LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪೊಲೀಸ್ ಭದ್ರತೆಯಲ್ಲಿ ರಾಜಕಾಲುವೆ ಒತ್ತುವರಿ ತೆರವು

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರ ಗ್ರಾಮದ ಸರ್ವೆ ನಂ.
34ರಲ್ಲಿ ರಾಜಕಾಲುವೆ , 37/1,2 ಮತ್ತು 39/1,2ರಲ್ಲಿ ಹಳ್ಳ ಹಾಗೂ 40ರಲ್ಲಿ ರಾಜಕಾಲುವೆ ಒತ್ತುವರಿ ಮಾಡಿದ್ದ ರೈತರ ಜಮೀನನ್ನು ಪೊಲೀಸ್ ಭದ್ರತೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು.

ಕೆಆರ್‌ಎಸ್ ಪಕ್ಷದ ಕಾರ್ಯಕರ್ತ ಹೊಲೇರಹಳ್ಳಿ ಗ್ರಾಮದ ಜಯಣ್ಣ ಸಲ್ಲಿಸದ್ದ ದೂರು ಅರ್ಜಿಯನ್ನು ಪರಶೀಲಿಸಿದ ತಹಶೀಲ್ದಾರ್ ಡಾ. ಮಲ್ಲಪ್ಪ ಕೆ. ಯರಗೋಳರವರು ಭೂಮಾಪಕರು, ಪೊಲೀಸರು, ಕಂದಾಯ ಇಲಾಖೆ ಸಿಬ್ಬಂದಯೊಂದಿಗೆ ದೊಡ್ಡಬೆಳವಂಗಲ ಹೋಬಳಿಯ ಉಪತಹಶೀಲ್ದಾರ್, ರಾಜಸ್ವ ನಿರೀಕ್ಷಕರಿಗೆ ಸೂಚಿಸಿ ಆದೇಶ ನೀಡಿದ್ದರು. ತಹಶೀಲ್ದಾರ್ ಆದೇಶದಂತೆ ದೊಡ್ಡಬೆಳವಂಗಲ ಹೋಬಳಿ ರಾಜಸ್ವ ನಿರೀಕ್ಷಕ ರಾಜಶೇಖರ್, ಭೂ ಮಾಪಕರಾದ ಪ್ರಕಾಶ್ ರೆಡ್ಡಿ, ವಿಎ ಮಾಲಿಂಗಯ್ಯ ಸಮ್ಮುಖದಲ್ಲಿ ಸರ್ವೆ ಮಾಡಿ, ಒತ್ತುವರಿದಾರರನ್ನು ಗುರುತಿಸಿ ನೋಟಿಸ್ ಕೊಟ್ಟ ನಂತರ ತಹಶೀಲ್ದಾರ್ ಸೂಚನೆ ಮೇರೆಗೆ ಇಂದು ರಾಜಕಾಲುವೆಯನ್ನು ಅಳೆದು ತೆರವುಗೊಳಿಸಲಾಯಿತು.

ರಾಜಕಾಲುವೆ ಒತ್ತುವರಿ ವಿರುದ್ಧ ಕಳೆದ ಎರಡು ವರ್ಷದಿಂದ ಹೋರಾಟ ನಡೆಸುತ್ತಿರುವ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಮಾತನಾಡಿ ನಮ್ಮ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ.

ಕೆಆರ್ಎಸ್ ಪಕ್ಷ ನಿರಂತರ ಹೋರಾಟ ಮಾಡುತ್ತಿದ್ದು ಅಧಿಕಾರಿಗಳು ಒತ್ತುವರಿದಾರರಿಗೆ ಸಾಕಷ್ಟು ಬಾರಿ ನೋಟಿಸ್ ನೀಡಿದರೂ ಕಿಂಚಿತ್ತು ಬೆಲೆ ಕೊಡದೆ ತಮ್ಮ ಪಾಡಿಗೆ ತಾವು ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದರು.

ಇಂದು ತಹಶೀಲ್ದಾರ್ ಸೂಚನೆ ಮೇರೆಗೆ ಒತ್ತುವರಿಯನ್ನು ತೆರವುಗೊಳಿಸಿ ಯಶಸ್ವಿಯಾದರು.

ಕೆಆರ್ಎಸ್ ಸೇನಾನಿಗಳಾದ ನಾವು ಸಾರ್ವಜನಿಕರ ಆಸ್ತಿಯನ್ನು ಉಳಿಸಿದ್ದೇವೆ. ಇದು ಕೆಆರ್ಎಸ್ ಪಕ್ಷಕ್ಕೆ ತಂದ 4ನೇ ಜಯವಾಗಿದೆ. ಮೊದಲನೇಯದು ಗುಂಡುತೋಪು, ಎರಡನೇಯದು ಸ್ಮಶಾನ, ಮೂರನೇಯದು ಕುರಿ ಮಂದೆ ಜಾಗ ತೆರವುಗೊಳಿಸಿ ಸಾರ್ವಜನಿಕ ಆಸ್ತಿಯನ್ನು ರಕ್ಷಿಸಲಾಗಿದೆ ಎಂದರು. 

ಕೆಆರ್ಎಸ್ ಪಕ್ಷಕದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಚಿಕ್ಕೆಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ರೈತ ಸಂಘ ಘಟಕದ ಕಾರ್ಯದರ್ಶಿ ಧನಂಜಯ, ಪ್ರಧಾನ ಕಾರ್ಯದರ್ಶಿಯಾದ ವಿಶ್ವನಾಥ್ ದೊಡ್ಡಬಳ್ಳಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಕಾರ್ಯದರ್ಶಿಯಾದ ಜಯರಾಮ್, ರಾಮಚಂದ್ರಯ್ಯ, ಸುಬ್ರಮಣಿ, ಶ್ರೀನಿವಾಸ್,  ನೆಲಮಂಗಲ ತಾಲ್ಲೂಕಿನ ನರಹರಿ ಸೇರಿದಂತೆ ಕೆ ಆರ್ ಎಸ್ ಪಕ್ಷದ ಸೈನಿಕರು ಉಪಸ್ಥಿತರಿದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಲ್ಲೆಯಲ್ಲಿ ಶೇ.90.17 ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣ-ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ಭದ್ರಾ ಹರಿವಿಗೆ ಆಗಸ್ಟ್ 17 ಗಡುವುರಾಗಿ,ಸಾವೆ ಹಾಗೂ ತೆಂಗು ರೈತರ ನೆರವಿಗೆ ಸೂಚನೆ-ಸಚಿವ ಟಿ.ರಘುಮೂರ್ತಿಪೊಲೀಸ್ ಭದ್ರತೆಯಲ್ಲಿ ರಾಜಕಾಲುವೆ ಒತ್ತುವರಿ ತೆರವುಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯಮಶೀಲತೆ ಅರಿವು ಕಾರ್ಯಕ್ರಮರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸಿದ ಗ್ರಾಮೀಣ ಪ್ರತಿಭೆಗಳು, 11 ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಬೀಜೋಪಚರಣ ಹಾಗೂ ರಸ ಗೊಬ್ಬರ ಕಲಬೆರಕೆ ಕುರಿತು ಜಾಗೃತಿ ಶಿಬಿರಜೋಗ ಜಲಪಾತಕ್ಕೆ ಕೆಎಸ್‍ಆರ್‍ಟಿಸಿ ವಿಶೇಷ ಪ್ಯಾಕೇಜ್ ಬಸ್ ಸೇವೆ: ಆ.9 ರಿಂದ ಪ್ರಾರಂಭಆಗಸ್ಟ್ 8ರಿಂದ ಹೊಸ ವಿದ್ಯುತ್ ಪ್ರಸರಣ ಮಾರ್ಗ ಚಾಲನೆ: ಕೆಪಿಟಿಸಿಎಲ್ ಎಚ್ಚರಿಕೆಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೆ ಮಂಗಳವಾರ ಆಯೋಜನೆ ಉಚಿತ ಗ್ಯಾಸ್ಟ್ರೋ ಶಿಬಿರ