Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗತ್ತು ಸಾಕು – ವಿನಯ ಬೇಕು

Advertisement
Advertisement

ಗತ್ತು ಸಾಕು ವಿನಯ ಬೇಕು
ಬಾಗಿದ ಮರವೇ ಫಲವ ಕೊಡು
ತಲೆಯ ಬಾಗಿಸಿದವ ಕೀರ್ತಿ ಪಡೆ
ಗರ್ವದ ಬೆಂಕಿಯ ಸುಟ್ಟು ಬಿಡು
ವಿನಯದ ನೀರು ತಂಪು ಕೊಡು.

ಗರ್ವ ಬೆಳೆದರೆ ಬಲು ಗತಿ ಕೇಡು
ವಿನಯ ಬೆಳೆದರೆ ಕೀರ್ತಿ ನೋಡು
ಅಹಂಕಾರವು ಕೆಟ್ಟ  ಅಂಧಕಾರ
ವಿನಯವೇ ಬದುಕಿನ ಅಲಂಕಾರ.

ನದಿಯು ಹರಿಯುತ್ತದೆ ಸದ್ದು ಇಲ್ಲ
ಸೂರ್ಯ ಬೆಳಗುತನವ ಗರ್ವವಿಲ್ಲ
ಮರವು ಕೊಡುತ ನೆರಳನು ನಿತ್ಯ
ಪ್ರಕೃತಿ ಹೇಳುತ ವಿನಯವೇ ಸತ್ಯ.

ತಿಳಿದುದೆಂದು ನೀನು ಬೀಗಬೇಡ
ತಿಳಿಯದು ಬಹಳ ಮರೆತಬೇಡ
ಕೇಳಿ ಕಲಿಯುವ ಶುದ್ದ ಮನವಿದ್ದರೆ
ಜ್ಞಾನದ ಬಾಗಿಲು ತೆರೆದುಕೊಳ್ಳುವದೆ.

ಗತ್ತು ಸಾಕು ನಿನ್ನ ಗರ್ವವು ಸಾಕು
ವಿನಯವೇ ಮನುಜನ ಆಸ್ತಿ ಸಾಕು
ಕಲಿಯು ನಿತ್ಯವು ಬೆಳೆಯು ನಿತ್ಯ
ವಿನಯವೇ ಬದುಕಿನ ಪರಮ ಸತ್ಯ.

ಗರ್ವವೂ ಗಾಳಿಯ ಗುಳ್ಳೆಯಂತೆ
ವಿನಯ ಭೂಮಿಯ ಬೇರಿನಂತೆ
ತಲೆಯ ಬಾಗಿದವ ಎತ್ತರ ಬೆಳೆವ
ಲೋಕದ ಮನದಿ ಚಿರಕಾಲ ಉಳಿವ.
ಕವಿತೆ: ಕೆ.ಎಸ್.ಸ್ಮಿತಾ ರಂಜೀತ್ ಗೌಡ,
ಎಂಎಸ್ಸಿ ಬಿಇಡಿ, ಆರ್ಮಿ ಕ್ಯಾಂಪಸ್ ಪಠಣಕೋಟ್
,
ಪಂಜಾಬ್ ಪ್ರಾಂತ್ಯ ಇಂಡಿಯಾ .

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.