Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾಸ್ಟರ್ ಹಿರಣ್ಣಯ್ಯರವರ ಕೊಡುಗೆಗಳ ಕುರಿತ ವಿಶೇಷ ಕಾರ್ಯಕ್ರಮ

Advertisement
ಚಂದ್ರವಳ್ಳಿ ನ್ಯೂಸ್, ಚಾಮರಾಜನಗರ:
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಂಗಭೂಮಿ ಮತ್ತು ಮಾಸ್ಟರ್ ಹಿರಣ್ಣಯ್ಯ ರವರ ಕೊಡುಗೆಗಳ ಕುರಿತು ಕಾರ್ಯಕ್ರಮ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ವಿಶೇಷವಾಗಿ ರಂಗಭೂಮಿ ಗೀತೆಗಳು ಹಾಗೂ ಅಭಿನಯದ ಕಾರ್ಯಕ್ರಮ ಜರುಗಿತು.


ಹಿರಿಯ ರಂಗಭೂಮಿ ಕಲಾವಿದ ಘಟಂ ಕೃಷ್ಣ ಉದ್ಘಾಟಸಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ರಂಗಭೂಮಿ ಮತ್ತು ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ಕುರಿತು ಕಾರ್ಯಕ್ರಮ ರೂಪಿಸಿರುವ ಅಧ್ಯಕ್ಷ ಋಗ್ವೇದಿಯವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮಾಸ್ಟರ್ ಹಿರಣ್ಣಯ್ಯನವರು ಕರ್ನಾಟಕ ಕಂಡ ಶ್ರೇಷ್ಠ ಅಭಿನಯ ಚತುರ. ತಮ್ಮ ಮಾತುಗಳ ಮೂಲಕವೇ ಇಡೀ ನಾಡಿಗೆ ಹೊಸ ಅಲೆಯನ್ನು ಸೃಷ್ಟಿಸಿದವರು. ರಂಗಭೂಮಿಗೆ ಹೊಸ ಚೈತನ್ಯವನ್ನು ಶಕ್ತಿಯನ್ನು ನೀಡಿ ನೂರಾರು ಕಲಾವಿದರು ಹಾಗೂ ಕಲರಸಿಕರಿಗೆ ರಂಗ ಭೂಮಿಯ ಉತ್ಸಾಹವನ್ನು ತುಂಬಿದರು ಎಂದರು.

 ರಂಗಗೀತೆಗಳನ್ನು ಹಾಡಿದ ಮಾಂಬಳ್ಳಿ ಅರುಣ್ ಕುಮಾರ್ ಅವರು ರಂಗಭೂಮಿ ಪ್ರಾಚೀನವಾದದ್ದು .ಕನ್ನಡ ರಂಗಭೂಮಿಗೆ ತನ್ನದೇ ಆದ ಇತಿಹಾಸ ಇದೆ .ಸಾವಿರಾರು ಕಲಾವಿದರು ರಂಗಭೂಮಿಗಾಗಿ ಅರ್ಪಿಸಿಕೊಂಡಿದ್ದಾರೆ.

 ಮಾಸ್ಟರ್ ಹಿರಣ್ಣಯ್ಯನವರು ತಮ್ಮ ನಾಟಕದ ಅಭಿನಯದ ಮೂಲಕ ಹಾಸ್ಯ  ಹಾಗೂ ನೇರ ಮಾತುಗಳ ಮೂಲಕ ಸಾವಿರಾರು ಪ್ರೇಕ್ಷಕರನ್ನು ಹೊಂದಿದ್ದರು. ರಂಗಭೂಮಿ ಕಲಾವಿದರನ್ನು ಕನ್ನಡ ಸಾಹಿತ್ಯ ಪರಿಷತ್ತು ಸೇರಿಸಿ ಉತ್ತಮ ಕಾರ್ಯಕ್ರಮವನ್ನು ರೂಪಿಸಿದೆ ಎಂದರು.

ರಂಗಭೂಮಿ ಕಲಾವಿದರಾದ ಚಾಮರಾಜನಗರದ ವೆಂಕಟರಮಣ ಸ್ವಾಮಿ ತಮ್ಮ ರಂಗಗೀತೆಗಳು ಹಾಗೂ ಅಭಿನಯದ ಮೂಲಕ ವಿಶೇಷ ಗಮನ ಸೆಳೆದರು.

ಬರಹಗಾರ ಲಕ್ಷ್ಮಿ ನರಸಿಂಹ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಸರಳತೆ ಮತ್ತು ಅಭಿನಯದ ಮೂಲಕ ಕನ್ನಡಿಗರ ಸಾಕ್ಷಿ ಪ್ರಜ್ಞೆಯಾಗಿ ಇದ್ದಾರೆ. ಹಿರಣ್ಯ ನವರು ರಾಜಕೀಯ ಮತ್ತು ಭ್ರಷ್ಟಾಚಾರದ ಚಿಂತನೆಗಳನ್ನು ತಮ್ಮ ನಾಟಕದ ಮೂಲಕ ಯಾರಿಗೂ ಹೆದರದೆ ಧೈರ್ಯವಾಗಿ ತಿಳಿಸುವ ಕೆಲಸ ಮಾಡಿದರು ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಚಿಂತಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಮಾಸ್ಟರ್ ಹಿರಣ್ಣಯ್ಯನವರು ರಂಗಭೂಮಿಯ ಹಿರಿಯರು ಐದು ದಶಕಗಳ ಕಾಲ  ಹಿರಣ್ಣಯ್ಯರವರೇ ಕನ್ನಡದ ಮಾಧ್ಯಮವಾಗಿ ಕಾರ್ಯನಿರ್ವಹಿಸಿದರು. ಅವರ ಅಭಿನಯ ,ನಿರೂಪಣೆ ಶೈಲಿ, ಕನ್ನಡ ನಾಡಿನಲ್ಲಿ ಅತಿಪ್ರಸಿದ್ಧವಾಗಿದೆ. ಲಂಚಾವತಾರ ನಡುಬೀದಿ ನಾರಾಯಣ, ಭ್ರಷ್ಟಾಚಾರ ,.ಸದಾರಮೆ, ಮಕ್ಮಲ್ ಟೋಪಿ ,ದೇವದಾಸಿ ,ಅನಾಚಾರ ಅತ್ಯಾಚಾರ ಮುಂತಾದ ನಾಟಕಗಳ ಮೂಲಕ ವೈಚಾರಿಕ ಕ್ರಾಂತಿಯನ್ನು ಮೂಡಿಸಿದರು. ಅನ್ಯಾಯದ ವಿರುದ್ಧ ನಿರ್ಧಾಕ್ಷಣವಾಗಿ ಮಾತುಗಳ ಆಡುವ ಮೂಲಕ ಅಂದಿನ ಬಹುತೇಕ ರಾಜಕಾರಣಿಗಳ ವಿರೋಧವನ್ನು ಕಟ್ಟಿಕೊಂಡಿದ್ದರು.

ಕನ್ನಡ ರಂಗಭೂಮಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪ್ರಾಚೀನ ಕಾಲದಿಂದಲೂ ಸಾವಿರಾರು ಸಂಘ ಕಲಾವಿದರು ಮತ್ತು ನಾಟಕ ಸಂಘಗಳು ಕಾರ್ಯನಿರ್ವಹಿಸುತ್ತ ಜನಸಾಮಾನ್ಯರಿಗೆ ನೆಮ್ಮದಿಯನ್ನು ಸಂತೋಷವನ್ನು ನೀಡುತ್ತಿದೆ ಎಂದರು.


ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರವಿಚಂದ್ರ ಪ್ರಸಾದ್ ಕಹಳೆ, ರಂಗ ಭೂಮಿ ಗೀತೆಗಳನ್ನು ಹಾಡಿ, ಮಾಸ್ಟರ್ ಹಿರಣ್ಣಯ್ಯನವರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ
, ಶಿವಲಿಂಗ ಮೂರ್ತಿ, ಪದ್ಮ ಪುರುಷೋತ್ತಮ್, ಸರಸ್ವತಿ, ಸಿದ್ದಲಿಂಗ ಸ್ವಾಮಿ ,ರಂಗಸ್ವಾಮಿ, ಗೌರಿಶಂಕರ್ ,ಮರಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ