ಸಮಾಜದ ಸ್ವಾಸ್ಥ್ಯ ಕಾಪಾಡಲು ಭಾವೈಕ್ಯತೆ ಸಹಾಯಕ-ಘನಬಸವ ಅಮರೇಶ್ವರ ಶ್ರೀ

News Desk

ಸಮಾಜದ ಸ್ವಾಸ್ಥ್ಯ ಕಾಪಾಡಲು ಭಾವೈಕ್ಯತೆ ಸಹಾಯಕ-ಘನಬಸವ ಅಮರೇಶ್ವರ ಶ್ರೀ
ಚಂದ್ರವಳ್ಳಿ ನ್ಯೂಸ್, ಸೊರಬ:
ವಿಘ್ನಗಳ ನಿವಾರಕ ವಿನಾಯಕನ ಬದುಕು ಜಗತ್ತಿನ ಮನುಷ್ಯರಿಗೆ ಒಂದು ಸಂದೇಶ ನೀಡುತ್ತದೆ. ಆತನ ಇತಿಹಾಸ ನಮಗೆ ಒಂದು ವಿಧದ ಮಾರ್ಗ ದರ್ಶನ ಮಾಡಿದರೆ ಆತನ ದೇಹವೇ ನಮಗೆ ಬದುಕಿನ ಪಾಠ ಮಾಡುತ್ತದೆ ಎಂದು ಜಡೆ ಹಿರೇಮಠ-ಸೊರಬ ಕಾನುಕೇರಿ ಮಠ-ಬಂಕಸಾಣ ಸಮಾಧಾನದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಆನವಟ್ಟಿ-ತಿಮ್ಮಾಪುರದಲ್ಲಿ ಓಂ ಗಣಪತಿ ಸಂಘ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟ ೩೫ನೇ ವರ್ಷದ ಗಣಪತಿ ಉತ್ಸವ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗಣಪತಿಯ ದೇಹವನ್ನು ನೋಡಿದಾಗ ಆತನ ದೇಹ, ಆತನ ಕಿವಿಗಳು, ಆತನ ಕಣ್ಣುಗಳು, ಆತನ ಭಾರಿ ಗಾತ್ರದ ದೇಹ ಮುಂತಾದವುಗಳನ್ನು ನೋಡಿದಾಗ ನಾವು ಹೇಗಿರಬೇಕು ಎಂಬುದು ತಿಳಿಯುತ್ತದೆ. ಎಷ್ಟೇಲ್ಲ ದೇಹದ ಓರೆ ಕೋರೆ ಗಳಿದ್ದರೂ ಆತ ಯಾವುದನ್ನು ಲೆಕ್ಕಿಸದೆ ಆನಂದವಾಗಿ ಜೀವನ ನಡೆಸುವದು ನಾವೆಲ್ಲರೂ ಕಲಿಯಬೇಕಾದ ಪಾಠವಾಗಿದೆ.
ನಾವು ನಮ್ಮ ಬದುಕಿನಲ್ಲಿ ಏನಾದರೂ ತೊಂದರೆ ಆದರೆ ಆ ಸಂಕಟಕ್ಕೆ ಅವರೇ ಕಾರಣರು, ಇವರೇ ಕಾರಣರು. ಅವರಿಂದ ನಮ್ಮ ಖುಷಿ ಹಾಳಾಯಿತು ಎಂದುಕೊಂಡು ನಾವು ಅವರಿವರನ್ನು ದೂಷಣೆ ಮಾಡಿಕೊಂಡು ಕೂಡುವುದು ಬದುಕಲ್ಲ. ಆ ಎಲ್ಲಾವನ್ನು ಮರೆತು ಬದುಕನ್ನು ಕಟ್ಟಿಕೊಳ್ಳುವುದೇ ಜೀವನ ಎಂಬ ಸತ್ಯವನ್ನು ಭಗವಂತ ಸಾರಿ ಸಾರಿ ಹೇಳುತ್ತಿದ್ದಾನೆ.
ಇಂತಹ ಸಂಕೀರ್ಣ ಸಮಯದಲ್ಲಿ ಎಲ್ಲಾ ಯುವಕರು ಜಾತಿ ಮತ ಪಂಥಗಳ ಎಲ್ಲೇ ಮೀರಿ ಧರ್ಮ ಧರ್ಮಗಳ ಕಟ್ಟನ್ನು ಮೀರಿ ಭಾವೈಕ್ಯ ಸಾರುವ ಇಂತಹ ಕಾರ್ಯಕ್ರಮಗಳು ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಸಹಾಯಕ ವಾಗುತ್ತವೆ ಎಂದು ಹೇಳಿದರು.
ಸಮಾರಂಭದಲ್ಲಿ ಅನೀಶ್ ಗೌಡ್ರು, ಮಧು ಗೌಡ್ರು, ಎಂ.ಎಸ್ ಕಾರ್ತಿಕ್ ಸಾಹುಕಾರ್, ವಿಜಯಮ್ಮ, ವಿಜಯಕುಮಾರ್ ಕೋಟಿಪುರ, ರಾಘವೇಂದ್ರ, ಕುಮಾರ, ಯೋಗೀಶ್, ಪ್ರಕಾಶ್, ನಾಗರಾಜ, ನಂದನ್ ಬೆಂಗಳೂರು, ಓಂ ಗಣಪತಿ ಸಂಘದ ಮುಖ್ಯಸ್ಥ ರಾದ ಇಮ್ತಿಯಾಜ್, ಆದಿಕೇಶವ, ಶ್ರೀಧರ, ಗಣೇಶ, ಗಿರೀಶ, ಹರೀಶ, ಮಾಲತೇಶ, ನಂದೀಶ ಮತ್ತಿತರರಿದ್ದರು.ಅಹೋರಾತ್ರಿ ನೃತ್ಯ ಪ್ರದರ್ಶನ ನಡೆಯಿತು.

“ನಮ್ಮ ಬದುಕಿನಲ್ಲಿ ಏನಾದರೂ ತೊಂದರೆ ಅನುಭವಿಸಿದರೆ ಅದಕ್ಕೆ ಅವರೇ ಕಾರಣರು, ಇವರೇ ಕಾರಣರು. ಅವರಿಂದ ನಮ್ಮ ಖುಷಿ ಹಾಳಾಯಿತು ಎಂದುಕೊಂಡು ಅವರಿವರನ್ನು ದೂಷಣೆ ಮಾಡಿಕೊಂಡು ಕೂಡುವುದು ಬದುಕಲ್ಲ. ಅವೆಲ್ಲವನ್ನು ಮರೆತು ಬದುಕನ್ನು ಕಟ್ಟಿಕೊಳ್ಳುವುದೇ ಜೀವನ”. ಘನಬಸವ ಅಮರೇಶ್ವರ ಶಿವಾಚಾರ್ಯರು, ಜಡೆ ಹಿರೇಮಠ.

- Advertisement -  - Advertisement - 
Share This Article
error: Content is protected !!
";