Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಕೇಂದ್ರದ ಬಜೆಟ್ ಪ್ರಗತಿ ಪಥದ ಮುನ್ಸೂಚನೆ-ಛಲವಾದಿ ನಾರಾಯಣಸ್ವಾಮಿ

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೇಂದ್ರ ಬಜೆಟ್-2026  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಅವರು ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದು ಕೇಂದ್ರ ಸರ್ಕಾರವು 2026ನೇ ಸಾಲಿನ ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಿದೆ. ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಸ್ವಾವಲಂಬಿಗಳಾಗಿ ಬದುಕಲು ಹಲವು ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ಬಯೋ ಫಾರ್ಮಾ ಶಕ್ತಿ ಹಾಗೂ ಮಹಿಳೆಯರಿಗೆ ಶಿ ಮಾರ್ಟ್ ಸೇರಿದಂತೆ ಹಲವು ಹೊಸ ಯೋಜನೆಗಳನ್ನು ಈ ಬಾರಿ ಘೋಷಣೆ ಮಾಡಲಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.


ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿದ ಅವರು, 9ನೇ ಆಯವ್ಯಯದ ಗಾತ್ರ 53.47 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಸಾರಿಗೆ ಹಾಗೂ ರಕ್ಷಣಾ ಇಲಾಖೆಗೆ ಅತಿಹೆಚ್ಚು ಅನುದಾನ ಹಂಚಿಕೆ ಮಾಡಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಗೃಹ ವ್ಯವಹಾರಗಳ ಇಲಾಖೆಗೂ ಹೆಚ್ಚು ಒತ್ತು ನೀಡಲಾಗಿದೆ.

Advertisement

ಈ ಬಾರಿಯ ಬಜೆಟ್ ಯಾರನ್ನು ಓಲೈಕೆ ಮಾಡಿಲ್ಲ. ಎಲ್ಲಾ ವರ್ಗದವರ, ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಬಜೆಟ್ ಮಂಡನೆ ಮಾಡಲಾಗಿದೆ ಕಾಂಗ್ರೆಸ್ ಬಜೆಟ್‌ಮಾಡಿದ್ದರೆ ತಾರತಮ್ಯ ಓಲೈಕೆ ಕಾಣಬಹುದಾಗಿತ್ತು. ಯಾವುದೇ ಬೆಲೆ, ತೆರಿಗೆ ಹೆಚ್ಚು, ಕಡಿಮೆ ಮಾಡದೆ ಜನರಿಗೆ ಸೌಕರ್ಯ ನೀಡಲು ಒತ್ತು ನೀಡಿದ್ದಾರೆ. ಕ್ರೆಡಿಬಲ್, ಕಮಿಟ್ ಮೆಂಟ್ ಹೊಂದಿದ್ದೇವೆ. ನುಡಿದಂತೆ ನಡೆದಂತೆ ಬಜೆಟ್‌ಮಂಡಸಲಾಗಿದೆ ಎಂದ ನಾರಾಯಣಸ್ವಾಮಿ, ರಾಷ್ಟ್ರೀಯ  ಯೋಜನೆ, ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ ಮತ್ತು ಕೌಶಲ್ಯಕ್ಕಾಗಿ ಸಮರ್ಥ್ 2.0 ಸೇರಿದಂತೆ ಸಮಗ್ರ ಯೋಜನೆಯನ್ನು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಹೇಳಿದರು.


202627ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ, ತಂತ್ರಜ್ಞಾನ ಹಾಗೂ ತೆರಿಗೆ ಸುಧಾರಣೆಗೆ ಸ್ಪಷ್ಟ ಒತ್ತು ನೀಡಲಾಗಿದೆ. ಯೂನಿವರ್ಸಿಟಿ ಟೌನ್‌ಶಿಪ್‌ಗಳು ಯುವಜನತೆಗೆ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅವಕಾಶಗಳನ್ನು ವಿಸ್ತರಿಸುವ ನಿರೀಕ್ಷೆಯಿದೆ. ಸೆಮಿಕಂಡಕ್ಟರ್ ಮಿಷನ್‌ಗೆ 40,000 ಕೋಟಿ ಹೂಡಿಕೆ ತಂತ್ರಜ್ಞಾನ ಕ್ಷೇತ್ರದಲ್ಲಿ ಆತ್ಮನಿರ್ಭರತೆಯತ್ತ ಮಹತ್ವದ ಹೆಜ್ಜೆಯಾಗಿದೆ. ಆದಾಯ ತೆರಿಗೆ ನಿಯಮಗಳ ಸರಳೀಕರಣವು ಸಾಮಾನ್ಯ ತೆರಿಗೆದಾರರಿಗೆ ನಿರಾಳತೆ ನೀಡುತ್ತದೆ. ಒಟ್ಟಾರೆ, ಈ ಬಜೆಟ್ ವಿಕಸಿತ ಭಾರತದ ಭವಿಷ್ಯ ವಾಗಿದೆ.


ಕಾಂಗ್ರೆಸ್ ಆಡಳಿತದಲ್ಲಿ ಕರ್ಪೋರೇಷನ್‌(ನಿಪುಣರು) ಓಲೈಕೆ, ಭ್ರಷ್ಟಾಚಾರ, ಕಮಿಷನ್ ದಂಧೆ (ಟೆಂಡರ್), ಕ್ರಿಮಿನಲ್‌, ಜಾತಿ ರಾಜಕಾರಣ ಮಾಡಲಾಗುತ್ತಿದೆ. ಮುಸ್ಲಿಂ ಅವರಿಗೆ ಮಾತ್ರ ಸಾಲದ ಮೇಲೆ ಬಡ್ಡಿ ವಜಾ ಮಾಡಲಾಗಿದೆ, ಕಾಂಗ್ರೆಸ್ ಸರ್ಕಾರ ಮುಸ್ಲಿಂಗಾಗಿ ಹುಟ್ಟಿದೆ ಅನಿಸುತ್ತೆ. ನಾವು ಅಲ್ಪಸಂಖ್ಯಾತರ ವಿರೋಧಿಗಳ ಅಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು ಎಂಬುದು ಬಿಜೆಪಿ ತತ್ವ.


ಹೊಸ ಆದಾಯ ತೆರಿಗೆ ಕಾಯ್ದೆಯು ಏಪ್ರಿಲ್ 1, 2026 ರಿಂದ ಜಾರಿಗೆ ಬರಲಿದೆ. 1961 ರ ಕಾಯಿದೆಯನ್ನು ಸರಳೀಕೃತ ನಿಯಮಗಳು ಮತ್ತು ಕಡಿಮೆ ವಿಭಾಗಗಳೊಂದಿಗೆ ಬದಲಾಯಿಸಲಾಗಿದೆ.


ಮಧ್ಯಮ ವರ್ಗದವರ ಆರ್ಥಿಕ ಸಬಲತೆಗೆ ಹೆಚ್ಚು ಒತ್ತು ನೀಡಲಾಗಿದೆ. ಎಂ ಎಸ್ ಎಂ ಇ ಬಂದಮೇಲೆ ಎಲ್ಲರು ಸ್ವತಂತ್ರರಾಗುತ್ತಿದ್ದಾರೆ. ಟೆಕ್ಸ್ ಟೈಲ್ ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಕಾಂಗ್ರೆಸ್‌ಸಂವಿಧಾನದಲ್ಲಿ ಪಾನಮತ್ತರಿಗೆ ಕಾಂಗ್ರೆಸ್ ನಲ್ಲಿ ಅವಕಾಶವಿಲ್ಲವೆನ್ನುತ್ತಾರೆ. ಆದರೆ ಆ ಪಕ್ಷದಲ್ಲೇ ಪಾನಪ್ರಿಯರಿದ್ದಾರೆ. ಕಾಂಗ್ರೆಸ್ ಅವರಿಗೆ ಕುಡಿದಿಲ್ಲ ಎಂದರೆ ರಾತ್ರಿ ನಿದ್ದೆ ಬರಲ್ಲ. ಒಂದು ದಿನವೂ ಸಹಿತ ರಾಹುಲ್ ಗಾಂಧಿ ಖಾದಿ ಹಾಕಿಲ್ಲ. ಗಾಂಧಿ ತತ್ವಗಳ ವಿರುದ್ಧ ಕಾಂಗ್ರೆಸ್‌ಇದೆ. ಕಾಂಗ್ರೆಸ್ ನಲ್ಲಿ ಸ್ಟೀಮ್ ಗಳು ಇಲ್ಲ ಬರೀ ಸ್ಕ್ಯಾಮ್ ಮಾಡುತ್ತಿದ್ದರು. ಮಹಾತ್ಮಗಾಂಧಿ ಹೆಸರಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದೆ. ಹಿಂದುಗಳನ್ನು, ರಾಮನನ್ನು ಕಂಡರೆ ಕೆಲವೂ ಕಾಂಗ್ರೆಸಿಗರಿಗೆ ಆಗುವುದಿಲ್ಲ. ಯೋಜನೆಗಳಿಗೆ ಮುಸ್ಲಿಂ ಹೆಸರನ್ನ ಇಟ್ಟಿದ್ದರೆ ಬಂದು ಅಪ್ಪುಕೊಳ್ಳುತ್ತಿದ್ದರು. ಇಂದಿರಾ ಗಾಂಧಿ ಅವರ ಪತಿ ಘಂಡಿ ಅಂತ ಇತ್ತು. ಘಂಡಿ ಇದ್ದಿದ್ದು ಗಾಂಧಿ ಹೇಗಾಯಿತು ಎಂಬುದು ಗೊತ್ತಿಲ್ಲ. ಮುಸ್ಲಿಂರ ನಿಷ್ಠೆ ಯಾರ ಪರವೂ ಇರಲ್ಲ. ಅವರದ್ದು ಅವರ ಧರ್ಮದ ಬಗ್ಗೆ ಮಾತ್ರ ಲಾಯಲ್ ಟಿ ಇರುತ್ತದೆ. 2047ಕ್ಕೆ ಆರ್ಥಿಕ ವ್ಯವಸ್ಥೆಯಲ್ಲಿ ಸದೃಢವಾಗಬೇಕು. ದಿಲ್ ಚೋರಿ ಆಗಬೇಕೇ ಹೊರೆತು ವೋಟ್ ಆಗಬಾರದು. ಕಾಂಗ್ರೆಸ್ ವೋಟ್ ಚೋರಿ ಮಾಡಿ ಸೋತಿದೆ. ಮೋದಿ ದಿಲ್ ಚೋರಿ ಮಾಡಿ ಗೆದ್ದಿದ್ದಾರೆ ಎಂದರು.


 ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣ, ಹಿರಿಯ ಮುಖಂಡರಾದ ಕೆ.ಎಂ. ಹನುಮಂತರಾಯಪ್ಪ, ಗೋಪಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಬಂತಿ ವೆಂಕಟೇಶ್‌, ನಗರಾಧ್ಯಕ್ಷ ಮುದ್ದಪ್ಪ, ಮಂಜುನಾಥ ಹಾಜರಿದ್ದರು.


ಎ ಐ ವಿಡಿಯೋಗಳು ಬಳಸುವ ಕಾಲಮಾನದಲ್ಲಿ ಕಾಂಗ್ರೆಸ್ ಪಕ್ಷವು ಮುಂಬರುವ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಗೆ ಮರಳುವ ಪ್ರಯತ್ನ ಮಾಡುತ್ತಿದೆ. ಮತದಾರರು ಬಿಜೆಪಿ ಬೆಂಬಲಿಸುವ ಮೂಲಕ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ.
ಧೀರಜ್ ಮುನಿರಾಜು, ಶಾಸಕ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು