Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಶುಸಂಗೋಪನೆ ಇಲಾಖೆಯಿಂದ ಶಾಸಕರನ್ನ ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿಲ್ಲ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಶುಸಂಗೋಪನೆ ಇಲಾಖೆಯಿಂದ ಯಾವ ಶಾಸಕರನ್ನೂ ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿಲ್ಲ ಎಂದು ಸಚಿವ ಕೆ. ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ‌.


ವಿಧಾನಸೌಧದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 25ಕ್ಕೂ ಅಧಿಕ ಶಾಸಕರು ಹೈನುಗಾರಿಕೆ ಅಧ್ಯಯನ ಸಂಬಂಧ ವಿದೇಶ ಪ್ರವಾಸ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಇಲಾಖೆ ಹೆಸರು ಏಕೆ ಬಂತೋ ಗೊತ್ತಿಲ್ಲ. ನಮ್ಮ ಇಲಾಖೆ ಕಡೆಯಿಂದ ಯಾರನ್ನೂ ಕಳಿಸುತ್ತಿಲ್ಲ‌. ಇಂಥ ಚರ್ಚೆ ಯಾಕೆ ಬಂತು ಅಂತಲೇ ಗೊತ್ತಾಗುತ್ತಿಲ್ಲ ಎಂದರು.

ಅಧಿವೇಶನದ ಸಂದರ್ಭದಲ್ಲಿ ವಿದೇಶ ಪ್ರವಾಸದ ಚರ್ಚೆ ಆಯ್ತು‌. ನೀವೂ ಬನ್ನಿ, ನೀವೂ ಬನ್ನಿ ಎಂದು ಕೆಲ ಸ್ನೇಹಿತರು ಹೇಳಿದರು. ಆಯ್ತು ನೋಡೋಣ ಎಂದೆ. ಅದರ ನಂತರ ಇಲಾಖೆಯಿಂದ ಕಳಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಕೆಲ ಸ್ನೇಹಿತರು ಅವರವರ ಖರ್ಚಿನಲ್ಲಿ ಹೋಗ್ತಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಬೇಕು. ಅವರ ಖರ್ಚಿನಲ್ಲಿ ಫಾರಿನ್ ಹೋಗೋದಕ್ಕೆ ಯಾಕೆ ಭಯ ಪಡ್ತಿದ್ದಾರೆ ಗೊತ್ತಿಲ್ಲ ಎಂದು ಸಚಿವ ವೆಂಕಟೇಶ್ ಹೇಳಿದರು.

ವಿದೇಶ ಪ್ರವಾಸಕ್ಕೆ ಕಳಿಸುವಷ್ಟು ದುಡ್ಡು ನಮ್ಮ ಇಲಾಖೆಯಲ್ಲಿ ಇಲ್ಲ. ಅವರ ದುಡ್ಡಲ್ಲೇ ಪ್ರವಾಸಕ್ಕೆ ಹೋಗೋದಕ್ಕೆ ಏಕೆ ಭಯ?. ಡಿ.ಕೆ.ಶಿವಕುಮಾರ್ ಬಣ, ಸಿಎಂ ಬಣ ಎಂಬುದನ್ನು ಯಾಕೆ ಚರ್ಚೆ ಮಾಡಬೇಕು. ನಾಯಕತ್ವ ವಿಚಾರಕ್ಕೂ ಇದಕ್ಕೂ ಏನು ಸಂಬಂಧ?. ಕೆಲವರು ಅನುಮತಿ ಕೋರಿ ಪತ್ರ ಬರೆದಿದ್ದು ಹೌದು. ಸ್ನೇಹಿತರ ವಲಯದಲ್ಲಿ ಚರ್ಚೆ ಆಗಿದ್ದು ನಿಜ. ಆದರೆ ನಾವು ಇಲಾಖೆಯಿಂದ ಕಳಿಸುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ತಿಳಿಸಿದರು.

ಎನ್​ಒಸಿಗೆ ಪತ್ರ ಬರೆದಿದ್ದಾಗ ನನ್ನ ಹೆಸರೂ ಇತ್ತು. ಆದರೆ ನಾನು ವಿದೇಶಕ್ಕೆ ಹೋಗುತ್ತಿಲ್ಲ. ಸಿಎಂ‌ಜೊತೆಗೆ ನಾನು 30 ವರ್ಷದಿಂದ ಇದ್ದೇನೆ. ಅವರೊಂದಿಗೆ ಇರುವ ಒಡನಾಟವನ್ನು ಹೀಗೆ ಪ್ರಶ್ನೆ ಮಾಡಿದರೆ, ವ್ಯಾಖ್ಯಾನ ಮಾಡಿದರೆ ಏನು ಹೇಳಲಿ?. ದೆಹಲಿಯಿಂದ ನನಗೇನೂ ಈ ಬಗ್ಗೆ ವರದಿ ಕೇಳಿಲ್ಲ, ಮಾಹಿತಿಯನ್ನು ಕೇಳಿಲ್ಲ ಎಂದು ಸಚಿವರು ತಿಳಿಸಿದರು.

ಶಾಸಕರ ವಿದೇಶ ಪ್ರವಾಸ?
ಸಿಎಂ ಸಿದ್ದರಾಮಯ್ಯ ಆಪ್ತ ಪಶುಸಂಗೋಪನೆ ಇಲಾಖೆ ಸಚಿವ ಕೆ. ವೆಂಕಟೇಶ್ ನೇತೃತ್ವದಲ್ಲಿ ಕಾಂಗ್ರೆಸ್​ನ 20ಕ್ಕೂ ಹೆಚ್ಚು ಶಾಸಕರು ಶಿವರಾತ್ರಿ ಬಳಿಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾತು ಬಲವಾಗಿ ಹರಿದಾಡುತ್ತಿತ್ತು. ಜಾನುವಾರು ಸಾಕಾಣಿಕೆ ಹಾಗೂ ಹೈನುಗಾರಿಕೆ ಸಂಬಂಧ ಅಧ್ಯಯನ ನಡೆಸಲು ಎರಡು ವಾರಗಳ ಕಾಲ ಶಾಸಕರು ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು.


ಅಧಿವೇಶನದ ವೇಳೆ ವಿದೇಶಿ ಪ್ರವಾಸದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಸಂಬಂಧ ಅನುಮತಿ ಕೋರಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿಗೆ ಪತ್ರ ಬರೆಯಲಾಗಿತ್ತು. ಕೆಲ ಶಾಸಕರಿಗೆ ನಿರಾಕ್ಷೇಪಣಾ ಪತ್ರನೂ ನೀಡಲಾಗಿತ್ತು. ಪವರ್ ಫೈಟ್ ಮಧ್ಯೆ ಈ ವಿದೇಶ ಪ್ರವಾಸ ಮತ್ತೆ ಬಣ ರಾಜಕೀಯದ ಚರ್ಚೆಗೆ ಹೊಸ ಆಯಾಮ ನೀಡಿತ್ತು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ