀರಿನ ಪೂರೈಕೆ, ನೀರಿನ ದಕ್ಷ ನಿರ್ವಹಣೆ, ತ್ವರಿತ ಅನುಮತಿ ಪ್ರಕ್ರಿಯೆಗಳ ಮೇಲೆ ಒತ್ತು. AI ಪ್ರತಿಭೆ, GCC ಗಳು ಮತ್ತು ಶುದ್ಧ ಉತ್ಪಾದನೆಗೆ ಕರ್ನಾಟಕವು ಭಾರತದ ಪ್ರಮುಖ ತಾಣ ಎಂದು ಮನವರಿಕೆ.
AI, ಸೆಮಿಕಂಡಕ್ಟರ್ಗಳು, ಸ್ಪೇಸ್ ಟೆಕ್, ಇಂಡಸ್ಟ್ರಿ 4.0 ನಂತಹ ನೆಕ್ಸ್ಟ್-ಜೆನ್ ಉದ್ಯಮಗಳಿಗೆ ರಾಜ್ಯವನ್ನು ಆದ್ಯತಾ ತಾಣವಾಗಿ ಪ್ರಚಾರ.
ಪ್ರಮುಖ MNC ಗಳೊಂದಿಗೆ ಸಂವಾದ: ಕೋಕಾ-ಕೋಲಾ, ಲೆನೊವೊ, ಅಮೆಜಾನ್ ವೆಬ್ ಸರ್ವೀಸಸ್, ನೋಕಿಯಾ, ಪೇಪಾಲ್, ಸ್ನೈಡರ್ ಎಲೆಕ್ಟ್ರಿಕ್, ಕ್ಲೌಡ್ಫ್ಲೇರ್, ಇಂಪೀರಿಯಲ್ ಕಾಲೇಜ್ ಲಂಡನ್, ಮಿಸ್ಟ್ರಲ್ AI, ಆಕ್ಟೋಪಸ್ ಎನರ್ಜಿ, ಆಕ್ಸನ್ ಕೇಬಲ್ಸ್, ಕ್ಸೈಲೆಮ್, ವಾಯೆಜರ್ ಟೆಕ್ನಾಲಜೀಸ್, ವಾಸ್ಟ್ ಸ್ಪೇಸ್ ಸೇರಿದಂತೆ ಅನೇಕ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚೆ.
GIM ಬದ್ಧತೆಗಳು ಅನುಷ್ಠಾನಗೊಳ್ಳುತ್ತಿವೆ : ಕಳೆದ ವರ್ಷ ಫೆಬ್ರವರಿಯಲ್ಲಿ 10.27 ಲಕ್ಷ ಕೋಟಿ ಹೂಡಿಕೆ ಒಪ್ಪಂದಗಳಾಗಿದ್ದು. ಒಂದು ವರ್ಷದೊಳಗೆ, 50% ಹೂಡಿಕೆ ಬದ್ಧತೆಗಳು ‘ಕರ್ನಾಟಕ ಉದ್ಯೋಗ ಮಿತ್ರ‘ ಮೂಲಕ ಕಾರ್ಯರೂಪಕ್ಕೆ ಬರುತ್ತಿವೆ. ತಯಾರಿಕಾ ವಲಯದಲ್ಲಿ 60% ಕಾರ್ಯಗತಗೊಳ್ಳುತ್ತಾ ಮುಂಚೂಣಿಯಲ್ಲಿದೆ.
GIM ನಂತರದ ಹೊಸ ಹೂಡಿಕೆಗಳು: ಕಳೆದ 11 ತಿಂಗಳಲ್ಲಿ ತಯಾರಿಕೆ, ನವೀಕರಿಸಬಹುದಾದ ಇಂಧನ, ಡೇಟಾ ಸೆಂಟರ್ ಗಳು ಮತ್ತು GCC ಗಳಲ್ಲಿ 1.1 ಲಕ್ಷ ಕೋಟಿ ಹೂಡಿಕೆ ಹರಿದುಬಂದಿದೆ.
ESDM/ ಸೆಮಿ ಕಂಡಕ್ಟರ್ ಗಳು, EV, ಏರೋಸ್ಪೇಸ್ & ಡಿಫೆನ್ಸ್ ತಯಾರಿಕೆಯಲ್ಲಿ ಮುಂದೆ 1.5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ. ಕರ್ನಾಟಕ ಭರವಸೆಗಳನ್ನು ಕಾರ್ಯರೂಪಕ್ಕೆ ತರುವ ರಾಜ್ಯ! ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

