ಚಂದ್ರವಳ್ಳಿ ನ್ಯೂಸ್, ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಸೇರಿ 17 ಮಂದಿ ವಿರುದ್ದ ಸಲ್ಲಿಕೆಯಾಗಿರುವ ಚಾರ್ಜ್ಶೀಟ್ ನಲ್ಲಿ ಹಲವು ವಿಚಾರಗಳು ಬಯಲಾಗಿದೆ. ಈ ಟೆನ್ಷನ್ ನಲ್ಲಿ ದರ್ಶನ್ ಇದ್ದರೆ, ಇತ್ತ ಅಭಿಮಾನಿಗಳು ಹುಚ್ಚಾಟ ಮೆರೆಯುತ್ತಾರೆ. ಹಾಗೆಯೇ ಮಹಿಳಾ ಅಭಿಮಾನಿಯೊಬ್ಬರು ಬಳ್ಳಾರಿ ಜೈಲಿನ ಹೊರಗಡೆ ಹೈಡ್ರಾಮಾ ನಡೆಸಿದ್ದಾರೆ.
ದರ್ಶನ್ರನ್ನು ನೋಡಲು ಬಳ್ಳಾರಿ ಜೈಲಿನ ಬಳಿ ಬಂದಿರುವ ಲಕ್ಷ್ಮಿ ಎನ್ನುವ ಅಭಿಮಾನಿಯೊಬ್ಬರು ವಿಜಯಲಕ್ಷ್ಮಿಯಂತೆ ನಾನು ಕೂಡ ದರ್ಶನ್ ರನ್ನು ಮದುವೆ ಆಗುತ್ತೇನೆ ಎಂದು ಹಠ ಹಿಡಿದ್ದಾರೆ. ದರ್ಶನ್ ಬಂಧನವಾದ ಬಳಿಕ ಕೆಲವು ಅಭಿಮಾನಿಗಳ ಹುಚ್ಚಾಟ ಮಿತಿ ಮೀರಿದೆ, ಆ ಪಟ್ಟಿಗೆ ಈಗ ಮಹಿಳಾ ಅಭಿಮಾನಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಲಕ್ಷ್ಮಿ ಎನ್ನುವ ದರ್ಶನ್ ಅಭಿಮಾನಿ ಬಳ್ಳಾರಿ ಸೆಂಟ್ರಲ್ ಜೈಲಿನ ಬಳಿ ಬಂದಿದ್ದು, ತಾನು ದರ್ಶನ್ ರನ್ನು ನೋಡಬೇಕು ಎಂದು ಹಠ ಹಿಡಿದಿದ್ದಾರೆ.
ದರ್ಶನ್ಗೆ ಹಣ್ಣು ತಂದಿದ್ದ ಅವರು, ತಮ್ಮ ಐಡೆಂಟಿಟಿಗಾಗಿ ಆಧಾರ್ ಕಾರ್ಡ್ ಕೂಡ ತಂದಿದ್ದಾರೆ. ಆದರೆ ಜೈಲಿನ ಅಧಿಕಾರಿಗಳು ಅವರನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಲಕ್ಷ್ಮಿ ಅವರು ನಿರಾಸೆಗೊಂಡಿದ್ದು, ಒಳಗೆ ಬಿಡುವುದಾದರೆ ದರ್ಶನ್ರನ್ನು ಮದುವೆ ಆಗಲು ಸಿದ್ಧ ಎಂದಿದ್ದಾರೆ.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ದರ್ಶನ್ ಅಭಿಮಾನಿ ಲಕ್ಷ್ಮಿ, ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಇದ್ದಾಗಲೂ ನಾನು ಹೋಗಿದ್ದೆ . ಅಲ್ಲೂ ನನ್ನನ್ನು ಒಳಗೆ ಬಿಡಲಿಲ್ಲ. ಈಗ ಇಲ್ಲಿಗೆ ನೋಡಲು ಬಂದಿದ್ದೇನೆ, ಒಳಗಡೆ ಬಿಡುತ್ತಿಲ್ಲ. ದರ್ಶನ್ಗಾಗಿ ಹಣ್ಣು ತಂದಿದ್ದೇನೆ ಒಳಗೆ ಬಿಟ್ಟರೆ ಇದನ್ನು ಕೊಟ್ಟು, ಅವರನ್ನು ನೋಡಿಕೊಂಡು ಹೋಗುತ್ತೇನೆ. ಅವರಿಗೆ ಚಿಕನ್ ಊಟ ಬೇಕು ಎಂದರೆ ಮಾಡಿಕೊಂಡು ತರುತ್ತೇನೆ ಎಂದು ಹೇಳಿದ್ದಾರೆ.
ದರ್ಶನ್ ಏನು ಮಾಡಬಾರದ ತಪ್ಪು ಮಾಡಿದ್ದಾರೆ ಎಂದು ಬಳ್ಳಾರಿ ಜೈಲಿಗೆ ಕರೆದುಕೊಂಡು ಬಂದಿದ್ದಾರೆ ಬೆಂಗಳೂರು ಜೈಲಿನಲ್ಲಿ ಸಿಗರೇಟ್ ಸೇದಿದರು ಎಂಬ ಕಾರಣಕ್ಕಾಗಿ ಬಳ್ಳಾರಿಗೆ ತಂದು ಹಾಕಿದ್ದಾರೆ.
ಯಾರೂ ಬೀಡಿ, ಸಿಗರೇಟು ಸೇದುವುದೇ ಇಲ್ಲವೇ?, ಅದೇನು ಮಹಾಪರಾಧವೇ? ಎಂದು ಪ್ರಶ್ನಿಸಿದರು.
ದರ್ಶನ್ರನ್ನು ನೋಡಬೇಕೆಂಬ ಆಸೆ ತುಂಬಾ ಜನಕ್ಕೆ ಇರುತ್ತದೆ. ಬರುವವರಿಗೆ ಅವಕಾಶ ಮಾಡಿಕೊಡಬೇಕು. ಈ ಹಿಂದೆ ನಾನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದೆ. ಅಲ್ಲಿಯೂ ಭೇಟಿಯಾಗಲಿಕ್ಕಾಗಲಿಲ್ಲ. ಹೀಗಾಗಿ ಬಳ್ಳಾರಿಗೆ ಬಂದಿದ್ದೇನೆ. ನಾನು ಅವರೊಂದಿಗೆ ಮಾತನಾಡದೇ ಇದ್ದರೂ ಪರವಾಗಿಲ್ಲ, ನೋಡಲು ಅವಕಾಶ ಕೊಡಿ. ನಾನು ಹಣ್ಣುಹಂಪಲುಗಳನ್ನು ಮಾತ್ರ ತಂದಿದ್ದೇನೆ. ದರ್ಶನ್ ಇಷ್ಟಪಟ್ಟರೆ ಚಿಕನ್, ಮಟನ್ ಕೂಡ ತಂದುಕೊಡುತ್ತೇನೆ ಎಂದು ಹೇಳಿದರು.