ಪಾಲಿ ಫೆಸ್ಟ್ ಉತ್ಸವಕ್ಕೆ ಚಾಲನೆ ನೀಡಿದ ಡಾ. ಬಸವಕುಮಾರ ಸ್ವಾಮೀಜಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪ್ರೇರಕವಾಗಿರುತ್ತವೆ. ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದವರು ಕಲೆ
, ಕ್ರೀಡೆ , ಸಾಂಸ್ಕೃತಿಕ ಸೇರಿದಂತೆ ಮತ್ತಿತರ ಚಟುವಟಿಕೆಗಳಲ್ಲಿ  ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವುದು ಅತಿ ಮುಖ್ಯ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಬಸವಕುಮಾರ ಸ್ವಾಮೀಜಿ ಕರೆ ನೀಡಿದರು.

ನಗರದ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ವತಿಯಿಂದ ಪಾಲಿಫೆಸ್ಟ್ ಉತ್ಸವ- 2024ರ ಅಂಗವಾಗಿ ಇಲ್ಲಿನ ಶ್ರೀ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ವಿದ್ಯಾರ್ಥಿ ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಸೋಮವಾರ ಏರ್ಪಡಿಸಿರುವ ಎರಡು ದಿನಗಳ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಉತ್ಸವಕ್ಕೆ ಸ್ವತಃ ಫೀಲ್ಡ್ ಗೆ ಇಳಿದು ಬ್ಯಾಟ್ ಹಿಡಿದು, ಬಂದ ಬಾಲನ್ನು ಎತ್ತಿ ಕ್ರೀಡಾಂಗಣದ ಮುಂಚೂಣಿಗೆ ತಳ್ಳುವ ಮುಖಾಂತರ ಉದ್ಘಾಟಿಸಿ ಕ್ರೀಡಾಸಕ್ತರನ್ನು ಸ್ವಾಮೀಜಿ ಹುರಿದುಂಬಿಸಿದರು.

ಹಾಗೆಯೇ ಬೋಲಿಂಗ್ ಕೂಡ ಮಾಡಿ ಹುರುಪು ನೀಡಿದ ಅವರು ಹಲವರಲ್ಲಿ ಹಲವಾರು ವಿಧದ ಅಭಿರುಚಿ ಹವ್ಯಾಸಗಳಿರುತ್ತವೆ. ಅವುಗಳನ್ನು ವಿದ್ಯಾರ್ಥಿಗಳಲ್ಲಿ ಹೊರತೆಗೆಯುವ ಪ್ರಯತ್ನ ಶಿಕ್ಷಣ ಸಂಸ್ಥೆಗಳಿಂದ ಆದಾಗ ಅಲ್ಲಿ ಅನೇಕ ಪ್ರತಿಭೆಗಳು ಹೊರ ಹೊಮ್ಮುಲು ಸಾಧ್ಯವಾಗುತ್ತದೆ.

ಅದಕ್ಕೆ ಪೂರಕ ವಾತಾವರಣ ಅಗತ್ಯ. ಓದಿನ ಜೊತೆಗೆ  ಜೊತೆಗೆ ಇತರ ಎಲ್ಲ ರೀತಿಯ ಪಠ್ಯೇತರ ಚಟುವಟಿಕೆಗಳು ಘನ ವ್ಯಕ್ತಿತ್ವವನ್ನು ರೂಪಿಸಲಿಕ್ಕೆ ಸಹಕಾರಿಯಾಗುತ್ತವೆ ಎಂದು ಕಿವಿಮಾತು ಹೇಳಿದರು.

ಎಸ್ ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಭರತ್, ಫಾರ್ಮಸಿಯ ಪ್ರಾಚಾರ್ಯ ನಾಗರಾಜ್, ದೈಹಿಕ ನಿರ್ದೇಶಕ ಕುಮಾರಸ್ವಾಮಿ, ಪಾಲಿಟೆಕ್ನಿಕ್ ನ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಪಿ.ಬಿ ರಾಜೇಶ್, ನಳಿನಾಕ್ಷಿ, ಎಸ್ ಮೋಹನ್ ಕುಮಾರ್, ಪಿ.ಎ.ರಘು ಹಾಗೂ ಪಾಲಿಟೆಕ್ನಿಕ್ ಬೋಧಕರು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಾಚಾರ್ಯ ಎಸ್ .ವಿ .ರವಿಶಂಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

 

- Advertisement -  - Advertisement -  - Advertisement - 
Share This Article
error: Content is protected !!
";