LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭದ್ರಾ ಹರಿವಿಗೆ ಆಗಸ್ಟ್ 17 ಗಡುವು

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆಯಡಿ ಗೋನೂರು ಅಕ್ವಾಡೆಕ್ಟ್ ವರೆಗೆ ಪ್ರಾಯೋಗಿಕ ಹರಿಸುವ ಕಾಮಗಾರಿಯನ್ನು ಆಗಸ್ಟ್
17ರ ಒಳಗೆ ಪೂರ್ಣಗೊಳಿಸಲು ಸಚಿವ ಟಿ.ರಘುಮೂರ್ತಿ ಗಡುವು ವಿಧಿಸಿದರು.

ಪ್ರಾಯೋಗಿಕ ಹರಿಸಲು ಕಳೆದ 6 ತಿಂಗಳಿಂದ ಪ್ರಯತ್ನಿಸಲಾಗುತ್ತಿದೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಎಲ್ಲಾ ಅಡೆ ತಡೆಗಳನ್ನು ನಿವಾರಿಸಿ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಶಾಸಕರು ಮತ್ತೊಮ್ಮೆ ಕಾಮಗಾರಿ ಪರಿಶೀಲಿಸಿ, ಮುಖ್ಯಮಂತ್ರಿಗಳನ್ನು ಕಾರ್ಯಕ್ರಮದ ಚಾಲನಗೆ ಆಹ್ವಾನಿಸುವುದಾಗಿ ತಿಳಿಸಿದರು. 

 ಜಲಾಶಯಗಳಿಂದ ಕುಡಿಯವ ನೀರಿನ ಹೊರತಾಗಿ, ಬೆಳೆಗಳಿಗೆ ನೀರು ಹರಿಸದಿರಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಬರಗಾಲ ಇರುವುದರಿಂದ ಹೊಸದುರ್ಗ ತಾಲ್ಲೂಕು ಸೇರಿದಂತೆ ಜಿಲ್ಲೆಯ ಕುಡಿಯುವ ನೀರಿನ ಅಗತ್ಯತೆಗೆ ಭದ್ರಾ ಜಲಾಶಯದಿಂದ 5 ಟಿ.ಎಂ.ಸಿ ನೀರು ಬಿಡಲು ಪತ್ರ ಬರೆಯಬೇಕು ನಿರ್ದೇಶಿಸಿದರು. 

ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯಿತಿ ಪಿಡಿಒಗಳು ಪ್ರತಿಯೊಂದು ಗ್ರಾಮಕ್ಕೂ ವೈಯಕ್ತಿಕವಾಗಿ ಭೇಟಿ ನೀಡಿ, ಸಾರ್ವಜನಿಕರ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು. ವಿಬಿ ಜಿ ರಾಮ್ ಅಡಿ ಪ್ರತಿಗಾಮ ಪಂಚಾಯಿತಿ ಮುಂದೆ ಲಭ್ಯವಿರುವ ಉದ್ಯೋಗದ ಮಾಹಿತಿಯನ್ನು ಪ್ರಚುರ ಪಡಿಸಬೇಕು ಎಂದು ಸಚಿವ ಟಿ.ರಘುಮೂರ್ತಿ ಸೂಚಿಸಿದರು.

ಸಭೆಯಲ್ಲಿ ಕುಡಿಯುವ ನೀರು ಸರಬರಾಜು, ರಸ್ತೆ ಗುಂಡಿಗಳನ್ನು ಮುಚ್ಚುವುದು ಹಾಗೂ ಮೇವು ಲಭ್ಯತೆ ಕುರಿತು ಅಗತ್ಯ ಮಾಹಿತಿಗಳನ್ನು ಪಡೆದ ಸಚಿವರು ಆಗಸ್ಟ್ 30 ಒಳಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ನಿರ್ದೇಶಿಸಿದರು.

ಸಭೆಗೂ ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಾಲ್ಲೂಕಿನ ಆಗಲಕೆರೆ ಹಾಗೂ ಕಲ್ಕರೆ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣಗಂಜಿಗಟ್ಟೆ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಉಪವಿಭಾಗಾಧಿಕಾರಿ ಕಾಂತರಾಜ್, ಜಿ.ಪಂ.ಉಪಕಾರ್ಯದರ್ಶಿ ಬಾಬು, ಪಶು ಪಾಲನೆ ಹಾಗೂ ವೈದ್ಯಕೀಯ ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ಪಾಲಕ ಅಭಿಯಂತರ ಅಮರನಾಥ್ ಜೈನ್,ಹೊಸದುರ್ಗ ತಹಶೀಲ್ದಾರ್ ತಿರುಪತಿ ಪಾಟೀಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಲ್ಲೆಯಲ್ಲಿ ಶೇ.90.17 ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣ-ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ಭದ್ರಾ ಹರಿವಿಗೆ ಆಗಸ್ಟ್ 17 ಗಡುವುರಾಗಿ,ಸಾವೆ ಹಾಗೂ ತೆಂಗು ರೈತರ ನೆರವಿಗೆ ಸೂಚನೆ-ಸಚಿವ ಟಿ.ರಘುಮೂರ್ತಿಪೊಲೀಸ್ ಭದ್ರತೆಯಲ್ಲಿ ರಾಜಕಾಲುವೆ ಒತ್ತುವರಿ ತೆರವುಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯಮಶೀಲತೆ ಅರಿವು ಕಾರ್ಯಕ್ರಮರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸಿದ ಗ್ರಾಮೀಣ ಪ್ರತಿಭೆಗಳು, 11 ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಬೀಜೋಪಚರಣ ಹಾಗೂ ರಸ ಗೊಬ್ಬರ ಕಲಬೆರಕೆ ಕುರಿತು ಜಾಗೃತಿ ಶಿಬಿರಜೋಗ ಜಲಪಾತಕ್ಕೆ ಕೆಎಸ್‍ಆರ್‍ಟಿಸಿ ವಿಶೇಷ ಪ್ಯಾಕೇಜ್ ಬಸ್ ಸೇವೆ: ಆ.9 ರಿಂದ ಪ್ರಾರಂಭಆಗಸ್ಟ್ 8ರಿಂದ ಹೊಸ ವಿದ್ಯುತ್ ಪ್ರಸರಣ ಮಾರ್ಗ ಚಾಲನೆ: ಕೆಪಿಟಿಸಿಎಲ್ ಎಚ್ಚರಿಕೆಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೆ ಮಂಗಳವಾರ ಆಯೋಜನೆ ಉಚಿತ ಗ್ಯಾಸ್ಟ್ರೋ ಶಿಬಿರ