Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಭಿನೇತ್ರಿ ಬಿ. ಸರೋಜ ದೇವಿ ಹಾಗು ರಂಗಕರ್ಮಿ ಜವಾಜಿ ಸೀತಾರಾಮ್ ರವರಿಗೆ ನುಡಿ ನಮನ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಕನ್ನಡ ಜಾಗೃತ ಪರಿಷತ್ ವತಿಯಿಂದ ನಾಡು ನುಡಿ ಭಾಷೆಗೆ ಸೇವೆ ಸಲ್ಲಿಸಿ ನಮ್ಮನ್ನ ಅಗಲಿದ  ಚಿತ್ರರಂಗದ ಹಿರಿಯ ನಟಿ, ಅಭಿನಯ ಸರಸ್ವತಿ ಬಿ. ಸರೋಜ ದೇವಿ ಹಾಗು ಹಿರಿಯ ರಂಗಕರ್ಮಿ ಶ್ರೀ. ಜವಾಜಿ ಸೀತಾರಾಮ್ ರವರಿಗೆ ಕನ್ನಡ ಜಾಗೃತ ಭವನದಲ್ಲಿ ನುಡಿ ನಮನ ಸಲ್ಲಿಸಲಾಯಿತು. 

ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಜವಾಜಿ ಸೀತಾರಾಮ್ ಅವರ ಕಿರಿಯ ಪುತ್ರ ರಾಜೇಶ್ ಮಾತನಾಡಿ ಸಹೋದರರು ಸೇರಿದಂತೆ ಅವರ ಮಕ್ಕಳಾಗಿ ಜನಿಸಿರುವುದು ನಮ್ಮ ಸೌಭಾಗ್ಯ, ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರ ಜೀವನಶೈಲಿ ಹೇಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಅವರು ಹಣದಲ್ಲಿ ಶ್ರೀಮಂತರಾಗದಿದ್ದರು ಗೌರವ, ಪ್ರೀತಿಗೆ ಶ್ರೀಮಂತರಾಗಿದ್ದರು ನಮ್ಮ ತಂದೆಯವರು ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಿದು ನಮಗೆ ಹೆಮ್ಮೆ ನಮ್ಮ ತಂದೆಯವರು ರಂಗಭೂಮಿಯಲ್ಲಿ ನಾಟಕಗಳನ್ನು ನಿರ್ದೇಶನ  ಮಾಡಿ ಈಗಿನ ಪೀಳಿಗೆಗೆ  ಮಾರ್ಗದರ್ಶಕರಾಗಿದ್ದಾರೆ.

ಚಿತ್ರರಂಗದ ಹಿರಿಯ ಕಲಾವಿದೆಯಾದ ಅಭಿನಯ ಸರಸ್ವತಿ ಎಂದೇ ಹೆಸರು ಪಡೆದ ಬಿ.ಸರೋಜಾ ದೇವಿಯವರು ನಮ್ಮನ್ನು ಅಗಲಿರುವುದು ತುಂಬಾ ವಿಷಾದನೀಯ ನಮ್ಮ ತಂದೆ ಜವಾಜಿ ಸೀತಾರಾಮ್ ಮತ್ತು ಬಿ ಸರೋಜಾ ದೇವಿಯವರಿಗೆ    ನುಡಿ ನಮನ ಸಲ್ಲಿಸುತ್ತಿರುವುದು ಅವರಿಗೆ ಸಲ್ಲಿಸಿದ ಗೌರವ ಎಂದು ಭಾವಿಸಿದ್ದೇನೆ ಎಂದರು.

  ನಂತರ ಮಾಜಿ ನಗರಸಭಾ ಅಧ್ಯಕ್ಷ  ತಾ.ನ. ಪ್ರಭುದೇವ್ ಮಾತನಾಡಿ ಜವಾಜಿ ಸೀತಾರಾಮ್ ನಮ್ಮ ದೊಡ್ಡಬಳ್ಳಾಪುರದ ಹೆಮ್ಮೆ ಎಂದೇ ಹೇಳಬಹುದು. ಅವರ ಸರಳ ಸಜ್ಜನಿಕೆ ಎಲ್ಲರಿಗೂ ಮಾರ್ಗದರ್ಶನವಾಗಿದೆ ಅವರು ಅನೇಕ ನಾಟಕಗಳನ್ನು ನಿರ್ದೇಶನ ಮಾಡಿ ರಂಗಭೂಮಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಅವರು ಅಗಲಿರುವುದು ನಮ್ಮಗೂ ಹಾಗೂ ಅವರ ಕುಟುಂಬಕ್ಕೆ ತುಂಬಲಾಗದ ನಷ್ಟವಾಗಿದೆ.

ಹಾಗೆ ಚಿತ್ರರಂಗದ ಹಿರಿಯ ನಟಿಯಾದ ಬಿ ಸರೋಜಾ ದೇವಿಯವರು ತಮ್ಮ ಅಭಿನಯದಿಂದ ಮನೆ ಮಾತಾಗಿದ್ದವರು. 80ರ ದಶಕದಲ್ಲಿ ಹೆಸರಾಂತ ನಟರ ಜೋತೆ ಅವರ ಅಭಿನಯದ ಚಿತ್ರಗಳು ಈಗಲೂ ಜನ ಮಾನಸದಲ್ಲಿ ಉಳಿದಿದೆ   ಅವರ ಸಹಜ ಅಭಿನಯ ಈಗಿನ ನಾಯಕಿಯರಿಗೆ ಒಂದು ಪಾಠವಾಗಿದೆ ಎಂದರು.

ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸಂಜೀವ್ ನಾಯಕ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕನ್ನಡ ಪಕ್ಷದ ವೆಂಕಟೇಶ, ಚೌಡರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳ ಮಹದೇವ್, ಶ್ರೀಕಾಂತ್, ಲಯನ್ಸ್ ರವಿಕಿರಣ್, ಡಿ ಪಿ ಅಂಜಿನೇಯ  ಹಾಗು ಹಿರಿಯ ಮುಖಂಡರು ಹಾಜರಿದ್ದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ