ಸಾಹಿತ್ಯ ಸಮ್ಮೇಳನದಲ್ಲಿ ಮಾರ್ದನಿಸಿದ ಅಪ್ಪರ್ ಭದ್ರಾ ಕೂಗು

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು :
ಹಿರಿಯೂರು ನಗರದ ನೆಹರು ಮೈದಾನದಲ್ಲಿ ಜರುಗಿದ ತಾಲೂಕು ಮಟ್ಟದ ಏಳನೇಯ ಸಾಹಿತ್ಯ ಸಮ್ಮೇಳನದಲ್ಲಿ ಅಪ್ಪರ್ ಭದ್ರಾ ಯೋಜನೆ ಕಾಮಗಾರಿ ವಿಳಂಬವಾಗಿತ್ತಿರುವ ಬಗ್ಗೆ ತೀಕ್ಷ್ಮವಾದ ಚರ್ಚೆಗಳು ನಡೆದವು.

ರೈತ ಪರ ಹೋರಾಟಗಾರ ಆರನಕಟ್ಟೆ ಶಿವಕುಮಾರ್ ಮಾತನಾಡಿ ವಿ ವಿ ಸಾಗರ ಜಲಾಶಯಕ್ಕೆ ಭದ್ರಾದಿಂದ ಕೇವಲ 2 ಟಿಎಂಸಿ ನೀರನ್ನು ಮಾತ್ರ ನಿಗದಿ ಮಾಡಲಾಗಿದೆ. ಭದ್ರಾ ಜಲಾಶಯ ತುಂಬಿದಾಗ ವಿ ವಿ ಸಾಗರ ಜಲಾಶಯಕ್ಕೆ ನೀರು ನೀಡುವುದಕ್ಕೆ ಕಾಲಮಿತಿಯನ್ನು ನಿಗದಿಮಾಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಕಾಲಮಿತಿಯನ್ನು ತೆರವು ಮಾಡಿ ಅನಾವಶ್ಯಕವಾಗಿ ಹರಿಯುವ ನೀರನ್ನು ಕೂಡ ವಿ ವಿ ಸಾಗರಕ್ಕೆ ಹರಿಸಬೇಕಿದೆ ಎಂದರು.

- Advertisement - 

ರೈತ ಸಂಘದ ಕಾರ್ಯಾಧ್ಯಕ್ಷ ಕೆ ಸಿ ಹೊರಕೇರಪ್ಪ ಮಾತನಾಡಿ ಕೇಲವೆ ಸಾವಿರ ಕೋಟಿಗಳಲ್ಲಿ ಮುಗಿಯಬೇಕಿದ್ದ ಅಪ್ಪರ್ ಭದ್ರಾ ಕಾಮಗಾರಿಗೆ ವಿಳಂಭ ದೋರಣೆಗಳಿಂದ ಸಾವಿರಾರು ಕೋಟಿ ವ್ಯಯಿಸುವ ಹಂತಕ್ಕೆ ಬಂದಿದೆ ಎರಡುವರೆ ದಶಕಗಳಿಂದಲು ಜನ ಸಮ್ರುದ್ದವಾದ ನೀರಿನ ಸೌಲಭ್ಯಕ್ಕೆ ಕಾಯುತ್ತಿದ್ದಾರೆ ಒಂದೆಡೆ ಗುತ್ತಿಗೆದಾರರು ಮಾಡಿರುವ ಕಾಮಗಾರಿಯ ಹಣಬಿಡುಗಡಿಯಾಗಿಲ್ಲ ಎಂದು ಹೇಳುತ್ತಾರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ 5300ಕೋಟಿ ಹಣ ಬಿಡುಗಡೆಯಾಗಿಲ್ಲ ಎಂದು ಬೊಟ್ಟು ಮಾಡುತ್ತದೆ ತೀವ್ರತರದ ಹೋರಾಟಗಳು ನಡೆದರು ನಮ್ಮ ಗುರಿ ಮುಟ್ಟಲು ಸಾಧ್ಯವಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದರು.

ರಮೇಶ್ ಮಾತನಾಡಿ ಅಪ್ಪರ್ ಭದ್ರಾ ಕಾಮಗಾರಿ ತ್ವರಿತವಾಗಿ ಮುಕ್ತಾಯವಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಸ್ಪರ ಸುಳ್ಳುಗಳನ್ನು ಹೇಳಿಕೊಂಡು ರೈತರಿಗೆವಂಚಿಸುತ್ತಿದೆ. ವಿ ವಿ ಸಾಗರ ಜಲಾಶಯ ಕೇವಲ ಹಿರಿಯೂರಿನ ಜನರಿಗೆ ಮಾತ್ರ ನೀರು ನೀಡುತ್ತಿಲ್ಲ. ಕಳೆದ ಐದು ದಶಕಗಳಿಂದಲೂ ಚಿತ್ರದುರ್ಗದ ಜನ ನೀರು ಕುಡಿಯುತ್ತಿದ್ದಾರೆ. ಚಳ್ಳಕೆರೆ ನಗರಕ್ಕೆ ಡಿಆರ್ ಡಿಒಗೆ ನೀರು ಸರಬರಾಜು ಆಗುತ್ತಿದೆ. ಹೊಳಲ್ಕೆರೆ ತಾಲೂಕಿಗೂ ಕುಡಿಯುವ ನೀರು ಕೊಡುವ ಕಾಮಗಾರಿ ಚಾಲನೆಯಲ್ಲಿ ಇದೆ.

- Advertisement - 

ಅಪ್ಪರ್ ಭದ್ರಾ ಯೋಜನೆಯಲ್ಲಿ ಕೇವಲ 2 ಟಿಎಂಸಿ ನೀರು ನೀಡಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಅಚ್ಚುಕಟ್ಟು ಪ್ರದೇಶಕ್ಕೆ ಹರಿಸಲು ಸುಮಾರು 8ಟಿಎಂಸಿ ನೀರಿನ ಅವಶ್ಯಕತೆಯಿದೆ ರಾಜಕಾರಣಿಗಳು ಇಚ್ಘಾಶಕ್ತಿ ಪ್ರದರ್ಶಿಸಲು ಮುಂದಾಗಬೇಕು. ನೀರಿಗಾಗಿ ದ್ವನಿಯಾಗುವ ಹಿರಿಯೂರಿನ ರೈತರ ಹೋರಾಟಕ್ಕೆ ಜಿಲ್ಲೆಯ ಎಲ್ಲ ತಾಲೂಕೂಗಳ ಜನ ಕೂಗನ್ನು ಮೊಳಗಿಸಬೇಕಾಗಿದೆ. ಅಚ್ಚುಕಟ್ಟು ವ್ಯಾಪ್ತಿಯ ಜಮೀನುಗಳು ಮೂಲ ರೈತರಿಂದ ಉಳ್ಳವರ ಪಾಲು ಆಗುತ್ತಿವೆ. ರೈತರು ತಮ್ಮ ಜಮೀನುಗಳನ್ನು ಮಾರದೆ ಕಾಪಾಡಿಕೊಳ್ಳಬೇಕಿದೆ ಎಂದರು.

Share This Article
error: Content is protected !!
";