Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Traveling Tips

ಸಿದ್ದರಾಮಯ್ಯನವರಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್​​ ವೇಳೆ ಗೊಂದಲ

ಚಂದ್ರವಳ್ಳಿ ನ್ಯೂಸ್, ರಾಯಚೂರು:
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಲಿಕಾಪ್ಟರ್ ಲ್ಯಾಂಡಿಂಗ್​​ ವೇಳೆ ಗೊಂದಲ ಸೃಷ್ಟಿಯಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಭಾನುವಾರ ನಡೆದಿದೆ.
ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಅವರ ಪುತ್ರನ ಮದುವೆಗೆ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿದ್ದರು.


ಲಿಂಗಸೂಗೂರು ಪಟ್ಟಣದ ಹೊರವಲಯದ ರಾಯಚೂರು ರಸ್ತೆಯ ಖಾಸಗಿ ಲೇಔಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರ ಹೆಲಿಕಾಪ್ಟರ್ ಲ್ಯಾಂಡಿಂಗ್​​​ ನಿಗದಿಯಾಗಿತ್ತು.

ಈ ಸಂಬಂಧ ಎಲ್ಲಾ‌ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಲಬುರಗಿ ರಸ್ತೆಯಲ್ಲಿರುವ ಶಾಸಕ ಮಾನಪ್ಪ ವಜ್ಜಲ್‌ಅವರ ಖಾಸಗಿ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಮಾಡಲಾಯಿತು. ಪೈಲಟ್ ಗೊಂದಲದಿಂದ ನಿಗದಿತ ಹೆಲಿಪ್ಯಾಡ್‌ಬಿಟ್ಟು ಬೇರೆ ಕಡೆ ಲ್ಯಾಂಡಿಂಗ್​​​ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಶಾಸಕ ಮಾನಪ್ಪ ವಜ್ಜಲ್‌ಅವರ ಖಾಸಗಿ ಹೆಲಿಪ್ಯಾಡ್‌ನಲ್ಲಿ ಸಚಿವ ಸತೀಶ್ ಜಾರಕಿ ಹೊಳಿಯವರ ಹೆಲಿಕಾಪ್ಟರ್ ಲ್ಯಾಂಡಿಂಗ್​ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
ರಾಯಚೂರು ರಸ್ತೆಯ ಖಾಸಗಿ ಲೇಔಟ್​ನ ಹೆಲಿಪ್ಯಾಡ್‌ನಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಬರಮಾಡಿಕೊಳ್ಳಲ ಪೊಲೀಸ್ ಇಲಾಖೆ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರೆ
ಇತ್ತ ಸಿಎಂ ಬದಲಿಗೆ ಸಚಿವ ಸತೀಶ್ ಜಾರಕಿಹೊಳಿ ಇಳಿದಿದ್ದಾರೆ.

ಶಾಸಕ ಮಾನಪ್ಪ ವಜ್ಜಲ್‌ಅವರ ಖಾಸಗಿ ಹೆಲಿಪ್ಯಾಡ್‌ನಲ್ಲಿ ಸಿಎಂ ಹೆಲಿಕಾಪ್ಟರ್ ಲ್ಯಾಂಡಿಂಗ್​​ ಆಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಸಿಎಂ ಇದ್ದ ಸ್ಥಳಕ್ಕೆ ದೌಡಾಯಿಸಿದ ಪ್ರಸಂಗ ನಡೆಯಿತು.
ಇದಾದ ನಂತರ ನಿಗದಿತ ಸ್ಥಳಕ್ಕೆ ಸಿಎಂ ಹೆಲಿಕಾಪ್ಟರ್ ಆಗಮಿಸಿ
, ಪೊಲೀಸ್ ಗೌರವ ವಂದನೆ ಸ್ವೀಕರಿಸಿ ಟೇಕ್ ಆಫ್ ಆಯಿತು. ಸಿಎಂ ಹಾಗೂ ಡಿಸಿಎಂ ಹೆಲಿಕಾಪ್ಟರ್​ಗಳನ್ನು ಒಂದು ಕಡೆ ಲ್ಯಾಂಡಿಂಗ್​ಗೆ ವ್ಯವಸ್ಥೆ ಮಾಡಲಾಗಿತ್ತು.

ಪೊಲೀಸರ ಪ್ರತಿಕ್ರಿಯೆ:
ಲಿಂಗಸೂಗೂರು ಪಟ್ಟಣದಲ್ಲಿ ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೆ ಮೂರು ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಪೈಲಟ್‌ಗೊಂದಲದಿಂದ ಸಚಿವ ಸತೀಶ್ ಜಾರಕಿಹೊಳಿ ಇಳಿಯಬೇಕಾದ ಹೆಲಿಪ್ಯಾಡ್​ನಲ್ಲಿ ಸಿಎಂ ಸಿದ್ದರಾಮಯ್ಯನವರ ಹೆಲಿಕಾಪ್ಟರ್​ ಲ್ಯಾಂಡ್​ ಆಗಿದೆ.


ಸಿಎಂ ಲ್ಯಾಂಡ್ ಆಗಬೇಕಿದ್ದ ಹೆಲಿಪ್ಯಾಡ್​ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಇಳಿದಿದ್ದಾರೆ. ಬಳಿಕ ನಿಗದಿತ ಸ್ಥಳಕ್ಕೆ ಮುಖ್ಯಮಂತ್ರಿ ಅವರ ಹೆಲಿಕಾಪ್ಟರ್​ ಬಂದಿಳಿದು, ಪೊಲೀಸ್ ಗೌರವ ವಂದನೆ ಸ್ವೀಕರಿಸಿ ಹೆಲಿಕಾಪ್ಟರ್​ ಟೇಕ್ ಆಫ್ ಆಗಿದೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ನಾನೇ ಕ್ರೂರಿ, ನಾನೇ ಪ್ರೇಮಿ": ಆತ್ಮಾವಲೋಕನದ ಸಂದೇಶ ನೀಡಿದ ಡಾ.ಬಸವ ಕುಮಾರ ಸ್ವಾಮೀಜಿ ಭಾವನಾತ್ಮಕ ಮಾತುಗಳು!ಬುಡಬುಡಕಿ ಬಂದನಾರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ: ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅಭಯಸಾರಿಗೆ ಡಿಪೋ ಹಾಗೂ ವಸತಿ ಗೃಹಗಳ ಉದ್ಘಾಟನೆಗೆ ಒತ್ತಾಯಿಸಿ ಸಚಿವ ರಘುಮೂರ್ತಿಯವರಿಗೆ ಮನವಿ ವಾಸವಿ ಕಾಲೋನಿಯ ಗಣೇಶ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಭಕ್ತರಿಂದ ವಿಶೇಷ ಭಜನೆಹರಿಯಬ್ಬೆ ನಾಗಭೂಷಣ ಡಿ. ಅವರಿಗೆ 'ಕರ್ನಾಟಕ ಸೋಷಿಯಲ್ ಸರ್ವಿಸ್ ಅವಾರ್ಡ್' ಗೌರವಬಯಲುಸೀಮೆಯ ಜೀವನಾಡಿ: ಚಿತ್ರದುರ್ಗ ಜಿಲ್ಲೆಗೆ ಹರಿದುಬಂದ ಭದ್ರೆ - ಸಂಭ್ರಮವೋ ಸಂಭ್ರಮ!ಗಂಗಾ ಕಲ್ಯಾಣ: 13 ಫಲಾನುಭವಿಗಳಿಗೆ ಮೋಟಾರ್ ಪಂಪ್ ವಿತರಿಸಿದ ಸಚಿವ ಟಿ.ರಘುಮೂರ್ತಿದಾವಣಗೆರೆಯಲ್ಲಿ ಇಂದು ರಾಜ್ಯಮಟ್ಟದ 'ವಿದ್ಯಾರತ್ನ' ಪ್ರಶಸ್ತಿ ಪ್ರದಾನ: 18 ಜನ ಶಿಕ್ಷಕರ ಆಯ್ಕೆತಾಲೂಕಿನ ಹುಲಿಕುಂಟೆಯಲ್ಲಿ ಹೊಸ ಕೆಎಸ್‌ಆರ್‌ಟಿಸಿ ಉಪವಿಭಾಗ ಹಾಗೂ ಬಸ್ ಡಿಪೋ: ಸಚಿವ ಡಾ. ಜಿ. ಪರಮೇಶ್ವರ್