ಚಂದ್ರವಳ್ಳಿ ನ್ಯೂಸ್, ದಾವಣಗೆರೆ
ಬಂದಿವ್ನಿ...ಬಂದಿವ್ನಿ
ಊರ ಹೊಲಸ ಕೆದಕಲು
ಬಂದಿವ್ನಿ
ಸಾಯುವವರ ಬದುಕ ಹಸನು ಮಾಡ್ತೀನಿ
ಬಂಗಾರದ ಮರ ಮನಿ ಮುಂದ ಬೆಳಸ್ತೀನಿ
ಮಾಡಾಗ ಮುತ್ತಿನ ಮಳಿ
ಬರಸ್ತೀನಿ ,
ಆಗ್ತೈತಿ ಆಗ್ತೈತಿ
ಆಕಾಶದಾಗ ಮದುವಿ, ಮಕ್ಕಳು ಹುಟ್ಟುತಾವ
ತಿರುಗ ಮುರುಗ , ಮನಿ ಹಂಚ ಹೋಗ್ಯವ ಹಾರಿ
ದುರ್ಗಮ್ಮನ ಹಣಿ ಮ್ಯಾಲ
ಕುಂತಾವ ಕಾಗಿ,
ಕಲ್ಲಾಗಿ ಕುಂತ ಹನುಮ ಕುಣದಾನು ಒಣ್ಯಾಗ
ಮನಿ ಮಂದಿ ಸೇರ್ಯಾರು
ಮುಲಿ ಮನಿಯಾಗ
ಹಾಸಿ ಹೊದ್ಯಾನು ಈರಭದ್ರ
ಜನರ ಕಾಯ್ಲಿಕ್ಕ
ಮುದ್ದಾಗಿ ಸಾಕೀಯ ಸರದಾರನ ಕುದುರಿ
ಮಂಡ್ಯಗಾ ಬಂದವ ಮೂರ್ಕಾಸಿನ ಕುಡಕಿ ,
ತುಂಬ್ಯಾವ ವಜ್ರದ ಹರಳ
ಮನಿ ಮುಂದ ಬಂದಿನಿ
ಅರಿಶಿಣ ಹಚ್ಚಿತು, ಚಪ್ಪರ
ಕಟ್ಟಿತು, ಮಗಳ ಬಾಳು
ಬೆಳಗೀತು,
ಉಡಿ ತುಂಬಸ್ರವ್ವ,
ಸೆಟೆದು ನಿಂತಾನು ಸಣ್ಣಮಗ, ಸರಿ ಮಾಡ್ತೀನಿ
ಅವ ಉಟ್ಟಿದ್ದ ಒಂದಂಗಿ
ಪಂಚಿ, ಮೂರ್ಮಡಗೀ
ಸುತ್ನಯಗ ಇಟ್ಟೈದು ಬಳ್ಳು
ಕೊಟ್ಬೀಡು ತಂಗಿ ಒಂದ ಜರಿ ಸೀರಿ, ಅಪ್ಪ ಉಟ್ಟಿದೊಂಡ್
ಹರ್ಕಲ್ ಧೋತ್ರ,
ಮುಟ್ಟಿಸಬಿಡು ತಂಗಿ
ಮೂರ್ಹೊತ್ತು ಕಾಯ್ತಾನ
ಈ ಬುಡಬುಡಕಿ
ಆಣಿ ಮಾಡಿ ಹೇಳ್ತಿನಿ
ಸೂರ್ಯ ಹುಟ್ಟತಾನ ಮೂಡಣದ ಅಂಗಳಾದಾಗ
ಹಾರ್ತಾವ ಹಕ್ಕಿ ಆಕಾದ್ದಾಗ
ಬರ್ತಾನ ಪಡುವಲದಾಗ
ಪರಮೇಶಿ ಪುತ್ರ ,
ಹಂದರದಾಗ ಆಡ್ತಾವ ನವಿಲು
ಹತ್ತು ಮನೆಗೆ ಅಲೆದು
ಊರ ಜನರ ಫೇಸ್ ರೀಡಿಂಗ್ ಮಾಡಿ , ಅಂದಾಜ್ ಕಟಿಂಗ್
ಗುಡ್ ಫಿಟಿಂಗ್ ಮಾಡುತ್ತಿದ್ದ
ಹಾರ್ಮಲೆಸ್ ಬುಡಬುಡಕಿ ಅಲೆಮಾರಿಗಳು ಏನಾದರೂ ಎಲ್ಲಿ ಹೋದರು
ಜಗವೇ ಒಂದು ರಣ ರಂಗ
ಅವರೆಲ್ಲ ಟಿವಿಲಿ ಬರುವ
ಜೋತಿಷಿಗಳಾದರೆ...??!!!
ನಾನರಿಯೆ
ನನಗಿನ್ನೂ ನೆನಪಿದೆ
ಮನೆಮನೆಗೂ ಅಳೆದು
ಕುತೂಹಲ,
ಆತಂಕ,ಕಳವಳ,
ಹುಟ್ಟಿಸಿ ಕಾಸುಡುಗೆ
ಗಿಟ್ಟಿಸಿ ಎಲ್ಲೋ
ಉಂಡು, ಗುಡಿ ಕಟ್ಟೆಗೆ
ತಲೆ ಕೊಟ್ಟು ಅಲ್ಲೇ
ವೇಷ ಕಟ್ಟಿ
ಮುಂದಿನೂರಿಗ್ಗೆ shift
ಆಗುತ್ತಿದ್ದ ಬುಡಬುಡಕಿ
ಕಂಡೆನೆಂದರೂ ಕಾಣನು
ಅವರ ಮಧುರ ಭಾಷೆ
ನಾನರಿಯೆ ಹೀಗೆ
ಗೀಚಿರುವೆ ಅರಿದದ್ದು
ಕವನಿಸಿ
ರಚನೆ: ಗುಜ್ಜರ್ ರಿಯಲ್, ಮೀಡಿಯಾ ದಾವಣಗೆರೆ.




