ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ 

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಸ್ವಪ್ರಯತ್ನದಿಂದ ಸಾಧಿಸುವ ಛಲ ವಿದ್ಯಾರ್ಥಿಗಳಲ್ಲಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.ಹಾಗೂ ಯಾವುದೇ ಕ್ರೀಡೆ ಕ್ರೀಡೆಯಾಗಿಯೇ ಇರಬೇಕು ಮತ್ತು
  ಕ್ರೀಡೆಗಳು ವಿದ್ಯಾರ್ಥಿಗಳ ಬುದ್ದಿ ಮತ್ತು ಮನಸ್ಸಿನ ಅಭಿವೃದ್ಧಿಯ ಪ್ರತೀಕವಾಗಬೇಕು ಎಂದು ದೊಡಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಅನೀಸ್ ಮುಜಾವರ ಹೇಳಿದರು.

 ಮಂಗಳವಾರ ತಾಲ್ಲೂಕಿನ ತೂಬಗೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹೋಬಳಿ ಮಟ್ಟದ  ಕ್ರೀಡಾಕೂಡಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಗಳಿಗೆ ಯಾರು ಹೆಚ್ಚು ಒಲವನ್ನು ತೋರಿಸುತ್ತಾರೋ ಅವರ ಕೌಶಲವನ್ನು ಅವರ ಕ್ರೀಡಾ ಶಕ್ತಿಯನ್ನು ಬೆಳಸಿ ಅವರ ವೈಯುಕ್ತಿಕ  ಸಾಮರ್ಥ್ಯ ಹೆಚ್ಚಿಸುವುದೇ ಕ್ರೀಡಾಕೂಟಗಳ ಮುಖ್ಯ ಉದ್ದೇಶ ಮತ್ತು ಯಾವುದೇ ಉತ್ತಮ ಕೆಲಸವನ್ನು ಆತ್ಮವಿಶ್ವಾಸ ಹಾಗೂ ಶ್ರದ್ದೆಯಿಂದ ಕೈಗೊಂಡರೂ ಅದು ಒಂದು ಶ್ರೇಷ್ಠ ಕಾಯಕವಾಗುತ್ತದೆ.ಉತ್ತಮ ಕಾಯಕದಲ್ಲಿ ಮೇಲು ಕೀಳೆಂಬ ಸ್ಥಾನವಿರುವುದಿಲ್ಲ.ವಿದ್ಯಾರ್ಥಿ ಜೀವನದಲ್ಲಿ ನಿಷ್ಠೆ ಪ್ರಾಮಾನಿಕತೆ,ಸತ್ಯ ಪರಿಪಾಲನೆಯನ್ನು ಮೈಗೊಡಿಸಿಕೊಂಡು ಸಮಯದ ಸದ್ಬಳಕೆ ಮಾಡಿಕೊಂಡರೆ ತಮ್ಮ ಕನಸುಗಳನ್ನು ಮತ್ತು ಗುರಿಯನ್ನು ಸಾಧಿಸಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಳೆ ವಿಧ್ಯಾರ್ಥಿಗಳಾದ ಗಂಗಾಧರ್,ರಘು, ಸಾಲಿ ಸೇರಿ 20 ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಮಾತನಾಡಿ ಪ್ರೌಢಶಾಲೆಯಲ್ಲಿ  2 ವರ್ಷಗಳಿಂದ ದೈಹಿಕ ಶಿಕ್ಷಕರಿಲ್ಲದೇ ಮಕ್ಕಳಿಗೆ ಕ್ರೀಡಾ ಸ್ಪರ್ದೆಗಳನ್ನು ಅಭ್ಯಾಸ ಮಾಡಲು ಅಗುತ್ತಿಲ್ಲ ಎಂದು ಕಾರ್ಯಕ್ರಮಕ್ಕೆ ಬೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಅನೀಸ್ ಮುಜಾವರ ಅವರಿಗೆ ಮನವಿ ಮಾಡಿದರು.ಇದ್ದಕ್ಕೆ ಸ್ಪಂದಿಸಿದ ಶಿಕ್ಷಣಾಧಿಕಾರಿ ಯಾರನ್ನಾದರೂ ವ್ಯವಸ್ಥೆ ಮಾಡುತ್ತೇನೆ ಎಂಬ ಭರವಸೆ ನೀಡಿದರು.

 ಕ್ರೀಡಾ ಕೂಟದಲ್ಲಿ ಒಟ್ಟು 25 ಶಾಲೆಯ 300 ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ  ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ರವಿಸಿದ್ದಪ್ಪ, ಹೆಗ್ಗಡಿಹಳ್ಳಿ ಗ್ರಾಮ ಪಂಚಾಯ್ತಿ ಪ್ರಭಾರಿ ಅಧ್ಯಕ್ಷ ಮುನಿಕೃಷ್ಣಪ್ಪ,ತೂಬಗೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್ಕ್ರೀಡಾ ಪ್ರಧಾನ ಸಂಚಾಲಕ ವಸಂತ್‌ಗೌಡಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್.ಬಸವಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಎ.ವಿ.ಚಂದ್ರಪ್ಪ, ಖಜಾಂಚಿ ಕೆ.ಆರ್.ನರಸಿಂಹಮೂರ್ತಿ, ನಿರ್ದೇಶಕ ಮಂಜುನಾಥ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಲ್.ನಾಗರಾಜು, ಪ್ರೌಢಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಗಿರೀಶ್, ಮೊಹಸಿನ್ ತಾಜ್, ಹಾಗು ಶಾಲೆಯ ಎಲ್ಲಾ ಶಿಕ್ಷಕ ವೃಂದದವರು ಹಾಜರಿದ್ದರು

 

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon