ಚಂದ್ರವಳ್ಳಿ ನ್ಯೂಸ್, ತುಮಕೂರು:
ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ತಾತ್ಕಾಲಿಕವಾಗಿ ೨ ವರ್ಷಗಳ ಅವಧಿಗಾಗಿ ನೇಮಕಾತಿ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಫೀಲ್ಡ್ ಇಂಜಿನಿಯರ್(ಎಲೆಕ್ಟ್ರಿಕಲ್), ಫೀಲ್ಡ್ ಇಂಜಿನಿಯರ್(ಸಿವಿಲ್), ಫೀಲ್ಡ್ ಸೂಪರ್‌ವೈಸರ್(ಎಲೆಕ್ಟ್ರಿಕಲ್) ಹಾಗೂ ಫೀಲ್ಡ್ ಸೂಪರ್‌ವೈಸರ್(ಸಿವಿಲ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದ್ದು, ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ ವಿಳಾಸ http://www.powergrid.in ನಲ್ಲಿ ಭರ್ತಿ ಮಾಡಿ ಸೆಪ್ಟೆಂಬರ್ ೨೭ರೊಳಗಾಗಿ ಸಲ್ಲಿಸಬಹುದಾಗಿದೆ.
ಫೀಲ್ಡ್ ಇಂಜಿನಿಯರ್(ಎಲೆಕ್ಟ್ರಿಕಲ್) ಹುದ್ದೆಗಾಗಿ ಎಲೆಕ್ಟ್ರಿಕಲ್ ವಿಷಯದಲ್ಲಿ ಬಿಇ/ಬಿ.ಟೆಕ್/ಬಿಎಸ್ಸಿ(ಇಂಜಿನಿಯರಿಂಗ್), ಫೀಲ್ಡ್ ಇಂಜಿನಿಯರ್(ಸಿವಿಲ್) ಹುದ್ದೆಗಾಗಿ ಸಿವಿಲ್ ವಿಷಯದಲ್ಲಿ ಬಿಇ/ಬಿ.ಟೆಕ್/ಬಿಎಸ್ಸಿ(ಇಂಜಿನಿಯರಿಂಗ್), ಫೀಲ್ಡ್ ಸೂಪರ್‌ವೈಸರ್(ಎಲೆಕ್ಟ್ರಿಕಲ್) ಹುದ್ದೆಗಾಗಿ ಎಲೆಕ್ಟ್ರಿಕಲ್ ಡಿಪ್ಲೋಮಾ ಹಾಗೂ ಫೀಲ್ಡ್ ಸೂಪರ್‌ವೈಸರ್(ಸಿವಿಲ್) ಹುದ್ದೆಗಾಗಿ ಸಿವಿಲ್ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ೧೮ ರಿಂದ ೨೯ ವರ್ಷದೊಳಗಿನವರಾಗಿದ್ದು, ವಿದ್ಯಾರ್ಹತೆಯಲ್ಲಿ ಶೇ.೫೫ರಷ್ಟು ಅಂಕ ಪಡೆದ ಸಾಮಾನ್ಯ ವಿದ್ಯಾರ್ಥಿಗಳು ಹಾಗೂ ಕನಿಷ್ಠ ಅಂಕ ಪಡೆದು ಉತ್ತೀರ್ಣರಾದ ಹಿಂದುಳಿದ ವರ್ಗ(ಎನ್‌ಸಿಎಲ್)/ ಪ.ಜಾತಿ/ ಪ.ಪಂಗಡ/ ಆರ್ಥಿಕವಾಗಿ ಹಿಂದುಳಿದ / ಮಾಜಿ ಸೈನಿಕರು/ ವಿಕಲಚೇತನರು(ಫೀಲ್ಡ್ ಇಂಜಿನಿಯರ್ ಎಲೆಕ್ಟ್ರಿಕಲ್ ಹುದ್ದೆಗೆ ಮಾತ್ರ) ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ದೂ.ವಾ.ಸಂ. ೦೮೧೬-೨೨೭೮೪೮೮ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಕಿಶೋರ್ ತಿಳಿಸಿದ್ದಾರೆ.