Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇವಿ ಪುರಾಣ ಚಂಡ ಮುಂಡರ ವಧಾ ಪ್ರಸಂಗ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘವು ತನ್ನ
40ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ 17ನೇ ಕಾರ್ಯಕ್ರಮದ ಅಂಗವಾಗಿ ದೇವಿ ಭಾಗವತದ ಚಂಡ ಮುಂಡರ ಪ್ರಸಂಗದ ವಾಚನ ವ್ಯಾಖ್ಯಾನವನ್ನು ಇಲ್ಲಿನ ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಹುರುಳಿ ಎಂ. ಬಸವರಾಜ್ ಅವರು ಗ್ರಾಮೀಣ ಗಾಯಕ ಕಲಾ ಪ್ರತಿಭೆ ಮಲ್ಲಾಪುರ ಗೊಲ್ಲರಟ್ಟಿಯ ಸಿ. ವೀರಣ್ಣ ಅವರ ವಾಚನಕ್ಕೆ ವಿದ್ಯುತ್ ಪೂರ್ಣ ವ್ಯಾಖ್ಯಾನ ನೀಡಿದರು.
ಒಟ್ಟಿನಲ್ಲಿ ಒಂದು ಪ್ರಸಂಗದ ಹೆಸರಲ್ಲಿ ಕವಿ ಚಿದಾನಂದ ಅವಧೂತರ ದೇವಿ ಭಾಗವತದ ಸಮಗ್ರ ಸ್ವರೂಪವನ್ನು ಶ್ರೋತೃಗಳ ಮುಂದೆ ಮಂಡಿಸಿದ ಪರಿ ವಿಶೇಷವಾಗಿತ್ತು.


ದೇವಸ್ಥಾನದ ಮಾರುತಿ ಭಜನಾ ಮಂಡಳಿಯವರ ಗಮಕ ಪ್ರಾರ್ಥನೆಯೊಂದಿಗೆ ಕಾಯೌ ಶ್ರೀ ಗೌರಿ ಎಂಬ ಬಸಪ್ಪ ಶಾಸ್ತ್ರಿ ವಿರಚಿತ ದೇವಿ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ  ಸಂಘದ ನಿರ್ದೇಶಕಿ ಬಿ .ಎಲ್. ಉಮಾ ಸ್ವಾಗತಿಸಿದರು. ಶ್ರೀ ವಾರಿ ಭಜನಾ ಮಂಡಳಿಯ ಅಧ್ಯಕ್ಷಣಿ  ಸತ್ಯಪ್ರಭಾ ವಸಂತಕುಮಾರ್ ತಮ್ಮ ಭಾಷಣದಲ್ಲಿ ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದ ಕಾರ್ಯ ಶ್ಲಾಘಿಸಿ ತಮ್ಮ ಸಂಘದಲ್ಲಿ ಈಚೆಗೆ ನಡೆಯುತ್ತಿರುವ ಪ್ರಾರ್ಥನಾ ನಿವೇದನೆಯಲ್ಲಿ ಗಮಕ ಕಲೆಯನ್ನು ಅಳವಡಿಸಿಕೊಳ್ಳುತ್ತಿರುವುದಾಗಿ   ಹೇಳಿದರು.

ಗಮಕ ಕಲಾಭಿಮಾನಿಗಳ ಸಂಘದ ಅಧ್ಯಕ್ಷಣಿ ಕೆ.ಆರ್ .ರಮಾದೇವಿ ವೆಂಕಣ್ಣಾಚಾರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗಮಕಲೆ ಉಳಿಸಿ ಬೆಳೆಸಲು ನಿರಂತರ ಪ್ರಯತ್ನ ನಡೆಸಿರುವುದಾಗಿಯೂ, ಕಲಾಭಿಮಾನಿಗಳು ಅತಿಶಯವಾದ ಸಹಕಾರ ನೀಡಿ ಸಹಾಯ ಮಾಡಬೇಕೆಂದು ಹೇಳಿದರು.

ಸಭೆಯಲ್ಲಿ ಜಿ .ಆರ್ .ಕೃಷ್ಣಮೂರ್ತಿ, ಕೆ.ವೆಂಕಣ್ಣಾಚಾರ್, ಅಮೆರಿಕ ಕನ್ನಡ ಸಂಘಗಳ ಪ್ರಮುಖ ಕಾರ್ಯಕರ್ತ ಜಿ.ಕೆ .ಸತೀಶ್, ಗಣಪತಿ ದೇವಸ್ಥಾನ ಸಮಿತಿಯ ಪ್ರೊ.ಹರೀಶ್, ಚಿದಾನಂದಪ್ಪ ಮೊದಲಾದವರು ಹಾಜರಿದ್ದರು. ಶಶಿಧರ್ ಶ್ಯಾನುಭೋಗ್ ಕಾರ್ಯಕ್ರಮ ನಿರ್ವಾಹಣೆ ಮಾಡಿದರು. ಸಮಾರಂಭದ ಅಂಗವಾಗಿ ವಾಚಕಕಾರ ಸಿ .ವೀರಣ್ಣ ಅವರನ್ನು ವ್ಯಾಖ್ಯಾನಕಾರ ಹುರುಳಿ ಬಸವರಾಜ ಹಾಗೂ  ಸತ್ಯಪ್ರಭಾ ವಸಂತಕುಮಾರ್ ಅವರನ್ನು ಸಂಘದ ಪರವಾಗಿ ನಿರ್ದೇಶಕ ಲಕ್ಷ್ಮಿ ವಾಸುದೇವ ಶ್ರೇಷ್ಠಿ, ಅನಂತ ಕೃಷ್ಣ, ಮೀನಾಕ್ಷಿ ಭಟ್ ಅವರುಗಳು ಸನ್ಮಾನಿಸಿ ಗೌರವಿಸಿದರು.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ