ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಚಳ್ಳಕೆರೆ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಹಿರಿಯಣ್ಣ ಅವರು ಚಂಡಿಗಡದಲ್ಲಿ ಫೆ. 19 ರಂದು ನಡೆಯಲಿರುವ ರಾಷ್ಟ್ರಮಟ್ಟದ ಪುರುಷರ 100 ಮೀಟರ್ ರನ್ನಿಂಗ್ ರೇಸ್ ನಲ್ಲಿ ಭಾಗವಹಿಸುವ ಪ್ರಯುಕ್ತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕ್ ಘಟಕ ವತಿಯಿಂದ ಕ್ರೀಡಾಪಟು ಹಿರಿಯಣ್ಣನವರನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕು ಅಧ್ಯಕ್ಷ ಸಿ.ಟಿ.ವೀರೇಶ್ ಮಾತನಾಡಿ ಇಂತಹ ಕ್ರೀಡಾ ಪ್ರತಿಭೆಗಳು ಸರ್ಕಾರಿ ನೌಕರರಲ್ಲಿ ಹೆಚ್ಚಾಗಬೇಕೆಂದು ತಿಳಿಸಿ ಕ್ರೀಡಾಪಟುವಿಗೆ ಧನ ಸಹಾಯ ಮಾಡಲು ನೌಕರರ ಸಂಘದಿಂದ ನಿರ್ಧರಿಸಿದ್ದೇವೆ ಎಂದು ತಿಳಿಸಿ ಶುಭ ಹಾರೈಸಿದರು.
ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಕ್ರೀಡಾಪಟುವನ್ನು ಅಭಿನಂದಿಸಿ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಜಯ ಸಾಧಿಸಿ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.
ಗ್ರಾಮ ಲೆಕ್ಕಾಧಿಕಾರಿ ಹಿರಿಯಣ್ಣ ಅವರು ಪಿ ಓಬನಹಳ್ಳಿ ಗ್ರಾಮದವರು. ಪ್ರಸ್ತುತ ದೊಡ್ಡ ಬೀರನಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಎಸ್.ಪಿ ತಿಪ್ಪೇಸ್ವಾಮಿ, ರಾಜ್ಯ ಪರಿಷತ್ ಸದಸ್ಯೆ ವೆಂಕಟ ಲಕ್ಷ್ಮಮ್ಮ, ಉಪಾಧ್ಯಕ್ಷ ಎಂ.ಶ್ರೀನಿವಾಸ್, ಖಜಾಂಚಿ ರಾಮಚಂದ್ರಪ್ಪ, ನಿರ್ದೇಶಕರುಗಳಾದ ಅಶೋಕ್ ಕುಮಾರ್, ರಾಜಣ್ಣ, ಮಂಜಣ್ಣ, ಬಸವರಾಜ್ ಇತರರು ಉಪಸ್ಥಿತರಿದ್ದರು.