Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

33 ನೂತನ ಕ್ರೆಸ್ಟ್ ಗೇಟ್‌ಗಳು ಲೋಕಾರ್ಪಣೆ!

Advertisement
Advertisement

ಚಂದ್ರವಳ್ಳಿ ನ್ಯೂಸ್, ಹೊಸಪೇಟೆ/ಮುನಿರಾಬಾದ್:
ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಗುರುವಾರ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ದಿನವಾಗಿ ದಾಖಲಾಗಿದೆ. ಸುಮಾರು
73 ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಅಣೆಕಟ್ಟಿನ ಹಳೆಯ ಕ್ರೆಸ್ಟ್ ಗೇಟ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದ್ದು, ಹೊಸದಾಗಿ ನಿರ್ಮಿಸಲಾದ 33 ನೂತನ ಕ್ರೆಸ್ಟ್ ಗೇಟ್‌ಗಳನ್ನು ಜಂಟಿಯಾಗಿ ಲೋಕಾರ್ಪಣೆಗೊಳಿಸಲಾಗಿದೆ.

ಮುನಿರಾಬಾದ್ ಸಮೀಪದ ತುಂಗಭದ್ರಾ ಅಣೆಕಟ್ಟೆಯಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಸೇರಿದಂತೆ ಮೂರು ರಾಜ್ಯಗಳ ಪ್ರಮುಖ ನಾಯಕರು ಸಾಕ್ಷಿಯಾದರು.

ಒಂದೇ ವೇದಿಕೆಯಲ್ಲಿ 3 ರಾಜ್ಯಗಳ ಸಿಎಂ, ಕೇಂದ್ರ ಸಚಿವರು:
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರ ಒಗ್ಗಟ್ಟು. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಜಲಾಶಯದ ಸುರಕ್ಷತೆಗೆ ಕೈಜೋಡಿಸಿದರು.

ಅಣೆಕಟ್ಟಿನ 18ನೇ ಗೇಟ್ ಸಮೀಪ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದ ಬಳಿಕ ನೂತನ ಗೇಟ್‌ಗಳ ಲೋಕಾರ್ಪಣೆ ನಡೆಯಿತು. 18ನೇ ಗೇಟ್: ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ಚಾಲನೆ. 17ನೇ ಗೇಟ್: ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಂದ ಉದ್ಘಾಟನೆ. 19ನೇ ಗೇಟ್: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಲೋಕಾರ್ಪಣೆ.

20ನೇ ಗೇಟ್: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಂದ ಚಾಲನೆ.
ಬೆಳಿಗ್ಗೆ 11.15ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮವು ಸುಮಾರು ಒಂದೂಕಾಲು ಗಂಟೆ ತಡವಾಗಿ ಆರಂಭವಾಯಿತು. ಉದ್ಘಾಟನೆ ಬಳಿಕ ನಾಲ್ಕೂ ನಾಯಕರು ಪರಸ್ಪರ ಕೈಎತ್ತಿ ಒಗ್ಗಟ್ಟು ಪ್ರದರ್ಶಿಸಿದರು. ತುಂಗಭದ್ರಾ ಜಲಾಶಯ ಮತ್ತು ನೀರಿನ ಹಂಚಿಕೆ ವಿಷಯಗಳಲ್ಲಿ ಮುಂದೆಯೂ ಮೂರು ರಾಜ್ಯಗಳು ಸಹಕಾರದಿಂದ ಕಾರ್ಯನಿರ್ವಹಿಸಲಿವೆ ಎಂಬ ಬಲವಾದ ಸಂದೇಶವನ್ನು ಈ ಮೂಲಕ ರವಾನಿಸಲಾಯಿತು.

ಗೇಟ್ ಬದಲಾವಣೆಗೆ ಕಾರಣವಾಗಿದ್ದ 2024 ರ ಆ ಘಟನೆ!:
2024
ರ ಆಗಸ್ಟ್‌ನಲ್ಲಿ ತುಂಗಭದ್ರಾ ಡ್ಯಾಂನ 19ನೇ ಕ್ರೆಸ್ಟ್ ಗೇಟ್ ಚಾಲನೆ ತಡೆದುಕೊಳ್ಳಲಾರದೆ ಕೊಚ್ಚಿ ಹೋಗಿತ್ತು. ಈ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದ ಡ್ಯಾಂ ಸುರಕ್ಷತಾ ತಜ್ಞರ ತಂಡ ಹಾಗೂ ಕೇಂದ್ರ ಜಲಶಕ್ತಿ ಆಯೋಗ ಜಂಟಿಯಾಗಿ ಸಮಗ್ರ ಪರಿಶೀಲನೆ ನಡೆಸಿದ್ದವು. ಅಣೆಕಟ್ಟಿನ ಭದ್ರತೆಯ ದೃಷ್ಟಿಯಿಂದ 1953ರಲ್ಲಿ ಅಳವಡಿಸಲಾಗಿದ್ದ, ಸದ್ಯ ಸವಕಳಿಗೊಂಡಿದ್ದ ಎಲ್ಲಾ 33 ಹಳೆಯ ಕ್ರೆಸ್ಟ್ ಗೇಟ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸಲು ತಜ್ಞರು ಸೂಚನೆ ನೀಡಿದ್ದರು.

ನೂತನ ಕ್ರೆಸ್ಟ್ ಗೇಟ್‌ಗಳ ವಿಶೇಷತೆಗಳೇನು? ಒಟ್ಟು ವೆಚ್ಚ: ಸುಮಾರು 51 ಕೋಟಿ ರೂಪಾಯಿ.
ಬದಲಾದ ಗೇಟ್‌ಗಳು:
1953ರ ಅವಧಿಯ ಒಟ್ಟು 33 ಹಳೆಯ ಗೇಟ್‌ಗಳ ಜಾಗಕ್ಕೆ ಹೊಸ ಗೇಟ್ ಅಳವಡಿಕೆ. ಪ್ರತಿಯೊಂದು ಗೇಟ್ ಸುಮಾರು 20 ಅಡಿ ಎತ್ತರ ಹಾಗೂ 60 ಅಡಿ ಅಗಲವನ್ನು ಹೊಂದಿದೆ. ಒಂದೊಂದು ಗೇಟ್ ಬರೋಬ್ಬರಿ 48.50 ಟನ್ ತೂಕವಿದೆ.

ತುಂಗಭದ್ರಾ ಜಲಾಶಯದ ನೀರನ್ನು ಅವಲಂಬಿಸಿರುವ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ಸಹಕಾರದ ಸಂಕೇತವಾಗಿ ಈ ಕಾರ್ಯಕ್ರಮ ಮೂಡಿಬಂದಿದೆ. ಈ ಐತಿಹಾಸಿಕ ಹೆಜ್ಜೆಯಿಂದಾಗಿ ಜಲಾಶಯದ ಆಯುಷ್ಯ ಹೆಚ್ಚಾಗಿದ್ದು, ಮುಂಬರುವ ದಿನಗಳಲ್ಲಿ ಪ್ರವಾಹ ನಿರ್ವಹಣೆ ಹಾಗೂ ನೀರಿನ ಸಂರಕ್ಷಣೆ ಮತ್ತಷ್ಟು ಸುಲಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿಗಳಿಗೆ ಕುದಾಪುರ ಐಐಎಸ್‍ನಲ್ಲಿ ಉದ್ಯಮಶೀಲತಾ ತರಬೇತಿವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಿರಿ - ಕೆ.ಎಂ ಕೃಷ್ಣಮೂರ್ತಿಚಾಲಕನ ಮೇಲೆ ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ!21 ತಿಂಗಳ ತುರ್ತು ಪರಿಸ್ಥಿತಿಯಲ್ಲಿ ಭಾರತ - ಪ್ರಜಾಪ್ರಭುತ್ವದ ಕರಾಳ ಅಧ್ಯಾಯಶಂಕಿತ ಉಗ್ರ ಸುಹೇಲ್ 10 ದಿನ ಪೊಲೀಸ್ ಕಸ್ಟಡಿಗೆಬಿಜೆಪಿಯ ಆಂತರಿಕ ಕಚ್ಚಾಟಕ್ಕೆ ಶೋಭಾ ಕರಂದ್ಲಾಜೆ ಕಾರಣ: ಸೋಮಶೇಖರ್ ವಾಗ್ದಾಳಿ"ನಾವು ಇತಿಹಾಸ ಓದುವವರಲ್ಲ, ಸೃಷ್ಟಿಸುವವರು!": ಸಿಎಂ ಡಿ.ಕೆ ಶಿವಕುಮಾರ್ ಭಾವುಕ ನುಡಿ"ಹೆಚ್‌ಡಿಕೆ ಬಳಿ 20 ಕೋಟಿ ಮೌಲ್ಯದ 85 ವಾಚ್‌ಗಳಿವೆ!": ಪ್ರದೀಪ್ ಈಶ್ವರ್ಟಿಬಿ ಡ್ಯಾಂ ಗೇಟ್ ಲೋಕಾರ್ಪಣೆ: ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಗೈರು! ಕಾಡಾ ಅಧ್ಯಕ್ಷರನ್ನು ತಡೆದ ಪೊಲೀಸರುಭೀಕರ ಅವಳಿ ಭೂಕಂಪ: ಭಾರೀ ಜೀವಹಾನಿಗೆ ಪ್ರಧಾನಿ ಮೋದಿ ತೀವ್ರ ಸಂತಾಪ, ಭಾರತದಿಂದ ನೆರವಿನ ಹಸ್ತ!