ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದ ನಾಗಭೂಷಣ ಡಿ. ಅವರು 'ಕರ್ನಾಟಕ ಸೋಷಿಯಲ್ ಸರ್ವಿಸ್ ಅವಾರ್ಡ್' ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಮಾಜ ಸೇವಾ ಕ್ಷೇತ್ರದಲ್ಲಿ ಇವರ ಗಮನಾರ್ಹ ಕೊಡುಗೆ ಹಾಗೂ ಸಮಾಜದ ಮೇಲಿನ ಸಕಾರಾತ್ಮಕ ಪ್ರಭಾವವನ್ನು ಗುರುತಿಸಿ, ಇವರಿಗೆ "ಯುವ ಸೇವಾ ರತ್ನ" ವಿಭಾಗದಲ್ಲಿ ಈ ಗೌರವವನ್ನು ನೀಡಲಾಗುತ್ತಿದೆ.
'ವುಮೆನ್ಸ್ ಪ್ರೊಟೆಕ್ಷನ್ ಅಂಡ್ ಎಂಪವರ್‌ಮೆಂಟ್ ವರ್ಲ್ಡ್ ವೈಡ್ ಫೌಂಡೇಶನ್' ಆಯೋಜಿಸಿರುವ "ಇಂಡಿಯನ್ ಅವಾರ್ಡ್ಸ್ ಸೆರೆಮನಿ" ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಬೆಂಗಳೂರಿನ ಗಾಂಧಿ ಭವನದಲ್ಲಿ 2026ರ ಸೆಪ್ಟೆಂಬರ್ 27 ರಂದು ನಡೆಯಲಿರುವ ಸಮಾರಂಭದಲ್ಲಿ ನಾಗಭೂಷಣ ಅವರಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ರಿಲೇಶನ್‌ಶಿಪ್ ಮ್ಯಾನೇಜರ್ ಪ್ರತಿಖ್ಯಾ ಬಹದ್ದೂರ್ ತಿಳಿಸಿದ್ದಾರೆ.
ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ನಾಗಭೂಷಣ ಡಿ. ಅವರಿಗೆ ಗ್ರಾಮಸ್ಥರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.




