Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಫೆ. 26ರಂದು ಮಧುರೆ ಶ್ರೀಶನಿ ಮಹಾತ್ಮ ಸ್ವಾಮಿಯ 71ನೇ ಬ್ರಹ್ಮ ರಥೋತ್ಸವ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಧುರೆ ಹೋಬಳಿ ಚಿಕ್ಕ ಮಧುರೆಯ (ಕನಸವಾಡಿ)ಇತಿಹಾಸ  ಪ್ರಸಿದ್ದ ಶ್ರೀ.ಶನಿಮಹಾತ್ಮಸ್ವಾಮಿಯ  71 ನೇಯ  ಬ್ರಹ್ಮ ರಥೋತ್ಸವವು ಪೆ.26 ರಂದು ವಿಜೃಂಭಣೆಯಿಂದ ನೆರವೇರಲಿದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ರಾಜ್ ಕುಮಾ‌ರ್ ರವರು  ತಿಳಿಸಿದರು.


   ಮಧುರೆ ಶ್ರೀ.ಶನಿಮಹಾತ್ಮಸ್ವಾಮಿ ದೇವಾಲಯದ ಅನ್ನದಾಸೋಹ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಪ್ರತಿವರ್ಷದಂತೆ ಈ ವರ್ಷವು ಬ್ರಹ್ಮರಥೋತ್ಸವ ನಡೆಯಲಿದ್ದು, ಈ ಭಾರಿ ಹಲವು ವಿಶೇಷತೆಗಳಿಂದ ಕೂಡಿರಲಿದೆ. ತಾಲ್ಲೂಕಿನೆಲ್ಲೆಡೆಯಿಂದ 101 ದೇವರುಗಳನ್ನು ಬೆಳ್ಳಿ ರಥದೊಂದಿಗೆ ಕರೆಸಿ ಮೂಲ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಿ ಶಾಲಾ ಆವರಣದಲ್ಲಿ ಸ್ಥಾಪಿಸಲಾಗುವುದು.

26ರಂದು ಮಧ್ಯಾಹ್ನ 1:15ರಿಂದ 2:10 ಗಂಟೆಯೊಳಗೆ ಸಲ್ಲುವ ಶುಭಲಗ್ನದಲ್ಲಿ 71ನೇ ಬ್ರಹ್ಮರಥೋತ್ಸವ ನೆರವೇರಲಿದೆ.

ಫೆ.25ರಿಂದ ಮಾ.3 ರ ವರೆಗೆ ವಿಶೇಷವಾದ ಉತ್ಸವ ಕಾರ್ಯಕ್ರಮಗಳು ನೆರವೇರಲಿದೆ. ಕಾರ್ಯಕ್ರಮ ದಲ್ಲಿ ವಿಶೇಷವಾಗಿ ಬಿಗ್ ಬಾಸ್ ವಿಜೇತ ಗಿಲ್ಲಿ ನಟ ಆಗಮಿಸಲಿದ್ದು,ಮೊಬೈಲ್‌ ಆರ್ಕೆಸ್ಟ್ರಾ, ಜಿ ಕನ್ನಡ ವಾಹಿನಿಯ ಸರಿಗಮಪ ತಂಡದ ಖ್ಯಾತ ಸಂಗೀತ ಚಲನಚಿತ್ರನಟರನ್ನೊಳಗೊಂಡ ಸಂಗೀತ ಸಂಜೆ ಸಂಜೆ, ಮದ್ದಿನ ಮರದ ಕಾರ್ಯಕ್ರಮ, ಕಾಕವಾಹನೋತ್ಸವ, ಚಂದ್ರಮಂಡಲೋತ್ಸವ, ಸುಪ್ರಭಾತೋತ್ಸವ, ಡೊಳ್ಳುಕುಣಿತ, ತೆಪ್ಪೋತ್ಸವ ಸೇರಿದಂತೆ ಹಲವು ಬಗೆಯ ಉತ್ಸವಗಳು ನೆರವೇರಲಿದೆ.

ತಾಲ್ಲೂಕಿನ ಕಲಾವಿದರಿಂದ ಜಾನಪಗೀತೆ,ರಂಗಭೂಮಿ ಕಲಾವಿದರಿಂದ ನಾಟಕೋತ್ಸವ ಗಳು ನಡೆಯಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅದ್ಯಕ್ಷರಾದ ಚುಂಚೇಗೌಡ, ಮುಖಂಡರಾದ ನೆಲಮಂಗಲ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲ್ಲಣ್ಣ, ದೇವಾಲಯದ ಪ್ರಧಾನ ಧರ್ಮದರ್ಶಿ ಪ್ರಕಾಶ್, ಎಲ್ ಐಸಿ ಮಂಜುನಾಥ್, ಸ್ಥಳೀಯ ಮುಖಂಡರು ಹಾಜರಿದ್ದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ