ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ಮಧುರೆ ಹೋಬಳಿಯ ಪುಟ್ಟಯ್ಯನ ಅಗ್ರಹಾರದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಬಿ ಎಸ್ಸಿ,(ಕೃಷಿ)ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಂಗವಾಗಿ ರೈತರಿಗೆ ಬೀಜೋಪಚರಣ ಹಾಗೂ ರಸಗೊಬ್ಬರ ದ ಕಲಬೆರಕೆ ಯ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮೇಲ್ವಿಚಾರಣೆಯ ಮಹಾಲಕ್ಷೀ ಎನ್ ಹಾಗೂ ನಿತೀನ್ ಕೆ.ಸಿ. ಮಾತನಾಡಿ ಬೀಜೋಪಚಾರದ ಮಹತ್ವ ರೋಗ ಹಾಗೂ ಕೀಟಗಳಿಂದ ಬೀಜವನ್ನು ರಕ್ಷಿಸುವ ವಿಧಾನಗಳು ಬಿತ್ತನೆ ಮಾಡುವ ವಿಧಾನದ ಪ್ರಾತ್ಯಕ್ಷಿಕೆ ನೀಡಿದರು.
ಬೀಜೋಪಚಾರದಲ್ಲಿ ಟೈಕೋಡರ್ಮ್, ರೈಜೋಬಿಯಮ್, ಸ್ಯಾಡೋಮೈನಸ್ ಸೂಕ್ಷ್ಮ ಜೀವಿಗಳ ಮಹತ್ವವನ್ನು ತಿಳಿಸಿದ ಅವರು, ಬೀಜ ಮೊಳಕೆಯೊಡೆಯುವಿಕೆಯ ಮೂಲಕ ಬೀಜದ ಗುಣಮಟ್ಟವನ್ನು ಸರಳ ವಿಧಾನದಲ್ಲಿ ಹೇಗೆ ಪರೀಕ್ಷಿಸಬಹುದು ಎಂಬುದನ್ನು ರೈತರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಒಂದು ಕಿರು ನಾಟಕದ ಮೂಲಕ ರಸಗೊಬ್ಬರದ ಕಲ ಬೆರಕೆಯ ಪರೀಕ್ಷೆಯ ಕುರಿತು ಮಾಹಿತಿ ನೀಡಲಾಯಿತು.
ಶುದ್ಧ ಹಾಗೂ ಕಲಬೆರಕೆಯ ಗೊಬ್ಬರವನ್ನು ಗುರುತಿಸುವ ಸರಳ ಪರೀಕ್ಷೆ ಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಲಾಯಿತು ರೈತರು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ಬೀಜೋಪಚಾರಗಳ ಹಾಗೂ ರಸಗೊಬ್ಬರಗಳ ಕಲಬೆರಕೆಯ ಪರೀಕ್ಷೆಯ ಬಗ್ಗೆ ಮಾಹಿತಿ ಪಡೆದರು.
ಕಾರ್ಯಕ್ರಮದಲ್ಲಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕರಾದ ಡಾ.ಸವಿತ ಮೇಲ್ವಿಚಾರಣೆಯ ಮಹಾಲಕ್ಷೀ ಎನ್, ನಿತೀನ್ ಕೆ.ಸಿ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಾಗರಾಜಯ್ಯ ಎ. ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಗೋಪಾಲ್, ಲಿಂಗಪ್ಪ ,ವಿಶ್ವನಾಥ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ, ಶಿವಶಂಕರ್ ,ವೆಂಕಟೇಶ್,ಹನುಮಂತರಾಜು, ಮನಿಯಪ್ಪ ಭಾಗವಹಿಸಿದ್ದರು.



