Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕೈದಿಗಳು ತಪ್ಪಿಸಿಕೊಂಡರೋ, ವ್ಯವಸ್ಥೆಯೇ ಅವರನ್ನು ತಪ್ಪಿಸಿತೋ?....

ಕೈದಿಗಳು ತಪ್ಪಿಸಿಕೊಂಡರೋ, ವ್ಯವಸ್ಥೆಯೇ ಅವರನ್ನು ತಪ್ಪಿಸಿತೋ?....
"
ವ್ಯವಸ್ಥೆಯ ಬಲ ಗೋಡೆಗಳಲ್ಲಿ ಅಲ್ಲ, ಅದನ್ನು ಕಾಪಾಡುವವರ ಕರ್ತವ್ಯನಿಷ್ಠೆಯಲ್ಲಿ ಅಡಗಿದೆ.ಜಾಗೃತಿ ಕಳೆದುಕೊಂಡ ಆಡಳಿತದಲ್ಲಿ ವಿಶ್ವಾಸ ಕುಸಿಯುತ್ತದೆ, ಹೊಣೆಗಾರಿಕೆಯೇ ಉತ್ತಮ ವ್ಯವಸ್ಥೆಯ ಅಡಿಪಾಯವಾಗಿದೆ.

ನಿರ್ಲಕ್ಷ್ಯಕ್ಕೆ ಅವಕಾಶ ನೀಡಿದರೆ ಸಣ್ಣ ಬಿರುಕುಗಳೇ ದೊಡ್ಡ ಸಂಕಟಗಳಿಗೆ ದಾರಿಯಾಗುತ್ತವೆ." 

Advertisement

ಸೆರೆಮನೆಯೇ ನಿನ್ನದೇ ವೈಚಿತ್ರ್ಯ
ಕಾಡುತಿದೆ ನಿನ್ನದೇ ವಿಚಿತ್ರ ಸತ್ಯ
ಕಾವಲಿನಲ್ಲೇಕೆ ಈ ಅವಲಕ್ಷಣ
ಕೈದಿಗಳ ಪರಾರಿ ದೊಡ್ಡ ಪ್ರಶ್ನಣ.

ಸೆರೆಮನೆಗಳಿಂದ ಕೈದಿಗಳು ತಪ್ಪಿಸಿಕೊಳ್ಳುವ ಘಟನೆಗಳು ಇಂದು ಸರ್ವಸಾ ಮಾನ್ಯವಾಗುತ್ತಿರುವುದು ಆತಂಕದ ಸಂಗತಿ. ಬೃಹತ್ ಕಟ್ಟಡಗಳು, ಕಠಿಣ ನಿಯಮಗಳು, ಕಾವಲುಗಾರರ ವ್ಯವಸ್ಥೆ ಇದ್ದರೂ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಜನರ ನಂಬಿಕೆಗೆ ಧಕ್ಕೆ ತಂದಿದೆ.ಭದ್ರತಾ ವ್ಯವಸ್ಥೆ ಯಲ್ಲಿನ ಲೋಪವೇ ಕಾರಣವೋ, ನಿರ್ಲಕ್ಷ್ಯವೇ ಕಾರಣವೋ ಎಂಬ ಪ್ರಶ್ನೆಗಳು ಜನಸಾಮಾನ್ಯರ ಮನದಲ್ಲಿ ಮೂಡುತ್ತಿವೆ. ಪ್ರಶ್ನೆಗಳ ಸರಮಾಲೆ ಮುಂದುವರಿದರೂ ಸ್ಪಷ್ಟ ಪರಿಹಾರ ಮಾತ್ರ ಕಾಣುತ್ತಿಲ್ಲ.

ಕೈದಿಗಳ ಪರಾರಿಯ ಘಟನೆಗಳು ಕೇವಲ ಒಂದು ತಪ್ಪಿನ ಕಥೆಯಲ್ಲ, ಅದು ವ್ಯವಸ್ಥೆಯ ಕಾರ್ಯವೈಖರಿಯನ್ನು ಪ್ರಶ್ನಿಸುವ ಸಂಗತಿಯಾಗಿದೆ. ಇಂತಹ ಘಟನೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಆಡಳಿತದ ಮೇಲಿದೆ. ಕಲಬುರಗಿ ಸೆರೆಮನೆಯಿಂದ ಕೈದಿಗಳ ಪರಾರಿ ಘಟನೆ ಕೇವಲ ಭದ್ರತಾ ವೈಫಲ್ಯವಲ್ಲಷ್ಟೇ ಅಲ್ಲ. ಇದು ಆಡಳಿತದ ಜಾಗೃತಿ, ಕರ್ತವ್ಯನಿಷ್ಠೆ ಮತ್ತು ವ್ಯವಸ್ಥೆಯ ಹೊಣೆಗಾರಿಕೆಯ ಮೇಲಿನ ಗಂಭೀರ ಪ್ರಶ್ನೆಯಾಗಿದೆ. ಕಾನೂನಿನ ಮೇಲಿನ ಜನರ ವಿಶ್ವಾಸ ಉಳಿಯಬೇಕಾದರೆ ಸಂಸ್ಥೆಗಳೊಳಗಿನ ನಿರ್ಲಕ್ಷ್ಯವನ್ನು ತೊಡೆದುಹಾಕಿ, ಜವಾಬ್ದಾರಿಯುತ ಆಡಳಿತವನ್ನು ಬಲಪಡಿಸುವ ಅಗತ್ಯವಿದೆ.

 news_1784303691_4_779.jpg

 

news_1784304431_0_347.jpg

 

ಸೆರೆಮನೆ ಎಂಬುದು ಕೇವಲ ಅಪರಾಧಿಗಳನ್ನು ಬಂಧಿಸುವ ಸ್ಥಳವಲ್ಲ. ಅದು ರಾಜ್ಯದ ಕಾನೂನು ಸಾಮರ್ಥ್ಯ ಮತ್ತು ಆಡಳಿತದ ಶಿಸ್ತನ್ನು ಪ್ರತಿಬಿಂಬಿಸುವ ಪ್ರಮುಖ ಸಂಸ್ಥೆ. ಅಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯೂ ಭದ್ರತೆ, ನಿಯಮ ಪಾಲನೆ ಮತ್ತು ಕರ್ತವ್ಯ ಪ್ರಜ್ಞೆಗೆ ಸಾಕ್ಷಿಯಾಗಿರಬೇಕು. ಆದರೆ ಕಲಬುರಗಿ ಸೆರೆಮನೆಯಿಂದ ಮೂವರು ಕೈದಿಗಳು ಪರಾರಿಯಾದ ಘಟನೆ ಇಡೀ ವ್ಯವಸ್ಥೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಾಗಿದೆ.

ಇಪ್ಪತ್ತೈದು ಅಡಿ ಎತ್ತರದ ಗೋಡೆಯನ್ನು ದಾಟಿ, ಬಟ್ಟೆಗಳನ್ನು ಗಂಟು ಹಾಕಿ ಹಗ್ಗದಂತೆ ಬಳಸಿ ಕೈದಿಗಳು ಹೊರಬಂದಿರುವುದು ಕೇವಲ ಅವರ ಯೋಜನೆ ಯ ಯಶಸ್ಸಲ್ಲ, ಭದ್ರತಾ ವ್ಯವಸ್ಥೆಯಲ್ಲಿನ ಬಿರುಕುಗಳ ಸಂಕೇತವಾಗಿದೆ. ಭದ್ರತೆ ಇರಬೇಕಾದ ಸ್ಥಳದಲ್ಲೇ ಅಭದ್ರತೆ ಕಾಣಿಸಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಕೈದಿಗಳು ತಪ್ಪಿಸಿಕೊಂಡರು ಎಂಬ ಸುದ್ದಿಗಿಂತಲೂ, ಅವರಿಗೆ ತಪ್ಪಿಸಿಕೊಳ್ಳಲು ಅವಕಾಶ ಹೇಗೆ ದೊರೆಯಿತು ಎಂಬ ಪ್ರಶ್ನೆ ಹೆಚ್ಚು ಮುಖ್ಯವಾಗಿದೆ. ಅವರ ಚಲನವಲನದ ಮೇಲೆ ನಿಗಾ ಏಕೆ ಇರಲಿಲ್ಲ? ಭದ್ರತಾ ಕ್ರಮಗಳಲ್ಲಿ ಯಾವ ಹಂತದಲ್ಲಿ ಲೋಪ ಉಂಟಾಯಿತು? ಕರ್ತವ್ಯದಲ್ಲಿದ್ದವರು ತಮ್ಮ ಜವಾಬ್ದಾರಿ ಯನ್ನು ಎಷ್ಟು ಪ್ರಾಮಾಣಿಕವಾಗಿ ನಿರ್ವಹಿಸಿದರು? ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರೆಯಬೇಕಾಗಿದೆ.

ವ್ಯವಸ್ಥೆಯ ವೈಫಲ್ಯ ಎಂದರೆ ಅದು ಒಬ್ಬ ವ್ಯಕ್ತಿಯ ತಪ್ಪಿನಿಂದ ಮಾತ್ರ ಉಂಟಾಗುವುದಿಲ್ಲ. ಮೇಲ್ವಿಚಾರಣೆಯ ಕೊರತೆ, ನಿಯಮಗಳ ಸಡಿಲ ಅನುಸರಣೆ, ನಿರ್ಲಕ್ಷ್ಯ ಮತ್ತು ಆಡಳಿತಾತ್ಮಕ ಅಸಡ್ಡೆಗಳು ಒಂದಕ್ಕೊಂದು ಸೇರಿಕೊಂಡಾಗ ಇಂತಹ ಘಟನೆಗಳು ಸಂಭವಿಸುತ್ತವೆ. ತಪ್ಪಿಸಿಕೊಂಡ ಕೈದಿಗಳನ್ನು ಬಂಧಿಸುವುದು ಅಗತ್ಯವಾದ ಕ್ರಮ. ಆದರೆ ಅವರು ತಪ್ಪಿಸಿಕೊ ಳ್ಳಲು ಕಾರಣವಾದ ದೌರ್ಬಲ್ಯಗಳನ್ನು ಗುರುತಿಸಿ ಸರಿಪಡಿಸುವುದು ಅದಕ್ಕಿಂತಲೂ ಮುಖ್ಯ.

ಕಾನೂನಿನ ಶಕ್ತಿ ಜನರ ವಿಶ್ವಾಸದ ಮೇಲೆ ನಿಂತಿದೆ. ಆ ವಿಶ್ವಾಸವನ್ನು ಕಾಪಾಡು ವ ಹೊಣೆಗಾರಿಕೆ ಸರ್ಕಾರದ ಸಂಸ್ಥೆಗಳ ಮೇಲಿದೆ. ಸೆರೆಮನೆಯಂ ತಹ ವ್ಯವಸ್ಥೆ ಯಲ್ಲಿ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅಪಾಯಕ್ಕೆ ಕಾರಣವಾಗಬಹುದು.ಎತ್ತರದ

ಗೋಡೆಗಳು, ಬಲವಾದ ಬಾಗಿಲುಗಳು ಮತ್ತು ಭದ್ರತಾ ಸಾಧನಗಳು ಮಾತ್ರ ಸಾಕಾಗುವುದಿಲ್ಲ. ಅವುಗಳನ್ನು ನಿರ್ವಹಿಸುವವರ ಜಾಗೃತಿ, ಪ್ರಾಮಾಣಿಕತೆ ಮತ್ತು ಕರ್ತವ್ಯ ಪ್ರಜ್ಞೆಯೇ ನಿಜವಾದ ಭದ್ರತೆಯ ಅಡಿಪಾಯ.

ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ವ್ಯವಸ್ಥೆಯಲ್ಲಿ ಶಾಶ್ವತ ಬದಲಾವ ಣೆ ಕಾಣಿಸದಿರುವುದು ಚಿಂತೆಯ ವಿಷಯವಾಗಿದೆ. ತಾತ್ಕಾಲಿಕವಾಗಿ ಅಧಿಕಾರಿ ಗಳನ್ನು ಅಮಾನತು ಮಾಡುವುದರಿಂದ ಮಾತ್ರ ಸಮಸ್ಯೆ  ಪರಿಹಾರವಾಗು

ವುದಿಲ್ಲ. ಸೆರೆಮನೆಗಳ ಭದ್ರತಾ ವ್ಯವಸ್ಥೆಯ ಸಂಪೂರ್ಣ ಪರಿಶೀಲನೆ, ಸಿಬ್ಬಂದಿ ಯ ಹೊಣೆಗಾರಿಕೆಯ ಸ್ಪಷ್ಟ ನಿಗದಿ ಮತ್ತು ತಾಂತ್ರಿಕ ನಿಗಾ ವ್ಯವಸ್ಥೆಯ ಬಲಪಡಿಸುವಿಕೆ ಅಗತ್ಯವಾಗಿದೆ.

ಸಮಾಜದ ರಕ್ಷಣೆಗೆ ನಿರ್ಮಿಸಲಾದ ಸಂಸ್ಥೆಗಳು ತಮ್ಮ ಮೂಲ ಉದ್ದೇಶದಿಂದ ದೂರವಾದರೆ ಅದರ ಪರಿಣಾಮ ಸಾಮಾನ್ಯ ಜನರ ಮೇಲೆ ಬೀಳುತ್ತದೆ. ಕಾನೂನು ಪಾಲಿಸುವ ನಾಗರಿಕನು  ತನ್ನ ಸುರಕ್ಷತೆಗಾಗಿ ರಾಜ್ಯವನ್ನು ನಂಬು ತ್ತಾನೆ. ಆ ನಂಬಿಕೆಗೆ ಧಕ್ಕೆ ತರುವ ಪ್ರತಿಯೊಂದು ಘಟನೆ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆಯೇ ಪ್ರಶ್ನೆ ಎತ್ತುತ್ತದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಇಂತಹ ಘಟನೆಗಳು ಅಪರಾಧ ಜಗತ್ತಿಗೆ ತಪ್ಪು ಸಂದೇಶ ನೀಡಬಾರದು. ಕಾನೂನಿನ ಹಿಡಿತದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಭಾವನೆ ಸಮಾಜದಲ್ಲಿ ಇರಬೇಕು. ಕಾನೂನಿನ ಭಯ ಕಡಿಮೆಯಾದರೆ ಅಪರಾಧ ಪ್ರವೃತ್ತಿಗೆ ಉತ್ತೇಜನ ಸಿಗುವ ಸಾಧ್ಯತೆ ಇದೆ.

ಆಡಳಿತ ಎನ್ನುವುದು ಕೇವಲ ಅಧಿಕಾರದ ಸ್ಥಾನವಲ್ಲ, ಅದು ಜನರ ವಿಶ್ವಾಸದ ಹೊಣೆ. ತಪ್ಪು ಮಾಡಿದವರನ್ನು ರಕ್ಷಿಸುವ ಮನೋಭಾವಕ್ಕಿಂತ ತಪ್ಪನ್ನು  ಒಪ್ಪಿ ಕೊಂಡು ಸರಿಪಡಿಸುವ ಧೈರ್ಯವೇ ಉತ್ತಮ ಆಡಳಿತದ ಲಕ್ಷಣವಾಗಿದೆ. ವ್ಯವಸ್ಥೆಯೊಳಗಿನ ದೌರ್ಬಲ್ಯಗಳನ್ನು ಮುಚ್ಚಿಡದೆ, ಅವುಗಳನ್ನು ಗುರುತಿಸಿ ಪರಿಹರಿಸುವುದು ಅಗತ್ಯ.

ಕಲಬುರಗಿ ಸೆರೆಮನೆಯ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ಇದು ಕೇವಲ ಮೂವರು ಕೈದಿಗಳ ಪರಾರಿ ಪ್ರಕರಣವಲ್ಲ. ಇದು ವ್ಯವಸ್ಥೆಯ ಕಾವಲು, ಕರ್ತವ್ಯ ಪ್ರಜ್ಞೆ ಮತ್ತು ಆಡಳಿತದ ಜಾಗೃತಿಯ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ವ್ಯವಸ್ಥೆ ತನ್ನನ್ನು ತಾನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಬಂದಿದೆ.

ಜಾಗೃತಿಯ ಮಾತೊಂದು :ಕಾನೂನಿನ ಕೋಟೆಯನ್ನು ಕಾಪಾಡುವವರು ಎಚ್ಚರ ಕಳೆದುಕೊಂಡರೆ, ಎತ್ತರದ ಗೋಡೆಗಳಿಗೂ ಅರ್ಥ ಉಳಿಯುವುದಿಲ್ಲ. ಬೇಲಿಯೇ ಎದ್ದು ಹೊಲ ಮೇಯ್ದರೆ ಬೆಳೆ ಉಳಿಯದು ಎಂಬ ಗಾದೆಯಂತೆ, ಕಾವಲು ವ್ಯವಸ್ಥೆಯಲ್ಲಿನ ಬಿರುಕುಗಳನ್ನು ಮುಚ್ಚುವುದು ಅತ್ಯಗತ್ಯ. ಜನರ ವಿಶ್ವಾಸ ಉಳಿಯಬೇಕಾದರೆ ಆಡಳಿತವು ಪಾರದರ್ಶಕತೆ, ಜವಾಬ್ದಾರಿ ಮತ್ತು ನಿರಂತರ ಜಾಗೃತಿಯೊಂದಿಗೆ ಕಾರ್ಯನಿರ್ವಹಿಸಬೇಕು. ಬಲಿಷ್ಠ ವ್ಯವಸ್ಥೆ ಎಂದರೆ ಕೇವಲ ಕಟ್ಟಡಗಳಲ್ಲ, ಅದು ಕರ್ತವ್ಯನಿಷ್ಠ ಮನಸ್ಸುಗಳ ಪ್ರತಿಬಿಂಬವಾಗಿದೆ ಎಂಬುದನ್ನು ಜಗಜ್ಜಾಹೀರಾಗಿಸುತ್ತದೆ.
ಲೇಖನ: ಲೇಖನ:ಕಾಶಿಗೌ, ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲರು, ಮೈಸೂರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು