Ad imageAd image

ಲೈಟ್ ಬಾಯ್ ಸಾವು: ನಿರ್ದೇಶಕ ಯೋಗರಾಜ್ ಭಟ್ ವಿರುದ್ಧ ಎಫ್ ಐ ಆರ್

khushihost

ಬೆಂಗಳೂರು : ಲೈಟ್‌ ಬಾಯ್‌ ಒಬ್ಬರು ಸಾವನ್ನಪ್ಪಿದ ಪ್ರಕರಣ ಸಂಬಂಧ ಕನ್ನಡ ಚಿತ್ರರಂದ ನಿರ್ದೇಶಕ ಯೋಗರಾಜ್‌ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮನದ ಕಡಲು ಸಿನಿಮಾ ಶೂಟಿಂಗ್‌ ವೇಳೆ ಸಂಭವಿಸಿದ ಘಟನೆಯ ಸಂಬಂಧ ಈ ಕೇಸ್‌ ದಾಖಲಾಗಿದೆ.

ಕನ್ನಡ ಚಿತ್ರರಂಗಕ್ಕೆ ಆಘಾತ

ಕಳೆದ ಸೆಪ್ಟೆಂಬರ್ 3 ರಂದು ಮನದ ಕಡಲು ಸಿನಿಮಾದ ಶೂಟಿಂಗ್ ವೇಳೆ ಲೈಟ್ ಬಾಯ್ ಮೋಹನ್ ಎಂಬವರು 30 ಅಡಿ ಉದ್ದದ ಏಣಿಯಿಂದ ಕೆಳಕ್ಕೆ ಬಿದ್ದಿದ್ದರು. ಈ ವೇಳೆ ಗಂಭೀರವಾದ ಗಾಯಗೊಂಡ ಅವರನ್ನ ಗೊರಗುಂಟೆ ಪಾಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಅವರು ಗುರುವಾರ ಸಾವನ್ನಪ್ಪಿದ್ದಾರೆ.

ಪ್ರಕರಣದಲ್ಲಿ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ವಾಹಕ ಸುರೇಶ್ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಚಿತ್ರೀಕರಣದ ವೇಳೆ ಸುರಕ್ಷತಾ ವೈಫಲ್ಯದ ಆರೋಪದ ಅಡಿಯಲ್ಲಿ ಕೇಸ್‌ ದಾಖಲಾಗಿದೆ.

- Advertisement -  - Advertisement - 
Share This Article
error: Content is protected !!
";