ದೇಶ ಟೀಕಿಸುವವರು ಮೊದಲು ವಿದೇಶಾಂಗ ನೀತಿ ತಿಳಿದುಕೊಳ್ಳಲಿ-ಮೋದಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರಪತಿಯವರ ಭಾಷಣದ ಮೇಲಿನ ಚರ್ಚೆಯ ಸಮಯದಲ್ಲಿ ವಿದೇಶಾಂಗ ನೀತಿಯ ಬಗ್ಗೆಯೂ ಚರ್ಚೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಕೆಲವರು ಅಂದುಕೊಂಡಿದ್ದಾರೆ ತಾವು ವಿದೇಶಾಂಗ ನೀತಿಯ ಬಗ್ಗೆ ಎಲ್ಲಿಯವರೆಗೆ ಮಾತನಾಡುವುದಿಲ್ಲವೋ ಅಲ್ಲಿಯವರೆಗೂ ಪ್ರಬುದ್ಧರಾಗುವುದಿಲ್ಲ ಎಂದು. ದೇಶಕ್ಕೆ ನಷ್ಟವಾದರೂ ಪರವಾಗಿಲ್ಲ ವಿದೇಶಾಂಗ ನೀತಿಯ ಬಗ್ಗೆ ಮಾತನಾಡುವುದು ಅಗತ್ಯ ಎಂದು ಅವರು ಭಾವಿಸಿದ್ದಾರೆ.

ನಾನು ಅಂಥವರಿಗೆ ಹೇಳುವುದೇನೆಂದರೆ ಅವರಿಗೆ ನಿಜವಾಗಿಯೂ ವಿದೇಶಾಂಗ ನೀತಿಯ ವಿಷಯದ ಬಗ್ಗೆ ಅಭಿರುಚಿ ಇದ್ದರೆ ಮತ್ತು ವಿದೇಶಾಂಗ ನೀತಿಯನ್ನು ಅರಿತುಕೊಳ್ಳಲು ಮತ್ತು ಅದರ ಬಗ್ಗೆ ಮುಂದೆ ಏನನ್ನಾದರೂ ಮಾಡಲು ಅವರು ಬಯಸುವುದೇ ಆದರೆ ‘JFK’S FORGOTTEN CRISIS’ ಎಂಬ ಪುಸ್ತಕವನ್ನು ಅವರು ಖಂಡಿತವಾಗಿಯೂ ಓದಬೇಕು ಎಂದು ಮೋದಿ ಅವರು ತಾಕೀತು ಮಾಡಿದ್ದಾರೆ.

ಈ ಪುಸ್ತಕದಲ್ಲಿ ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ನೆಹರು ಮತ್ತು ಅಮೆರಿಕದ ಆಗಿನ ಅಧ್ಯಕ್ಷ ಜಾನ್ ಎಫ್‌. ಕೆನಡಿ ಅವರ ನಡುವೆ ನಡೆದ ಚರ್ಚೆಗಳು ಮತ್ತು ನಿರ್ಧಾರಗಳ ಬಗ್ಗೆ ವಿಸ್ತೃತವಾಗಿ ವಿವರಿಸಲಾಗಿದೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

 

Share This Article
error: Content is protected !!
";