ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

News Desk

ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸಶಸ್ತ್ರ ಪೊಲೀಸ್ (ಸಿಎಪಿಎಫ್) ಮತ್ತು ಎಸ್ಎಸ್ಎಫ್ ಪಡೆಗಳಲ್ಲಿ ಕಾನ್ಸ್ಟೇಬಲ್ (ಜಿಡಿ) ಮತ್ತು ಅಸ್ಸಾಂ ರೈಫಲ್ಸ್ನಲ್ಲಿ ರೈಫಲ್ಮ್ಯಾನ್ (ಜಿಡಿ) ಹುದ್ದೆಗಳ ನೇಮಕಾತಿಗಾಗಿ ಮುಕ್ತ ಸ್ಪರ್ಧಾತ್ಮಕ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸುತ್ತಿದೆ. ಪರೀಕ್ಷೆಯು ಜನವರಿ – ಫೆಬ್ರವರಿ 2025 ರಲ್ಲಿ ನಡೆಯಲಿದೆ.

ಪರೀಕ್ಷೆಯ ನಿಖರ ದಿನಾಂಕವನ್ನು ನಂತರ ಎಸ್ಎಸ್ಸಿ ವೆಬ್ಸೈಟ್ ಮೂಲಕ ತಿಳಿಸಲಾಗುವುದು. ಅರ್ಜಿಯನ್ನು ಎಸ್ಎಸ್ಸಿ ಪ್ರಧಾನ ಕಚೇರಿಯ ಅಧಿಕೃತ ವೆಬ್ಸೈಟ್ https://ssc.nic.in ನಲ್ಲಿ ಆನ್ಲೈನ್ನಲ್ಲಿ ಅಕ್ಟೋಬರ್ 14 ರ ರಾತ್ರಿ 11 ಗಂಟೆಯೊಳಗಾಗಿ ಸಲ್ಲಿಸುವುದು. ಅರ್ಜಿ ಸಲ್ಲಿಸುವವರ ವಿದ್ಯಾರ್ಹತೆ ಮಾನ್ಯತೆ ಪಡೆದ ಮಂಡಳಿಯಿಂದ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಎಸ್ಎಸ್ಸಿ ಮುಖ್ಯ ಕಚೇರಿ ನವದೆಹಲಿಯ ವೆಬ್ಸೈಟ್ https://ssc.nic.in ಮತ್ತು ಎಸ್ಎಸ್ಸಿ ಸ್ಥಳೀಯ ಕಚೇರಿ ಬೆಂಗಳೂರಿನ (ಕರ್ನಾಟಕ-ಕೇರಳ) ವೆಬ್ಸೈಟ್ www.ssckkr.kar.nic.in ನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

- Advertisement -  - Advertisement - 
Share This Article
error: Content is protected !!
";