ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಸವಿ ಕಾಲೋನಿಯ ಎರಡನೇ ಕ್ರಾಸ್‌ನಲ್ಲಿ ಶ್ರೀಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶನ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಯತೀಶ್ ಎಂ. ಸಿದ್ದಾಪುರ ಅವರ ನೇತೃತ್ವದಲ್ಲಿ ಭಕ್ತಾದಿಗಳಿಂದ ವಿಶೇಷ ಭಜನಾ ಕಾರ್ಯಕ್ರಮ ವೈಭವದಿಂದ ನಡೆಯಿತು.
ಈ ಭಜನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಕ್ತರಾದ ವನಜಾಕ್ಷಿ ಮೋಹನ್, ಪಿ.ಎಸ್. ಮಾಣಿಕ್ಯ ಸತ್ಯನಾರಾಯಣ, ಎಂ. ಗೀತಾ ನಾಗರಾಜ್, ವಿಜಯಲಕ್ಷ್ಮೀ, ಜಿ. ಯಶೋಧಾ ಪ್ರಕಾಶ್, ಬಿ. ಸುಮನಾ, ಅಂಬುಜಾ, ಕವಿತಾ, ಪಂಕಜಾ, ನಾಗರತ್ನಮ್ಮ, ಶೈಲಜಾ, ರಶ್ಮಿ, ಸಂಗೀತಾ, ಸಂಧ್ಯಾ, ಆದರ್ಶ, ಪ್ರೇಮಲೀಲಾ, ಲಕ್ಷ್ಮೀ, ಸರಸ್ವತಿ, ಭ್ರಮರಾಂಬಾ, ಅಂಬಿಕಾ ಪರಮೇಶ್ವರ್ ಸೇರಿದಂತೆ ಹಲವಾರು ಭಕ್ತಾದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಭಕ್ತಿಪೂರ್ವಕವಾಗಿ ಭಜನೆ ಸಲ್ಲಿಸಿದರು.




