ಚಂದ್ರವಳ್ಳಿ ನ್ಯೂಸ್, ರಾಮನಗರ:
ರೈತರ ಒಪ್ಪಿಗೆಯಿಲ್ಲದೆ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು, ಸಾವಿರಾರು ಕುಟುಂಬಗಳನ್ನು ಬೀದಿಗೆ ತಳ್ಳುವ ಬಿಡದಿ ಟೌನ್‌ಶಿಪ್‌ಯೋಜನೆಗೆ ಬಿಜೆಪಿ ಹಾಗೂ ಜೆಡಿಎಸ್‌ಮೈತ್ರಿಕೂಟ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ಎಚ್ಚರಿಸಿದ್ದಾರೆ.
ಬಿಡದಿ ಟೌನ್‌ಶಿಪ್‌ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಬಿಡದಿಯಿಂದ ಆರಂಭವಾದ ಮೂರು ದಿನಗಳ ಬೃಹತ್‌ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾವಿರಾರು ರೈತರು ಹಾಗೂ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದರು. "ಇದು ಕೇವಲ ಪಾದಯಾತ್ರೆಯಲ್ಲ, ರೈತರ ಭೂಮಿ, ಬದುಕು ಮತ್ತು ಮೂಲಭೂತ ಹಕ್ಕುಗಳ ಉಳಿವಿಗಾಗಿ ನಡೆಯುತ್ತಿರುವ ಬೃಹತ್‌ಹೋರಾಟ" ಎಂದು ಹೇಳಿದರು.
ಕಾಂಗ್ರೆಸ್‌ನ ದ್ವಿಮುಖ ನೀತಿಗೆ ಆಕ್ರೋಶ:
"ಕಾಂಗ್ರೆಸ್‌ಪಕ್ಷ ವಿರೋಧ ಪಕ್ಷದಲ್ಲಿದ್ದಾಗ ಇದೇ ಬಿಡದಿ ಟೌನ್‌ಶಿಪ್‌ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ತಕ್ಷಣ ಅದೇ ಯೋಜನೆಯನ್ನು ಜಾರಿಗೆ ತರಲು ಹೊರಟಿರುವುದು ಅವರ ದ್ವಿಮುಖ ನೀತಿಯನ್ನು ಬಯಲುಗೊಳಿಸಿದೆ" ಎಂದು ಆರ್. ಅಶೋಕ್‌ತೀವ್ರ ವಾಗ್ದಾಳಿ ನಡೆಸಿದರು.
ವಿಧಾನಸಭೆಯ ಒಳಗೂ-ಹೊರಗೂ ಹೋರಾಟ:
ಕಾಂಗ್ರೆಸ್‌ಸರ್ಕಾರ ತನ್ನ ಜನವಿರೋಧಿ ನಿರ್ಧಾರಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಇಲ್ಲವಾದರೆ ಈ ಯೋಜನೆಯೇ ಕಾಂಗ್ರೆಸ್‌ಸರ್ಕಾರದ ಪತನಕ್ಕೆ ಶವಪೆಟ್ಟಿಗೆಯ ಕೊನೆಯ ಮೊಳೆಯಾಗಲಿದೆ. ರೈತರ ಭೂಮಿ, ಬಿಡದಿ ಹಾಗೂ ಕರ್ನಾಟಕವನ್ನು ಉಳಿಸಲು ವಿಧಾನಸಭೆಯ ಒಳಗೂ ಮತ್ತು ಹೊರಗೂ ಬಿಜೆಪಿ-ಜೆಡಿಎಸ್‌ಜಂಟಿಯಾಗಿ ಹೋರಾಟವನ್ನು ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.



